ಡೀಸೆಲ್, ಸೇರಿದಂತೆ ನಿತ್ಯೋಪಯೋಗಿ ವಸ್ತುಗಳ ಬೆಲೆ ಏರಿಕೆ ಖಂಡಿಸಿ ಪ್ರತಿಭಟನೆ

Protest against price hike of daily necessities including diesel

ಡೀಸೆಲ್, ಸೇರಿದಂತೆ ನಿತ್ಯೋಪಯೋಗಿ ವಸ್ತುಗಳ ಬೆಲೆ ಏರಿಕೆ ಖಂಡಿಸಿ ಪ್ರತಿಭಟನೆ 

ಯರಗಟ್ಟಿ, 05 : ಡೀಸೆಲ್ ಬೆಲೆ ಸೇರಿದಂತೆ ನಿತ್ಯೋಪಯೋಗಿ ವಸ್ತುಗಳ ಬೆಲೆ ಏರಿಕೆ ಮಾಡಿದ ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಕಾರ್ಯಕರ್ತರು ಇಲ್ಲಿನ ಸಂಗೋಳ್ಳಿ ರಾಯಣ್ಣ ವೃತ್ತದಲ್ಲಿ ಮುಖ್ಯ ಶನಿವಾರ ಪ್ರತಿಭಟನೆ ನಡೆಸಿದರು. 

ಸವದತ್ತಿ ಮಾಜಿ ಮಂಡಳ ಅಧ್ಯಕ್ಷ ಈರಣ್ಣಾ ಚಂದರಗಿ ಮಾತನಾಡಿ, ರಾಜ್ಯ ಕಾಂಗ್ರೆಸ್ ಸರ್ಕಾರ ನಿರಂತರ ಬೆಲೆ ಏರಿಕೆ ಮಾಡುವ ಮೂಲಕ ಜನವಿರೋಧಿ ನೀತಿ ಅನುಸರಿಸುತ್ತಿದೆ. ಸರ್ಕಾರದ ನಿರ್ಧಾರಗಳಿಂದ ಜನಸಾಮಾನ್ಯರು ಜೀವನ ನಡೆಸುವುದು ಕಷ್ಟವಾಗಿದೆ ಎಂದು ದೂರಿದರು. 

ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಕೆ ಮಾಡಲು ಸರ್ಕಾರ ನಿತ್ಯೋಪಯೋಗಿ ವಸ್ತುಗಳ ಬೆಲೆ ಏರಿಕೆ ಮಾಡುತ್ತಿದೆ. ಜನರಿಗೆ ಗ್ಯಾರಂಟಿ ಯೋಜನೆಗಳನ್ನು ನೀಡುವ ನೆಪದಲ್ಲಿ ಅವರ ಜೀವನಕ್ಕೆ ಬರೆ ಹಾಕುತ್ತಿದೆ ಎಂದು ಆರೋಪಿಸಿದರು. 

ರಾಜ್ಯಸಭೆ ಹಾಗೂ ಲೋಕಸಭೆಯಲ್ಲಿ ವಕ್ಷ ಕಾಯ್ದೆ ಮಂಡನೆಯಾಗಿದ್ದಕ್ಕೆ ಬಿಜೆಪಿ ಕಾರ್ಯಕರ್ತರು ಇದೇ ಸಂದರ್ಭದಲ್ಲಿ ವಿಜಯೋತ್ಸವ ನಡೆಸಿದರು.  

ಜಿಲ್ಲಾ ಕಾರ್ಯದರ್ಶಿ ಚಂದ್ರಶೇಖರ ಅಳಗೋಡಿ, ಗ್ರಾಮಾಂತರ ಜಿಲ್ಲಾ ಮಹಿಳಾ ಮೋರ್ಚಾ ಉಪಾಧ್ಯಕ್ಷೆ ಶಾಲಿನಿ ಈಳಿಗೇರ, ಕುಮಾರ ಹಿರೇಮಠ, ಕುಮಾರ ಜಕಾತಿ, ಸದಾನಂದ ಪಾಟೀಲ, ಕೃಷ್ಣಾ ತೋರಗಲ್, ಮಹಾದೇವ ಯಡ್ರಾಂವಿ, ಮಹಾದೇವ ಮುರಗೋಡ, , ರವಿಕಿರಣ ಪಾಟೀಲ, ಗೌಡಪ್ಪ ಸವದತ್ತಿ, ಮಹಾಂತೇಶ ಕಾಶನ್ನವರ, ಶೇಖಪ್ಪ ಹರಳಿ, ಸುನೀಲ ಬೆಲ್ಲದ, ಕರೆಪ್ಪ ಪೂಜೇರ, ಮೈತ್ರಾ ಹೊಂಗಲ, ಆನಂದ ಬಾಗೋಡಿ, ಸುರೇಶ ಬಂಟನೂರ, ಶಂಕರ ದಂಡಿನ್ನವರ, ಸಿದ್ದು ಶಿವಬಸನ್ನವರ, ಈರ​‍್ಪಗೌಡ ಪಾಟೀಲ, ಲಕ್ಕಪ್ಪ ಜಗದಾರ ಸೇರಿದಂತೆ ಇತರರು ಪಾಲ್ಗೊಂಡಿದ್ದರು.