ರಾಣೇಬೆನ್ನೂರು 17 : ನಗರದ ಶಿಶು ಯೋಜನಾ ಅಭಿವೃದ್ಧಿ ಅಧಿಕಾರಿಗಳು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ತಾಲೂಕ ಹುಲಿಕಟ್ಟಿ ಗ್ರಾಮದ 1ನೇ ಅಂಗನವಾಡಿ ಶಾಲೆ ಕಟ್ಟಡ ಪ್ರಾರಂಭಿಸಲು ವಿವಿಧ ಸಂಘಟನೆಗಳಿಂದ ಮನವಿ ನೀಡಲಾಯಿತು.ತಾಲೂಕ ಅಧ್ಯಕ್ಷರಾದ ಚಂದ್ರ್ಪ ಬಣಕಾರ ಮಾತನಾಡಿ, ತಾಲೂಕಿನ ಹುಲಿಕಟ್ಟಿ ಗ್ರಾಮದಲ್ಲಿ ಒಂದನೇ ಅಂಗನವಾಡಿ ಶಾಲೆ ಕಟ್ಟಡ ಬಿದ್ದು ಮೂರು ವರ್ಷಗಳಾಗಿವೆ. ಅಂಗನವಾಡಿ ಶಾಲೆ ಕಟ್ಟಡ ಕಟ್ಟಲು ಸರ್ಕಾರದಿಂದ ಮಂಜೂರಾಗಿ ಎರಡು ವರ್ಷವಾದರೂ ಅಂಗನವಾಡಿ ಶಾಲೆ ಕಟ್ಟುತ್ತಿಲ್ಲ. ಯಾಕೆ ಎನ್ನುವದೇ ಗೊತ್ತಾಗದಂತ್ತಾಗಿದೆ. ಕೇಳಿದರೆ ಇಂದು ಕಟ್ಟುತ್ತೇವೆ. ನಾಳೆ ಕಟ್ಟುತ್ತೇವೆ. ಫೈಲ್ ಜಿಲ್ಲಾ ಪಂಚಾಯಿತಿ ಆಫೀಸ್ ನಲ್ಲಿ ಇದೆ. ತಾಲೂಕ್ ಪಂಚಾಯಿತಿ ಆಫೀಸಿನಲ್ಲಿ ಇದೆ. ನಮ್ಮ ಪಂಚಾಯಿತಿ ಮೀಟಿಂಗ್ ನಲ್ಲಿ ಟರಾವ್ ಆಗಿದೆ. ಕಟ್ಟಡ ಕಟ್ಟಲು ಯಾರು ಮುಂದೆ ಬರುತ್ತಿಲ್ಲ. ಇನ್ನೂ ಸಲ್ಪ ದಿನದಲ್ಲಿ ಕೆಲಸ ಪ್ರಾರಂಭ ಮಾಡುತ್ತೇವೆ ಎಂದು ಹಾರಿಕೆ ಉತ್ತರ ಅಧಿಕಾರಿಗಳು ಕೊಡುತ್ತಿದ್ದಾರೆ. ಊರಿನ ಗ್ರಾಮಸ್ಥರು ಅಂತೂ ಇದರ ಬಗ್ಗೆ ಕೇಳಿಕೇಳಿ ಸಾಕಾಗಿ ಹೋಗಿದೆ. ಇದರಿಂದ ಅಂಗನವಾಡಿ ಶಾಲೆಯ ಮಕ್ಕಳು ಎರಡು ವರ್ಷದಿಂದ ಬಾಡಿಗೆ ಕಟ್ಟಡದಲ್ಲಿ ಶಾಲೆ ಕಲಿಯುತ್ತಿವೆ. ಬಾಡಿಗೆ ಕಟ್ಟುವದರಿಂದ ಸರ್ಕಾರಕ್ಕೆ ಆರ್ಥಿಕ ನಷ್ಟವಾಗುತ್ತಿದೆ. ಇದರ ಬಗ್ಗೆ ಸರ್ಕಾರ ಯಾವದೇ ರೀತಿ ವಿಚಾರ ಮಾಡುತ್ತಿಲ್ಲ. ಅಂಗನವಾಡಿ ಶಾಲೆ ರಸ್ತೆ ಬದಿ ಇರುವದರಿಂದ ಮಕ್ಕಳು ತಮ್ಮ ಜೀವವನ್ನು ಭಯದಲ್ಲಿ ಇಟ್ಟುಕೊಂಡು ಶಾಲೆ ಕಲಿಯುವ ಸ್ಥಿತಿ ನಿರ್ಮಾಣವಾಗಿದೆ. ಆದ್ದರಿಂದ ಆದಷ್ಟು ಬೇಗನೆ ಕಟ್ಟಡ ಪ್ರಾರಂಭಿಸಿ ಶಾಲೆಯ ಮಕ್ಕಳಿಗೆ ಶಾಲೆ ಕಲಿಯಲು ಅನುಕೂಲ ಮಾಡಿಕೊಡಬೇಕು ಎಂದರು. ನಮ್ಮ ಮನವಿಗೆ ಸ್ಪಂದಿಸದೆ ಇದ್ದರೆ ತೆಗೆದುಕೊಂಡು ಯಾವದೇ ರೀತಿ ಕ್ರಮ ತೆಗೆದುಕೊಳ್ಳದೆಯಿದ್ದರೆ ಮುಂದಿನ ದಿನಮಾನಗಳಲ್ಲಿ ತಮ್ಮ ಕಚೇರಿಯ ಮುಂದೆ ಕುಳಿತು ಉಗ್ರವಾದ ಹೋರಾಟ ಮಾಡಲಾಗುವುದು. ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ರಾಜ್ಯ ಸಂಚಾಲಕ ಮಲ್ಲಿಕಾರ್ಜುನ ಸಾವಕ್ಕಳವರ, ಕೊಟ್ರೇಶಪ್ಪ ಎಮ್ಮಿ, ಸಿದ್ದರೋಡ ಗುರುಂ, ಶ್ರೀಧರ್ ಛಲವಾದಿ, ಪರಶುರಾಮ ಕುರುವತ್ತಿ, ಮರಡೆಪ್ಪ ಚಳಗೇರಿ, ಶೋಭಾ ಮುದೇನೂರು, ಹನುಮಂತಗೌಡ ಗೌಡ್ರ ಮತ್ತಿತರರು ಉಪಸ್ಥಿತರಿದ್ದರು.