ಮಳೆಗಾಲದಲ್ಲಿ ಡೆಂಘೀ ಬರದಂತೆ ಸಾರ್ವಜನಿಕರು ಆರೋಗ್ಯ ಇಲಾಖೆಯ ಜೊತೆ ಕೈಜೋಡಿಸಿ: ಸಿದ್ದಪ್ಪ ಲಿಂಗದಾಳ

Public should join hands with the health department to prevent dengue during the rainy season: Sidda

ಗದಗ 17: ಜೂನ್ ಜುಲೈ ಅಗಷ್ಟ್‌ ತಿಂಗಳಲ್ಲಿ ಮಳೆಗಾಲ ಇರುವುದರಿಂದ ಸೊಳ್ಳೆಗಳು ಹೆಚ್ಚು ಉತ್ಪತ್ತಿಯಾಗುತ್ತವೇ ತಾಂಡೆಯಲ್ಲಿ ಯಾವುದೇ ಡೆಂಘೀ ಜ್ವರ ಪ್ರಕರಣಗಳು ಬರದಂತೆ ತಡೆಯಲು,ಮುಂಜಾಗ್ರತವಾಗಿ ಲಾರಾ​‍್ವ ನಿಯಂತ್ರಣ ಮಾಡಬೇಕಾಗಿದೆ ಪ್ರತಿಯೊಬ್ಬರು ನಿಮ್ಮ ಮನೆಯ ನೀರಿನ ಪರಿಕರಗಳನ್ನು ಮುಚ್ಚಿಡಬೇಕು ಲಾರಾ​‍್ವ ನಾಶಪಡಿಸಬೇಕು ಮತ್ತು ಈಡೀಸ್ ಇಜಿಪ್ಟೈ ಸೋಳ್ಳೆಗಳು ಕಚ್ಚದಂತೆ ಸೊಳ್ಳೆಯ ಪರದಿಯನ್ನು ಉಪಯೋಗಿಸಿರಿ ಮತ್ತು ಟಾಯರ್ ,ಬ್ಯಾರಲ್, ಟೆಂಗೀನ ಚಿಪ್ಪು ಎಳ್ಳೀರಿನ ಕಾಯಿ ಸೊಳ್ಳೆಗಳ ಉತ್ಪತ್ತಿಗೆ ನೀರು ಸಿಗದಂತೆ ನೋಡಿಕೊಳ್ಳಬೇಕು ತಗ್ಗು ಪ್ರದೇಶದಲ್ಲಿ ನಿಂತ ನೀರಿಗೆ ಸುಟ್ಟ ಆಯಿಲ್‌ನ್ನು ಹಾಕಬೇಕು ಸಾರ್ವಜನಿಕರು 3 ತಿಂಗಳುಗಳಕಾಲ ಆರೋಗ್ಯ ಇಲಾಕೆಗೆ ಕೈಜೊಡಿಸಿ ಸಹಕಾರ ಮಾಡಬೇಕೆಂದು ಅಡವಿಸೋಮಾಪೂರ ಆಯುಷ್ಮಾನ ಆರೋಗ್ಯ ಮಂದಿರ ಆರೋಗ್ಯ ನೀರೀಕ್ಷಣಾಧಿಕಾರಿಗಳಾದ ಸಿದ್ದಪ್ಪ ಎನ್ ಲಿಂಗದಾಳ ಹೇಳಿದರು 

ಅವರು  ಜಿಲ್ಲಾಡಳಿತ. ಜಿಲ್ಲಾ ಪಂಚಾಯತ. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ.  ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ವಿಭಾಗ  ಗದಗ ತಾಲೂಕಾ ಆರೋಗ್ಯಾಧಿಕಾರಿಗಳ ಕಾರ್ಯಾಲಯ, ಗದಗ ಪ್ರಾಥಮಿಕ ಆರೋಗ್ಯ ಕೇಂದ್ರ ಲಕ್ಕುಂಡಿ ಮತ್ತು ಅಡವಿಸೋಮಾಪೂರ ಆಯುಷ್ಮಾನ ಆರೋಗ್ಯ ಮಂದಿರದಿಂದ ಪಾಪನಾಶಿಯ ತಾಂಡೆಯಲ್ಲಿ ಏರಿ​‍್ಡಸಲಾಗಿದ್ದ ವಿಶ್ವ ಡೆಂಗು  ದಿನಾಚರಣೆ ಜನಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿತಾಂಡೆಗಳಲ್ಲಿನ ಜನರು ಗೋವಾ ಮತ್ತು ಮಂಗಳೂರಿಗೆ ಹೋಗಿ ಬಂದಾಗ ಕಡ್ಡಾಯವಾಗಿ ರಕ್ತಪರೀಕ್ಷೆ ಮಾಡಿಕೋಳ್ಳಬೇಕು ಮತ್ತು ತಾಂಡೆಯಲ್ಲಿ ಯಾವುದೇ ಜ್ವರ ಕಂಡು ಬರದ ಹಾಗೆ ಆರೋಗ್ಯ ಇಲಾಖೆಯ ಜೊತೆಗೆ ಕೈಜೊಡಿಸಬೇಕು ಡಂಗ್ಯೂ ಜ್ವರಕ್ಕೆ ಭಯಬೇಡ ಆದರೆ ಆರೋಗ್ಯ ಜಾಗೃತಿಯಿಂದ ಇರಬೇಕು ಯಾವುದೇ ಜ್ವರ ಸಮಸ್ಯೆ ಇರಲಿ ನಿರ್ಲಕ್ಷ್ಯ ಬಿಟ್ಟು  ರಕ್ತತಪಾಸಣೆ ಮಾಡಿಸಿರಿ ನಿಮ್ಮ ಮನೆಯಲ್ಲಿ ಲಾರ್ವಾ ಆಗದಂತೆ ನೀರು ಸಂಗ್ರಹದ ಪರಿಕರಗಳನ್ನು ಮುಚ್ಚಿಡಬೇಕು, ಪ್ರತಿದಿನ  ಸಂಜೆ ಬೆವಿನಸೋಪ್ಪಿನ ಹೊಗೆ ಹಾಕುವುದು ಬಹು ಮುಖ್ಯವಾಗಿ ಮಾಡಬೇಕೆಂದು ಹೇಳಿದರು 

ಪ್ರಾಥಮಿಕ ಆರೋಗ್ಯ ಸುರಕ್ಷಣಾಧಿಕಾರಿಗಳಾದ ಸವಿತಾ ಪವಾರ ಮಾತನಾಡಿ ಡೆಂಗ್ಯೂ ಜ್ವರಕ್ಕೆ ನಿರ್ಧಿಷ್ಟವಾದ ಓಷಧಿ ಇರುವುದಿಲ್ಲ ಆದರೆ ರೋಗಲಕ್ಷಣಕ್ಕೆ ತಕ್ಕಂತೆ ಓಷದೋಪಚಾರ ಮಾಡಿ ಗುಣ ಪಡಿಸಲಾಗುವುದು ಜ್ವರ ಬಂದಂತವರು ತಕ್ಷಣ ರಕ್ತತಪಾಸಣೆ ಮಾಡಿಸಿಕೊಳ್ಳಬೇಕು  ತಾಂಡೆಗಳಲ್ಲಿ ಲಾರ್ವಾ ನಾಶಪಡಿಸುವ ಕಾರ್ಯವನ್ನು ಸರಿಯಾಗಿ ಆಶಾ ಕಾರ್ಯಕರ್ತೆಯರುಗಳು ಮಾಡಿ ಸೊಳ್ಳೆಗಳ ನಿಯಂತ್ರಣದಲ್ಲಿ ಪ್ರಮುಖಪಾತ್ರವಹಿಸಬೇಕು ನಿಂತ ನೀರುಗಳಲ್ಲಿ ಸೊಳ್ಳೆಗಳ ಉತ್ಪತ್ತಿಯಾಗದಂತೆ ನೋಡಿಕೊಳ್ಳಬೇಕು ಎಂದು ಹೇಳಿದರು 

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗದಗ ಸಿಎಸ್‌.ಐ ಆಸ್ಪತ್ರೆಯ ಡಾ.ಪ್ರಶಾಂತ ವಹಿಸಿದ್ದರು  

ಕಾರ್ಯಕ್ರಮದಲ್ಲಿ ಸಿಎಸ್‌.ಐ ಆಸ್ಪತ್ರೆಯ ಶಾಮ್ ರಾಮಪ್ಪ ನಾಯಕ  ಮನ್ನಪ್ಪ ಪೂಜಾರ ರಮೇಶ ಪೂಜಾರ ರೇಣುಕಾ ಪುರದ ಮೀನಾಕ್ಷಿ ವಡ್ಡರ ನಾರಾಯಣಪ್ಪ ಪೂಜಾರ ಲಕ್ಷ್ಮೀ ಪೂಜಾರ ಲಲಿತಾ ಅಂಗಡಿ ಸಾವಕ್ಕ ಪೂಜಾರ ಮಂಜುಳಾ ಆರಿ ಉಮಾದೇವಿ ಖಾನಾಪೂರ ತಾಂಡೆಯ ಪ್ರಮುಖರು  ಉಪಸ್ಥಿತರಿದ್ದರು.