ಬೆಳಗಾವಿ 27: ಕ್ವೆಸ್ಟ್ ಗ್ಲೋಬಲ್, ವೈ4ಡಿ ಫೌಂಡೇಷನ್ ಜೊತೆಯಲ್ಲಿ ಆದಿವಾಸಿ ಮತ್ತು ಗ್ರಾಮೀಣ ಯುವತಿಯರಿಗೆ ಕೌಶಲ್ಯ ಆಧರಿತ ಉದ್ಯೋಗಾರ್ಹತೆಯ ಕಾರ್ಯಕ್ರಮದ ಮೂಲಕ ಸಬಲೀಕರಣಕ್ಕೆ ಸಹಯೋಗ
ಕ್ವೆಸ್ಟ್ ಗ್ಲೋಬಲ್, ವೈ4ಡಿ ಫೌಂಡೇಷನ್ ಸಹಯೋಗದಲ್ಲಿ ಆದಿವಾಸಿ ಮತ್ತು ಗ್ರಾಮೀಣ ಮಹಿಳೆಯರಿಗೆ ಸುಸ್ಥಿರ ಭವಿಷ್ಯ ಒದಗಿಸಲು ತನ್ನ ಪ್ರಗತೀಶೀಲಸಿ ಎಸ್.ಆರ್. ಉಪಕ್ರಮವನ್ನು ಪ್ರಾರಂಭಿಸಿದೆ. ಈ ಕಾರ್ಯಕ್ರಮವು ಬೆಳಗಾವಿ ಮತ್ತು ತ್ರಿವೇಂಡ್ರಂನ 200 ಆದಿವಾಸಿ ಮತ್ತು ಗ್ರಾಮೀಣ ಯುವತಿಯರಿಗೆ ಆದ್ಯತೆ ನೀಡಿದ್ದು ಅವರಿಗೆ ಪಿಸಿಬಿ ಅಸೆಂಬ್ಲಿ ಆಪರೇಟರ್ ಗಳಾಗಿ ತರಬೇತಿ ನೀಡುತ್ತಿದ್ದು ಅದು ಎಲ್ರೆಕ್ಟ್ರಾನಿಕ್ಸ್ ಉತ್ಪಾದನಾ ಉದ್ಯಮದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.
ಈ ಕಾರ್ಯಕ್ರಮವು ಭಾರತದ ಗ್ರಾಮೀಣ ಯುವತಿಯರಲ್ಲಿ ನಿರುದ್ಯೋಗ ಸಂಬಂಧಿತ ಬಹಳ ಕಾಲದ ಸಮಸ್ಯೆಗಳನ್ನು ಹೆಚ್ಚಿನ ಪ್ರಮಾಣದ ನೇಮಕದ ಪ್ರಮಾಣಗಳನ್ನು ಹೊಂದಿರುವ ಸಮಗ್ರವಾದ ವಸತಿ ತರಬೇತಿ ಕಾರ್ಯಕ್ರಮದ ಮೂಲಕ ನಿವಾರಿಸಲು ಶ್ರಮಿಸುತ್ತದೆ. ಪಠ್ಯಕ್ರಮವನ್ನು ರಾಷ್ಟ್ರೀಯ ಕೌಶಲ್ಯಾಭಿವೃದ್ಧಿ ಮಂಡಳಿ (ಎನ್.ಎಸ್.ಡಿ.ಸಿ.) ಪ್ರಮಾಣೀಕರಿಸಿದ್ದು ಇದನ್ನು ಉದ್ಯಮದ ಇತ್ತೀಚಿನ ಬೇಡಿಕೆಗಳ ಅನ್ವಯ ರೂಪಿಸಲಾಗಿದ್ದು ಅದು ಟ್ರೈನೀಗಳನ್ನು ಪಿಸಿಬಿ ಅಸೆಂಬ್ಲಿ ಆಪರೇಟರ್ ಗಳಾಗಿ ನಿರ್ದಿಷ್ಟ ಕ್ಷೇತ್ರದ ಅರಿವು ಮೂಡಿಸುತ್ತದೆ, ಇದರೊಂದಿಗೆ ಮೃದು ಕೌಶಲ್ಯಗಳು, ಜೀವನ ಕೌಶಲ್ಯಗಳು, ಡಿಜಿಟಲ್ ಮತ್ತು ಹಣಕಾಸು ಸಾಕ್ಷರತೆಯಲ್ಲಿ ತರಬೇತಿ ಒಳಗೊಂಡಿರುತ್ತದೆ.
ಹಣಕಾಸು ತರಬೇತಿಯೊಂದಿಗೆ ಈ ಕಾರ್ಯಕ್ರಮವು ನೇಮಕಾತಿ ನಂತರದ ಬೆಂಬಲವನ್ನೂ ನೀಡುತ್ತಿದ್ದು ಉದ್ಯೋಗ ಭದ್ರತೆ, ಉದ್ಯೋಗ ಸ್ಥಳದ ಅಳವಡಿಸಿಕೊಳ್ಳಬಲ್ಲತೆ ಮತ್ತು ಭಾಗವಹಿಸುವವರು/ಟ್ರೈನೀಗಳಿಗೆ ದೀರ್ಘಾವಧಿ ಉದ್ಯೋಗ ಸುಸ್ಥಿರತೆಗೆ ಅಪ್ರೆಂಟಸ್ ಕಾನೂನು ರಕ್ಷಣೆಯನ್ನೂ ಹೊಂದಿರುತ್ತದೆ. ಮಹಿಳೆಯರು ಮಾರ್ಗದರ್ಶನ, ಹಣಕಾಸು ಸಾಕ್ಷರತೆಯ ಕಾರ್ಯಾಗಾರಗಳು ಮತ್ತು ಉದ್ಯೋಗದಾತರೊಂದಿಗೆ ನಿಯಮಿತ ಚೆಕ್-ಇನ್ ಗಳನ್ನು ಹೊಂದಿದ್ದು ಉದ್ಯೋಗಪಡೆಗೆ ಸರಾಗ ಪರಿವರ್ತನೆ ಸಾಧ್ಯವಾಗಿಸುತ್ತದೆ. ಈ ಅಪ್ರೆಂಟಿಸ್ ಕಾನೂನು ರಕ್ಷಣೆಯು ಈ ಮಹಿಳೆಯರಿಗೆ ಅಗತ್ಯವಾದ ಕಾನೂನು ರಕ್ಷಣೆಗಳನ್ನು ನೀಡುತ್ತದೆ ಮತ್ತು ನ್ಯಾಯಯುತ ಕಾನೂನು ರೂಢಿಗಳನ್ನು ದೃಢೀಕರಿಸುತ್ತದೆ.
“ಕ್ವೆಸ್ಟ್ ಗ್ಲೋಬಲ್ ನಲ್ಲಿ ಸಮಾಜದ ಮೇಲೆ ಸಕಾರಾತ್ಮಕ ಪರಿಣಾಮ ಸೃಷ್ಟಿಸುವುದು ಮತ್ತು ಮಹಿಳೆಯರನ್ನು ಅವರ ಪೂರ್ಣ ಸಾಮರ್ಥ್ಯ ಕಂಡುಕೊಳ್ಳಲು ಸಬಲೀಕರಿಸುವುದರಲ್ಲಿ ನಂಬಿಕೆ ಇರಿಸಿದ್ದೇವೆ” ಎಂದು ಕ್ವೆಸ್ಟ್ ಗ್ಲೋಬಲ್ ನ ಗ್ಲೋಬಲ್ ಹೆಡ್ ಆಫ್ ಬ್ರಾಂಡ್ ಚೆರಿಲ್ ರೊಡ್ನೆಸ್ ಹೇಳಿದರು. “ವೈ4ಡಿ ಫೌಂಡೇಷನ್ ಜೊತೆಯಲ್ಲಿ ಈ ಸಹಯೋಗವು ನಮಗೆ ನೇರವಾಗಿ ಕೌಶಲ್ಯಗಳ ಅಂತರವನ್ನು ನಿವಾರಿಸಲು ಮತ್ತು ದುರ್ಬಲ ವರ್ಗದ ಮಹಿಳೆಯರಿಗೆ ಸುಸ್ಥಿರ ಜೀವನೋಪಾಯಗಳನ್ನು ಪಡೆಯುವ ಸಾಧನಗಳೊಂದಿಗೆ ಸನ್ನದ್ಧವಾಗಿಸುತ್ತದೆ ಮತ್ತು ಅವರ ಸಮುದಾಯಗಳ ಆರ್ಥಿಕ ಪ್ರಗತಿಗೆ ಕೊಡುಗೆ ನೀಡುತ್ತದೆ. ನಾವು ಭಾಗವಹಿಸುವವರಿಗೆ ಸುಸ್ಥಿರ ಆದಾಯ ಗಳಿಸಲು, ಅವರ ಕುಟುಂಬದ ಆದಾಯ ಹೆಚ್ಚಿಸುವ ಮತ್ತು ಅವರ ಕುಟುಂಬಗಳನ್ನು ಎತ್ತರಕ್ಕೇರಿಸುವ ಕೌಶಲ್ಯಗಳೊಂದಿಗೆ ಸನ್ನದ್ಧವಾಗಿಸುವ ಗುರಿ ಹೊಂದಿದ್ದೇವೆ” ಎಂದರು.
ವೈ4ಡಿ ಫೌಂಡೇಷನ್ ತನ್ನ 'ಪಿರಮಿಡ್ ಆಫ್ ಸೋಷಿಯಲ್ ಇಂಪ್ಯಾಕ್ಟ್' ನಿಂದ ನಿರ್ದೇಶಿತವಾಗಿದ್ದು ಗುಣಮಟ್ಟದ ಶಿಕ್ಷಣ, ಕೌಶಲ್ಯ ತರಬೇತಿ ಮತ್ತು ಜೀವನೋಪಾಯ, ಪರಿಸರ ಸುಸ್ಥಿರತೆ ಮತ್ತು ಆರೋಗ್ಯಸೇವೆಗೆ ಆದ್ಯತೆ ನೀಡುತ್ತಿದ್ದು ಹಲವು ವರ್ಷಗಳ ಅನುಭವವನ್ನು ದುರ್ಬಲ ವರ್ಗಗಳ ಸಬಲೀಕರಣಕ್ಕೆ ತರುತ್ತಿದೆ.
ವೈ4ಡಿ ಫೌಂಡೇಷನ್ ಅಧ್ಯಕ್ಷ ಶ್ರೀ ಪ್ರಫುಲ್ ನಿಕಂ, “ಕ್ವೆಸ್ಟ್ ಗ್ಲೋಬಲ್ ಜೊತೆಯಲ್ಲಿನ ಸಹಯೋಗವು ಎಲ್ಲರನ್ನೂ ಒಳಗೊಳ್ಳುವ ಅಭಿವೃದ್ಧಿಯತ್ತ ಗಮನಾರ್ಹ ಹೆಜ್ಜೆಯಾಗಿದೆ ಮತ್ತು ದುರ್ಬಲ ಸಮುದಾಯಗಳಲ್ಲಿ ಮಹಿಳೆಯರ ಸಾಮರ್ಥ್ಯ ಅನಾವರಣಗೊಳಿಸುತ್ತಿದೆ. ವೈ4ಡಿಯಲ್ಲಿ ನಾವು ಮಹಿಳೆಯರಿಗೆ ಬೆಳೆಯಲು ಸೂಕ್ತ ವೇದಿಕೆ ಒದಗಿಸಿದೆಎ ಶಕ್ತಿಯುತ ಬದಲಾವಣೆ ತರಬಲ್ಲರು ಎಂದು ಕಂಡಿದ್ದೇವೆ. ಕೇಂದ್ರೀಕೃತ ತರಬೇತಿ ಮತ್ತು ಸಮಗ್ರ ಬೆಂಬಲದಿಂದ ಈ ಯುವ ಮಹಿಳೆಯರು ಸುಸ್ಥಿರ ಉದ್ಯೋಗಗಳನ್ನು ನಿರ್ಮಿಸಿಕೊಳ್ಳುತ್ತಿರುವುದೇ ಅಲ್ಲದೆ ಅವರ ಕುಟುಂಬಗಳು ಮತ್ತು ಸಮುದಾಯಗಳ ಒಳಗೆ ಪ್ರಗತಿಗೆ ಸ್ಫೂರ್ತಿ ತುಂಬುತ್ತಿದ್ದಾರೆ” ಎಂದರು.
ಈ ಉಪಕ್ರಮವು ಪ್ರಮುಖ ವಿಶ್ವಸಂಸ್ಥೆಯ ಸುಸ್ಥಿರ ಅಭಿವೃದ್ಧಿ ಗುರಿಗಳೊಂದಿಗೆ(ಎಸ್.ಡಿ.ಜಿ.ಗಳು) ಪೂರಕವಾಗಿದ್ದು ಬಡತನವಿಲ್ಲ (ಗುರಿ1), ಶೂನ್ಯ ಹಸಿವು (ಗುರಿ2), ಗುಣಮಟ್ಟದ ಶಿಕ್ಷಣ (ಗುರಿ 4), ಲಿಂಗ ಸಮಾನತೆ (ಗುರಿ 5) ಮತ್ತು ಯೋಗ್ಯ ಕೆಲಸ ಮತ್ತು ಆರ್ಥಿಕ ಪ್ರಗತಿ (ಗುರಿ 8) ಒಳಗೊಂಡಿದೆ ಮತ್ತು ಹಿಂದೆ ಪುಣೆಯಲ್ಲಿ ಪ್ರಾರಂಭಿಸಿದ ಕಾರ್ಯಕ್ರಮದಲ್ಲಿ 460ಕ್ಕೂ ಹೆಚ್ಚು ಮಹಿಳೆಯರಿಗೆ ತರಬೇತಿ ನೀಡಲಾಗಿದೆ ಮತ್ತು ಸ್ಥಿರವಾದ ಉದ್ಯೋಗದ ಸ್ಥಳಗಳಲ್ಲಿ ಉದ್ಯೋಗ ಕೊಡಿಸಲಾಗಿದ್ದು ಅದರ ಯಶಸ್ಸಿನ ಆಧಾರದಲ್ಲಿ ರೂಪಿಸಲಾಗುತ್ತಿದೆ.