ಕಂದಾಯ ಪ್ರಕರಣಗಳ ತ್ವರಿತ ವಿಲೇಮಾಡಿ

ಹಾವೇರಿ: ಕಂದಾಯ ಪ್ರಕರಣಗಳನ್ನು ತ್ವರಿತವಾಗಿ ವಿಲೇವಾರಿಮಾಡಿ ರೈತರಿಗೆ ಅನುಕೂಲಮಾಡಿಕೊಡಲು ಕಂದಾಯ ಇಲಾಖೆ ಅಧಿಕಾರಿಗಳಿಗೆ ಜಿಲ್ಲಾ ಉಸ್ತುವಾರಿ ಕಾರ್ಯದಶರ್ಿ ಮನೋಜ್ಕುಮಾರ್ ಮೀನಾ ಅವರು ಸೂಚಿಸಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಕಂದಾಯ ಇಲಾಖೆ ಪ್ರಗತಿ ಪರಿಶೀಲನೆ ನಡೆಸಿದ ಅವರು ಕಾಲಮಿತಿಯೊಳಗೆ ಪ್ರಕರಣಗಳು ವಿಲೇವಾರಿಮಾಡಬೇಕು. ರೈತರ ಕೆಲಸ ಮಾಡುವ ಮಾತೃ ಕಾರ್ಯ ಕಂದಾಯ ಇಲಾಖೆಯ ಕೆಲಸ. ಆದ್ಯತೆ ಮೇರೆಗೆ ರೈತರ ಕೆಲಸಗಳು ಕಾಲಮಿತಿಯೊಳಗೆ ಕೈಗೊಂಡರೆ ನಿಮ್ಮನ್ನು ಸದಾ ಕಾಲ ತಮ್ಮನ್ನು ಸ್ಮರಿಸುತ್ತಾರೆ ಎಂದು ಸಲಹೆ ನೀಡಿದರು.

ಪೋಡಿ ಪ್ರಕರಣ, ಹದ್ದುಬಸ್ತು ಪ್ರಕರಣ, ಇ ಸ್ವತ್ತು, ಪಹಣಿ ಪರಿಷ್ಕರಣೆ, ಪಹಣಿ ತಿದ್ದುಪಡಿ ಸೇರಿದಂತೆ ರೈತರಿಗೆ ಅನುಕೂಲವಾಗುವ ಕಂದಾಯ ಇಲಾಖೆ ಪ್ರಕರಣಗಳನ್ನು ತ್ವರಿತವಾಗಿ ವಿಲೇವಾರಿಗೊಳಿಸಬೇಕು. ಹಾಗೂ ತಹಶೀಲ್ದಾರ, ಉಪವಿಭಾಗಾಧಿಕಾರಿಗಳ ಕೋರ್ಟ, ಜಿಲ್ಲಾಧಿಕಾರಿಗಳ ಕೋರ್ಟನಲ್ಲಿ ವಿಚಾರಣೆಗೆ ಬರುವ ಪ್ರಕರಣಗಳನ್ನು ತ್ವರಿತವಾಗಿ ವಿಲೇಗೊಳಿಸಿ ಎಂದು ಸಲಹೆ ನೀಡಿದರು.  

ಜಿಲ್ಲೆಯಲ್ಲಿ ಸಕರ್ಾರಿ ಭೂ ಒತ್ತುವರಿ ತೆರವು, ಕೆರೆಗಳ ಒತ್ತುವರಿ ಕಾರ್ಯಗಳನ್ನು ತ್ವರಿತವಾಗಿ ಕೈಗೊಳ್ಳಿ. ಬಹುಪಾಲು ಗ್ರಾಮದೊಳಗಿರುವ ಕೆರೆಗಳಲ್ಲಿ ವಸತಿಗಳನ್ನು ನಿಮರ್ಿಸಿಕೊಂಡು ಒತ್ತುವರಿಮಾಡಿಕೊಳ್ಳಲಾಗುತ್ತಿದೆ. ಇಂತಹವುಗಳನ್ನು ಆದ್ಯತೆಯ ಮೇರೆಗೆ ಸವರ್ೇ ನಡೆಸಿ ಬಂದೋಬಸ್ತ್ಮಾಡಿಕೊಳ್ಳಿ ಎಂದು ತಹಶೀಲ್ದಾರಗಳಿಗೆ ಸಲಹೆ ನೀಡಿದರು.

ಪಹಣಿಗಳ ತಿದ್ದುಪಡಿ ಕಾಲಕಾಲಕ್ಕೆ ನಡೆಯಬೇಕು. ಪಹಣಿಯಲ್ಲಿ ದಾಖಲಾದ ಹಿಡುವಳಿಯ ಹಕ್ಕುದಾರಿಕೆ ವಿಸ್ತೀರ್ಣ ಹಾಗೂ ವಾಸ್ತವದಲ್ಲಿ ಇರುವ ಹಿಡುವಳಿ ಕುರಿತಂತೆ ಪರಿಶೀಲನೆ ನಡೆಸಿ ದಾಖಲಿಸಬೇಕು ಎಂದು ಸಲಹೆ ನೀಡಿದರು.

ಇ ಸ್ವತ್ತು, ಪೋಡಿ ಪ್ರಕರಣ, ಮೋಜಣಿ ಪ್ರಕರಣ, ಆರ್.ಟಿ.ಸಿ. ಪರಿಷ್ಕರಣೆ, ಸಕಾಲ ಪ್ರಕರಣಗಳು ಇಳಿಮುಖವಾಗಬೇಕು. ತ್ವರಿತ ವಿಲೇವಾರಿ ನಡೆಸಬೇಕು. ಮುಂದಿನ ಸಭೆಯಲ್ಲಿ ಎಲ್ಲ ಪ್ರಕರಣಗಳು ಬಾಕಿ ಇರಬಾರದು ಎಂದು ಸೂಚಿಸಿದರು.

ವಕ್ಫ್ ಭೂಮಿ ಕುರಿತಂತೆ ಮಾಹಿತಿ ಪಡೆದ ಉಸ್ತುವಾರಿ ಕಾರ್ಯದಶರ್ಿಗಳು ಈಗಾಗಲೇ ಜಿಲ್ಲೆಯಲ್ಲಿ ಎಲ್ಲ ವಕ್ಫ್ ಆಸ್ತಿಗಳನ್ನು ಸವರ್ೇ ಮಾಡಲಾಗಿದೆ ಎಂದು ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು. ಯಾವುದೇ ಕಾರಣಕ್ಕೆ ವಕ್ಫ್ ಆಸ್ತಿಗಳನ್ನು ಮಾರಾಟ ಮಾಡುವಹಾಗಿಲ್ಲ. ಹಾಗೂ ನೋಂದಣಿ ಕಚೇರಿಯಲ್ಲಿ ಈ ಆಸ್ತಿಗಳನ್ನು ನೋಂದಾಯಿಸುವಂತಿಲ್ಲ. ಈ ಕುರಿತಂತೆ ಗಮನಹರಿಸುವಂತೆ ಜಿಲ್ಲಾ ನೋಂದಣಾಧಿಕಾರಿಗಳಿಗೆ  ಸೂಚಿಸಿದರು.

ಇ- ಆಡಳಿತ: ಎಲ್ಲ ಇಲಾಖೆಗಳು ಇ ಆಡಳಿತವನ್ನು ಆರಂಭಿಸಬೇಕು. ಆನ್ಲೈನ್ ಮೂಲಕವೇ ಅಜರ್ಿ ವಿಲೇವಾರಿ ಕೈಗೊಳ್ಳಬೇಕು. ಸಕರ್ಾರ ಈ ಕುರಿತಂತೆ ಬಹಳ ಆಸಕ್ತಿ ಹೊಂದಿದೆ. ಮೊದಲ ಹಂತದಲ್ಲಿ ಕನಿಷ್ಠ ಜಿಲ್ಲಾಧಿಕಾರಿಗಳ ಕಚೇರಿ, ಜಿಲ್ಲಾ ಪಂಚಾಯತ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ ಹಾಗೂ ಅರಣ್ಯ ಇಲಾಖಾ ಕಚೇರಿ ಇ ಆಡಳಿತವನ್ನು ಆರಂಭಿಸಬೇಕು ಎಂದು ಸೂಚಿಸಿದರು.

ಭೂ ದರ ಪರಿಷ್ಕರಣೆ: ಭೂಮಿ ದರಗಳನ್ನು ಪರಿಷ್ಕರಿಸುವಾಗ ಮಾರುಕಟ್ಟೆಯ ದರಕ್ಕೆ ಹತ್ತಿರವಿರಲಿ. ಮಾರುಕಟ್ಟೆ ದರಕ್ಕೂ ನೋಂದಣಿಯ ದರಕ್ಕೂ ಬಹಳ ವ್ಯತ್ಯಾಸವಿದೆ.  ಈ ವ್ಯತ್ಯಾಸದ ಅಂತರವನ್ನು ಕಡಿಮೆಮಾಡಿ ಭೂಮಿಯ ದರವನ್ನು ಪರಿಷ್ಕರಿಸುವ ಸಂದರ್ಭದಲ್ಲಿ ಕಡ್ಡಾಯವಾಗಿ ರೈತರನ್ನು ಸಂಪಕರ್ಿಸಿ ಸಲಹೆಗಳನ್ನು ಪಡೆಯಿರಿ. ಇದರಿಂದ ರೈತರಿಗೂ ಅನುಕೂಲವಾಗಲಿದೆ. ಭೂಸ್ವಾಧೀನಗಳ ಸಂದರ್ಭದಲ್ಲಿ ರೈತರಿಂದ ಹೆಚ್ಚುವರಿ ದರ ನಿಗಧಿಮಾಡುವಂತೆ ಬೇಡಿಕೆಗಳು ಬರುತ್ತಿವೆ. ಸಕರ್ಾರಿ ನೋಂದಣಿ ದರಕ್ಕೂ ವಾಸ್ತವವಾಗಿ ಖಾಸಗಿಯಾಗಿ ಮಾರಾಟ ದರಕ್ಕೂ ಬಹಳಷ್ಟು ಅಂತವಿರುವುದನ್ನು ತಗ್ಗಿಸಬೇಕು. ಈ ಕುರಿತಂತೆ ಉಪ ನೋಂದಣಾಧಿಕಾರಿಗಳು ಹಾಗೂ ತಹಶೀಲ್ದಾರಗಳು ಚಚರ್ಿಸಿ ಕ್ರಮವಹಿಸುವಂತೆ ಸೂಚನೆ ನೀಡಿದರು. 

ಸಭೆಯಲ್ಲಿ ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿವರ್ಾಹಣಾಧಿಕಾರಿ ರಮೇಶ ದೇಸಾಯಿ, ಅಪರ ಜಿಲ್ಲಾಧಿಕಾರಿ ಡಾ.ಎನ್.ತಿಪ್ಪೇಸ್ವಾಮಿ, ವಿವಿಧ ತಹಶೀಲ್ದಾರಗಳು, ಇತರ ಅಧಿಕಾರಿಗಳು ಉಪಸ್ಥಿತರಿದ್ದರು