ರವಿ ಎಲ್ ಗುಂಜೀಕರ ರಾಜ್ಯ ಸಂಘದ ಹಿರಿಯ ಉಪಾಧ್ಯಕ್ಷರನ್ನಾರಾಗಿ ಆಯ್ಕೆ

Ravi L Gunjikar has been elected as the Senior Vice President of the State Association

ಗದಗ:10: ರಾಜ್ಯ ಸರ್ಕಾರಿ ನೌಕರರ ಸಂಘದ ನಿಯಮಗಳ ಪ್ರಕಾರ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್‌. ಷಡಕ್ಷರಿ ಯವರು ರಾಜ್ಯ ಕಾರ್ಯಕಾರಿ ಸಮಿತಿಯ ನಿರ್ಣಯದಂತೆ, ಗದಗ ಜಿಲ್ಲೆಯ ನೌಕರರ ಸಂಘದ ಜಿಲ್ಲಾಧ್ಯಕ್ಷ ರವಿ ಎಲ್ ಗುಂಜೀಕರ ಅವರನ್ನ, ರಾಜ್ಯ ಸಂಘದ ಹಿರಿಯ ಉಪಾಧ್ಯಕ್ಷರನ್ನಾಗಿ ಆಯ್ಕೆ ಮಾಡಿದ್ದಾರೆ.ಗದಗ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿಯೊಬ್ಬರು ರಾಜ್ಯ ಸರ್ಕಾರಿ ನೌಕರರ ಸಂಘದ ಪ್ರಮುಖ ಹುದ್ದೆಯನ್ನು ಅಲಂಕರಿಸಿರುವುದು ಹೆಮ್ಮೆಯ ವಿಷಯವಾಗಿದೆ.           ಈ ವೇಳೆ ಭೋವಿ ಸಮಾಜದ ಗದಗ ಜಿಲ್ಲಾಧ್ಯಕ್ಷ ಎಚ್ ವೈ ಸಂದಕದ,ಲಕ್ಷ್ಮೇಶ್ವರ ತಾಲೂಕ ಭೋವಿ ಸಮಾಜದ ಅಧ್ಯಕ್ಷ ರಾಜು ಕಳ್ಳಿ, ಭೋವಿ ಸಮಾಜದ ಪ್ರಧಾನ ಕಾರ್ಯದರ್ಶಿ ಯಲ್ಲಪ್ಪ ವಡ್ಡರ, ಸಹ ಕಾರ್ಯಕಾರ್ಯದರ್ಶಿ ಹನಮಂತ ವಡ್ಡರ, ನಾಗರಾಜ ಕಟ್ಟಿಮನಿ ಸೇರಿದಂತೆ ಇತರರಿದ್ದರು.