200 ವಿಕೆಟ್ ಸಮೀಪದಲ್ಲಿ ರವೀಂದ್ರ ಜಡೇಜಾ

ನವದೆಹಲಿ, ಆ 20       ಭಾರತ ತಂಡದ ಸ್ಟಾರ್ ಆಲ್ರೌಂಡರ್ ರವೀಂದ್ರ ಜಡೇಜಾ ಅವರು ಮುಂಬರುವ ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ನೂತನ ಮೈಲಿಗಲ್ಲು ಸ್ಥಾಪಿಸುವ ತುಡಿತದಲ್ಲಿದ್ದಾರೆ.  

ಅಂತಾರಾಷ್ಟ್ರೀಯ ಟೆಸ್ಟ್ ವೃತ್ತಿ ಜೀವನದಲ್ಲಿ ರವೀಂದ್ರ ಜಡೇಜಾ ಅವರು 200 ವಿಕೆಟ್ ಪೂರೈಸಲು ಇನ್ನು ಕೇವಲ ಎಂಟು ವಿಕೆಟ್ ಅಗತ್ಯವಿದೆ. ಈ ಸರಣಿಯಲ್ಲಿ ಎಂಟು ವಿಕೆಟ್ ಕಬಳಿಸಿದರೆ 200 ವಿಕೆಟ್ ಪಡೆದ ಭಾರತದ 10ನೇ ಬೌಲರ್ ಎಂಬ ಸಾಧನೆಗೆ ಭಾಜನರಾಗಲಿದ್ದಾರೆ. 

ಒಂದು ವೇಳೆ ಜಡೇಜಾ ಅವರು ಅಂಟಿಗುವಾ ದಲ್ಲಿ ನಡೆಯುವ ಮೊದಲನೇ ಟೆಸ್ಟ್ ಪಂದ್ಯದಲ್ಲೇ ಈ ಸಾಧನೆ ಮಾಡಿದರೆ. ಅತಿ ವೇಗವಾಗಿ 200 ವಿಕೆಟ್ ಪಡೆದ ಆರ್. ಅಶ್ವಿನ್ ಬಳಿಕ ಎರಡನೇ ಬೌಲರ್ ಎಂಬ ಸಾಧನೆಗೆ ಎಡಗೈ ಸ್ಪಿನ್ನರ್ ಭಾಜನರಾಗಲಿದ್ದಾರೆ. 

ರವೀಂದ್ರ ಜಡೇಜಾ ಅವರು ಐಸಿಸಿ ಟೆಸ್ಟ್ ಬೌಲಿಂಗ್ ಶ್ರೇಯಾಂಕದಲ್ಲಿ ಐದನೇ ಸ್ಥಾನದಲ್ಲಿದ್ದಾರೆ. ಈಗಾಗಲೇ ಟೀಮ್ ಇಂಡಿಯಾ ಟಿ-20 ಹಾಗೂ ಏಕದಿನ ಸರಣಿಯನ್ನು ತನ್ನ ತೆಕ್ಕೆಗೆ ಹಾಕಿಕೊಂಡಿತು. ಟೆಸ್ಟ್ ಸರಣಿಯನ್ನೂ ತನ್ನ ವಶಕ್ಕೆ ಪಡೆಯುವ ತುಡಿತದಲ್ಲಿದೆ.