ಹಾವೇರಿ: ಮೇ 27: ಸೇವಾ ಸಿಂಧು ಆ್ಯಪ್ನಲ್ಲಿ ನೊಂದಾಯಿಸಿಕೊಳ್ಳದೆ ಅನ್ಯಮಾರ್ಗದಲ್ಲಿ ಯಾರಾದರೂ ಹೊರ ರಾಜ್ಯದಿಂದ ಜಿಲ್ಲೆಯೊಳಗೆ ಬಂದಿದ್ದರೆ ಅವರನ್ನು ಪತ್ತೆಮಾಡಿ ಕ್ವಾರಂಟೈನ್ಗೆ ಒಳಪಡಿಸಿ ಗಂಟಲು ದ್ರವ್ಯ ಮಾದರಿಯನ್ನು ಲ್ಯಾಬ್ಗೆ ಕಳುಹಿಸಲು ಕ್ರಮವಹಿಸಬೇಕು. ಈ ಕುರಿತಂತೆ ಸ್ಥಳೀಯ ಅಧಿಕಾರಿಗಳು ಚುರುಕಿನಿಂದ ಮಾಹಿತಿ ಸಂಗ್ರಹಿಸಲು ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ ತಹಶೀಲ್ದಾರಗಳಿಗೆ ಸೂಚನೆ ನೀಡಿದರು.
ಈ ಕುರಿತಂತೆ ಬುಧವಾರ ತಾಲೂಕಾ ಅಧಿಕಾರಿಗಳೊಂದಿಗೆ ವಿಡಿಯೋ ಸಂವಾದ ನಡೆಸಿದ ಅವರು ಹೊರ ಜಿಲ್ಲೆಗಳಿಂದಲೂ ಆಗಮಿಸಿರುವ ಪೈಕಿ ಕೋವಿಡ್ ರೋಗ ಲಕ್ಷಣಗಳ ಆಧಾರದ ಮೇಲೆ ಅವರನ್ನೂ ಆರೋಗ್ಯ ತಪಾಸಣೆ ನಡೆಸಿ ಕ್ವಾರಂಟೈನ್ಗೆ ಒಳಪಡಿಸಬೇಕು. ಈ ಕುರಿತಂತೆ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಒಳಗೊಂಡ ಗ್ರಾಮ ಸಮಿತಿ ತ್ವರಿತವಾಗಿ ಈ ಕಾರ್ಯಮಾಡಬೇಕು ಎಂದು ಸೂಚನೆ ನೀಡಿದರು.
ಸರ್ಕಾರದ ಮಾರ್ಗಸೂಚಿಯಂತೆ ಆರೋಗ್ಯ ತಪಾಸಣೆ ಹಾಗೂ ಕ್ವಾರಂಟೈನ್ ನಿರ್ವಹಣೆ ಮಾಡಬೇಕು. ಯಾವುದೇ ಕಾರಣಕ್ಕೂ ಕೋವಿಡ್ ಮಾರ್ಗಸೂಚಿ ಹೊರತುಪಡಿಸಿ ಸ್ಥಳೀಯವಾಗಿ ನಿಧರ್ಾರ ತೆಗೆದುಕೊಂಡು ಯಾವುದೇ ಸಮಸ್ಯೆಗಳು ಎದುರಾದರೆ ತಹಶೀಲ್ದಾರಗಳನ್ನು ಹೊಣೆಗಾರರನ್ನಾಗಿ ಮಾಡುವುದಾಗಿ ಎಚ್ಚರಿಸಿದರು.
ಸೇವಾ ಸಿಂಧುವಿನ ನೊಂದಣಿ ಪ್ರಕಾರ ಜಿಲ್ಲೆಗೆ ಆಗಮಿಸಿದ ಹೊರ ರಾಜ್ಯದವರ ವಿವರ ಈ ಪೈಕಿ ಸಾಂಸ್ಥಿಕ ಕ್ವಾರಂಟೈನ್ನಲ್ಲಿ ಇರುವವರು, ಕ್ವಾರಂಟೈನ್ ಅವಧಿ ಮುಗಿಸಿದವರು, ಗೃಹ ಕ್ವಾರಂಟೈನ್ ಆದವರ ನಿಖರವಾದ ಮಾಹಿತಿಯನ್ನು ಪ್ರತಿ ತಾಲೂಕಾ ತಹಶೀಲ್ದಾರಗಳು ಹೊಂದಬೇಕು. ಯಾವುದೇ ಕಾರಣಕ್ಕೂ ಹೊರ ರಾಜ್ಯದಿಂದ ಬಂದವರು ಆರೋಗ್ಯ ತಪಾಸಣೆ ಹಾಗೂ ಕ್ವಾರಂಟೈನ್ನಿಂದ ಹೊರಗುಳಿಯಬಾರದು. ಆರೋಗ್ಯ ಇಲಾಖೆಯ ಎಸ್.ಓ.ಪಿ. ಪ್ರಕಾರ ಕ್ರಮವಹಿಸಬೇಕು ಹಾಗೂ ಸೋಂಕು ಹೆಚ್ಚಾಗಿರುವ ಜಿಲ್ಲೆಗಳಿಂದ ಬರುವವರ ಮೇಲೂ ನಿಗಾವಹಿಸಬೇಕು. ಅಗತ್ಯ ಬಿದ್ದರೆ ತಪಾಸಣೆಗೆ ಕ್ರಮವಹಿಸಬೇಕು ಎಂದು ಸೂಚನೆ ನೀಡಿದರು.
ಸಾಂಸ್ಥಿಕ ಕ್ವಾರಂಟೈನ್ನಲ್ಲಿ ಇರುವವರಿಗೆ ಉತ್ತಮ ಊಟ, ಉಪಹಾರ ನೀಡಬೇಕು. ಯಾವುದೇ ಕೊರತೆಯಾಗಬಾರದು. ಸ್ವಚ್ಛತೆಗೆ ಆದ್ಯತೆ ನೀಡಬೇಕು. ಅಗತ್ಯವಿದ್ದರೆ ಕ್ವಾರಂಟೈನ್ ಕೇಂದ್ರಗಳಿಗೆ ಪ್ರತ್ಯೇಕ ಸ್ವಚ್ಛಗಾರರನ್ನು ನೇಮಕಮಾಡಿಕೊಳ್ಳಿ. ಮಾಸ್ಕ್ ಸ್ಯಾನಿಟೈಸರ್ ಸೇರಿದಂತೆ ಎಲ್ಲ ವ್ಯವಸ್ಥೆಮಾಡಿ ಕ್ವಾರಂಟೈನ್ ಸೆಂಟರ್ನಿಂದ ಸೋಂಕು ಹರಡಬಾರದು. ಈ ಕುರಿತಂತೆ ನಿರಂತರ ತಪಾಸಣೆ ನಡೆಸಿ ಒಂದೊಮ್ಮೆ ಈ ಕೇಂದ್ರಗಳಿಂದ ಸೋಂಕು ಹರಡಿದರೆ ತಾಲೂಕಾ ವೈದ್ಯಾಧಿಕಾರಿಗಳನ್ನೇ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ತಿಳಿಸಿದರು.
ಕ್ವಾರಂಟೈನ್ ಕೇಂದ್ರದ ನಿರ್ವಹಣೆ ಕುರಿತಂತೆ ಈಗಾಗಲೇ ಜಿಲ್ಲಾ ಮಟ್ಟದ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಇಲ್ಲಿನ ಸೌಕರ್ಯಗಳ ಕುರಿತಂತೆ ಸಮಗ್ರ ವರದಿ ಸಲ್ಲಿಸಲು ಸೂಚಿಸಲಾಗಿದೆ. ಕೇಂದ್ರಗಳ ಸೌಲಭ್ಯಗಳಲ್ಲಿ ಬದಲಾವಣೆಗಳಿದ್ದರೆ ನೋಡಲ್ ಅಧಿಕಾರಿಗಳು ಕ್ರಮಕೈಗೊಳ್ಳುವಂತೆ ಸೂಚಿಸಲಾಗಿದೆ ಎಂದು ತಿಳಿಸಿದರು.
ಸವಣೂರ- ಶಿಗ್ಗಾಂವ ಮಾದರಿಯಲ್ಲಿ ಜಿಲ್ಲೆಯ ಉಳಿದ ತಾಲೂಕುಗಳ ಪಟ್ಟಣ ಪ್ರದೇಶಗಳಲ್ಲಿ ವೈದ್ಯರ ಹಾಜರಾತಿಯಲ್ಲಿ ಆರೋಗ್ಯ ತಪಾಸಣೆ ನಡೆಸಬೇಕು. ವೈದ್ಯರ ಕೊರತೆ ಕಂಡಲ್ಲಿ ಆಯುಷ್ ವೈದ್ಯರು ಸ್ವಯಂ ಪ್ರೇರಣೆಯಿಂದ ಸೇವೆ ಸಲ್ಲಿಸಲು ಮುಂದೆ ಬಂದಿದ್ದಾರೆ. ಇವರ ಸೇವೆಯನ್ನು ಬಳಸಿಕೊಂಡು ತಪಾಸಣೆ ನಡೆಸುವಂತೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿವರ್ಾಹಣಾಧಿಕಾರಿಗಳು ರಮೇಶ ದೇಸಾಯಿ ಅವರು ತಿಳಿಸಿದರು.
ಅಪರ ಜಿಲ್ಲಾಧಿಕಾರಿ ಎಸ್.ಯೋಗೇಶ್ವರ, ಹಾವೇರಿ ಉಪವಿಭಾಗಾಧಿಕಾರಿ ಡಾ.ದಿಲೀಷ್ ಶಶಿ, ಆಹಾರ ಮತ್ತು ನಾಗರಿಕ ಸಬರಾಜು ಇಲಾಖೆ ವಿನೋದಕುಮಾರ ಹೆಗ್ಗಳಗಿ, ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಜಮಖಾನೆ, ಸಮಾಜ ಕಲ್ಯಾಣ ಇಲಾಖೆ ಉಪನಿದರ್ೆಶಕಿ ಚೈತ್ರಾ, ಆರ್.ಸಿ.ಎಚ್. ಅಧಿಕಾರಿ ಡಾ.ಜಯಾನಂದ, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಪಿ.ಕೆ. ಹಾವನೂರ, ತಹಶೀಲ್ದಾರಗಳಾದ ಶಂಕರ್, ಬಸವನಗೌಡ ಕೊಟೂರ ಹಾಗೂ ಡಾ.ಪ್ರಭಾಕರ ಕುಂದೂರ ಇತರರು ಉಪಸ್ಥಿತರಿದ್ದರು.