ಕಾರಹುಣ್ಣಿಮೆ ಅಂಗವಾಗಿ ಹುಲಿಗೆಮ್ಮ ಸನ್ನಿಧಾನದಲ್ಲಿ ಧಾರ್ಮಿಕ ಕಾರ್ಯಕ್ರಮಗಳು

Religious programs at Huligemma Sannidhana on the occasion of Karahunnime

ಕಂಪ್ಲಿ 11: ಪಟ್ಟಣದ 22ನೇ ವಾರ್ಡಿನ ವಾಲ್ಮೀಕಿ ನಗರದಲ್ಲಿರುವ ಭಕ್ತರ ಆರಾಧ್ಯ ದೇವತೆ ಶ್ರೀ ಹುಲಿಗೆಮ್ಮ ದೇವಸ್ಥಾನದಲ್ಲಿ ಕಾರಹುಣ್ಣಿಮೆ ಅಂಗವಾಗಿ ಹೋಮ ಹವನ ಸೇರಿದಂತೆ ನಾನಾ ಧಾರ್ಮಿಕ ಕೈಂಕಾರ್ಯಗಳು ಶ್ರದ್ಧಾಭಕ್ತಿಯಿಂದ ಬುಧವಾರ ಜರುಗಿದವು.  

ಇಲ್ಲಿನ ದೇವಸ್ಥಾನದ ಸನ್ನಿಧಾನದಲ್ಲಿ ಪೂಜಾರಿಗಳಾದ ಎರೆ​‍್ರಮ್ಮ, ರಾಮಾಂಜಿನೆಮ್ಮ ಇವರ ನೇತೃತ್ವದಲ್ಲಿ ಹುಲಿಗೆಮ್ಮ ದೇವಿಗೆ ಎಲೆಚೆಟ್ಟು ಏರಿಸಿರುವುದು, ಹೂವಿನ ಅಲಂಕಾರ, ಮಹಾಮಂಗಳಾರತಿ, ಜೋಗ್ ಪಂಥಿ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಶಾಸ್ತ್ರೋಸ್ರವಾಗಿ ನೆರವೇರಿದವು.  

ಸಾಕಷ್ಟು ಭಕ್ತರು ದೇವಿ ಸನ್ನಿಧಾನಕ್ಕೆ ಭೇಟಿ ನೀಡಿ, ಕಾಯಿ, ಕರ​‍್ೂರ ಅರ​‍್ಿಸಿ, ದರ್ಶನ ಪಡೆದರು. ನಂತರ ಅನ್ನಸಂತಾರೆ​‍್ಣ ಜರುಗಿತು. ಮಂಗಳವಾರದಂದು ಕಂಪ್ಲಿ-ಕೋಟೆಯಿಂದ ವಾಲ್ಮೀಕಿ ನಗರದ ದೇವಸ್ಥಾನದವರೆಗೆ ದೇವಿಯ ಕುಂಭಾ ಮೆರವಣಿಗೆ ನಡೆಸಲಾಯಿತು.  

ಈ ಮೆರವಣಿಗೆಯಲ್ಲಿ ಸುಮಂಗಲಿಯರ ಕಳಸ ಹಾಗೂ ಮಂಗಳವಾದ್ಯ ಪಾಲ್ಗೊಂಡಿದ್ದವು. ರಾತ್ರಿ ಭಜನೆ ಜರುಗಿತು.   

 ಈ ಸಂದರ್ಭದಲ್ಲಿ ಮುಖಂಡರಾದ ದೊಡ್ಡ ಹೊನ್ನೂರಸ್ವಾಮಿ, ಗೋವಿಂದ, ಅಂಜಿನಿ, ಈ.ಹೊನ್ನೂರಸ್ವಾಮಿ, ಓಬಳೇಶ, ಶೀನಪ್ಪ, ರಾಮಾಂಜಿನಿ, ಪಿ.ವಿರೇಶ ಸೇರಿದಂತೆ ವಾಲ್ಮೀಕಿ ನಗರ ಹಾಗೂ ಸುತ್ತಮುತ್ತಲಿನ ಭಕ್ತರು ಪಾಲ್ಗೊಂಡಿದ್ದರು.