ಗೋವಿನ ಜೋಳ ಖರೀದಿ ಕೇಂದ್ರ ತೆರೆಯುವಂತೆ ಜಿಲ್ಲಾಧಿಕಾರಿ ಮನವಿ ಸಲ್ಲಿಕೆ

ಹಾವೇರಿ 12: ಜಿಲ್ಲೆಯ ಬಹುಪಾಲು ಜನರು ಕೃಷಿಯನ್ನು ಅವಲಂಭಿಸಿದ್ದು,ಹೆಚ್ಚಿನ ರೈತರು ಗೋವಿನ ಬೆಳೆ ಬೆಳೆದು ನಿಗದಿತ ಬೆಂಬಲ ಬೆಲೆ ಸಿಗದೇ ತಾವು ಬೆಳೆದ ಬೆಳೆಯನ್ನು ತಮ್ಮಲ್ಲಿಯೇ ಇರಿಸಿಕೊಂಡಿದ್ದಾರೆ ಇದರಿಂದ ರೈತರ ಕುಟುಂಬ ಆಥರ್ಿಕವಾಗಿ ಕಂಗಾಲಾಗಿದ್ದು, ಕೊಡಲೇ ಸಕರ್ಾರ ಗೋವಿನಜೋಳ ಖರೀದಿ ಕೇಂದ್ರಗಳನ್ನು ತೆರೆಯಬೇಕೆಂದು ವಕೀಲರು ಜಿಲ್ಲಾಡಳಿತ ಭವನಕ್ಕೆ ಧಾವಿಸಿ ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ ಅವರಿಗೆ ಮನವಿ ಸಲ್ಲಿಸಿದರು.

      ಹಿರಿಯ ವಕೀಲರಾದ ವ್ಹಿ.ಜಿ ದೊಡ್ಡಗೌಡ್ರ ಮಾತನಾಡಿ ಜಿಲ್ಲೆಯ ರೈತರು ಗೋವಿನಜೋಳ ಬೆಳೆಯನ್ನು ಮುಖ್ಯ ಬೆಳೆಯಾಗಿ ಬೆಳೆಯುತ್ತಾರೆ. ಕೇಂದ್ರ ಸಕರ್ಾರ ಗೋವಿನಜೋಳಕ್ಕೆ ಬೆಲೆ ನಿಗದಿ ಮಾಡಿಯಾದರೂ ಖರೀದಿ ಕೇಂದ್ರಗಳನ್ನು ತೆರೆಯದೇ ಇರುವುದು ಖಂಡನೀಯವಾಗಿದೆ.ನಾವೆಲ್ಲಾ ರೈತಪರ ಕುಟುಂಬ ಹಿನ್ನಲೆಯಿಂದ ಬಂದವರಾಗಿದ್ದು, ರೈತರ ಕಷ್ಟ ನಷ್ಟಗಳನ್ನು ನಾವೆಲ್ಲ ಅರತ್ತಿದ್ದೇವೆ. ರೈತರ ಕಷ್ಟ-ನಷ್ಟಗಳನ್ನು ಕೇಳದ ಸಕರ್ಾರದ ವಿರುದ್ಧ ಉಗ್ರ ಹೋರಾಟ ಮಾಡಬೇಕಾಗುತ್ತದೆ.ಕೊಡಲೇ ಜಿಲ್ಲಾಡಳಿತ ಹಾಗೂ ಸಕರ್ಾರ ಅತಿ ಮುಖ್ಯವಾಗಿ ಗೋವಿನಜೋಳ ಖರೀದಿ ಕೇಂದ್ರಗಳನ್ನು ತೆರೆಯಬೇಕು ರೈತರ ಕಷ್ಟಗಳಿಗೆ ನೆರವಿಗೆ ಧಾವಿಸಬೇಕು ಎಂದು ಒತ್ತಾಯಿಸಿರು.

    ಮತ್ತೊರ್ವ ಹಿರಿಯ ವಕೀಲರಾದ ಜಿ.ಎ ಹಿರೇಮಠ ಮಾತನಾಡಿ ದೇಶವೇ ಬೇಸಾಯವನ್ನು ಹೊಂದಿದೆ ಆದರೆ ರೈತರನ್ನು ಸಕರ್ಾರಗಳು ಕಡೆಗಣಿಸುವುದು ಸರಿಯಾದ ಕ್ರಮವಲ್ಲ. ಸಕರ್ಾರಗಳು ಇರುವುದೇ ಜನರ ಕಷ್ಟ ನಷ್ಟಗಳಿಗೆ ಪರಿಹಾರ ನೀಡಲಿಕೆ ಎಂಬ ಕಲ್ಪನೆ ಉಳಿಸಿಕೊಂಡಿಲ್ಲವಾಗಿವೆ.ಹಳ್ಳಿಗಳಲ್ಲಿ ತಮ್ಮ ಮನೆಯ ಮುಂದೆ ಗೋವಿನಜೋಳದ ರಾಶಿಯನ್ನು ಇಟ್ಟುಕೊಂಡಿದ್ದಾರೆ ಯಾಕೆ ಅಂತಾ ಕೇಳಿದರೆ ಸರಿಯಾದ ಬೆಲೆ ಇಲ್ಲದೇ ನಾವು ಕಚರ್ು ಮಾಡಿದ ಹಣವೇ ನಮಗೆ ಸಿಗುವುದಿಲ್ಲ ಎಂದು ತಮ್ಮ ಗೋಳು ಹೇಳುವಂತಾಗಿದೆ ಕೊಡಲೇ ಗೋವಿನಜೋಳ ಖರೀದಿ ಕೇಂದ್ರಗಳನ್ನು ತೆರೆಯಬೇಕೆಂದು ಒತ್ತಾಯಿಸಿದರು.

       ಈ ಸಂದರ್ಭದಲ್ಲಿ ವಕೀಲರಾದ ಎಸ್.ಎಸ್ ಬಿಷ್ಟಣ್ಣಗೌಡ್ರ.ವ್ಹಿ.ಎಸ್ ಪಾಟೀಲ,ನಾರಾಯಣ ಕಾಳೆ.ಆರ್.ಬಿ ಬಸೆಟ್ಟಯವರ, ಎನ್.ಜಿ ಹೊಸಮನಿ, ಭರತೇಶ ಜಗ್ಗಣ್ಣನವರ, ಐ,ಎಸ್ ಗುಡಗೇರಿ.ಸಿ.ಎಚ್ ಪಾಟೀಲ, ಎಚ್.ಎಂ ನಿರುಳ್ಳಿ, ಗಂಗಯ್ಯ ಕುಲಕಣರ್ಿ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.