ಲೋಕದರ್ಶನ ವರದಿ
ರಾಣೇಬೆನ್ನೂರು: ಸ್ಥಳೀಯ ದೇವರಗುಡ್ಡ ರಸ್ತೆ ಸೇರಿದಂತೆ ಮೂರು ಸ್ಥಳಗಳಲ್ಲಿ ರೇಲ್ವೆ ಹಳಿಗೆ ಅಡ್ಡಲಾಗಿ ಮೇಲ್ಸೇತುವೆ ನಿಮರ್ಿಸುವಂತೆ ಆಗ್ರಹಿಸಿ ಇಲ್ಲಿಯ ತಾಲೂಕು ರೆಲ್ವೆ ಮೇಲ್ಸೇತುವೆ ನಿರ್ಮಾಣ ಹೋರಾಟ ಸಮಿತಿ ನೇತೃತ್ವದಲ್ಲಿ ಸಾರ್ವಜನಿಕರು ಕೇಂದ್ರ ರೇಲ್ವೆ ಸಚಿವರಿಗೆ ಸಾಮೂಹಿಕ ಪತ್ರ ಬರೆದು ಪ್ರತಿಭಟಿಸಿದರು.
ಹೋರಾಟ ಸಮಿತಿ ಅಧ್ಯಕ್ಷ ರವೀಂದ್ರಗೌಡ ಪಾಟೀಲ ಮಾತನಾಡಿ, ಈಗಾಗಲೇ ದೇವರಗುಡ್ಡ ಗುತ್ತಲ ರಸ್ತೆಯಲ್ಲಿ ಸಾಧಕ ಬಾಧಕಗಳನ್ನು ಪರಿಗಣಿಸದೇ ರೇಲ್ವೆ ಇಲಾಖೆ ಅಧಿಕಾರಿಗಳು ಕೆಳ ಸೇತುವೆ ನಿಮರ್ಿಸಿದ್ದಾರೆ. ಇದರಿಂದ ಮಳೆಗಾಲದ ಸಮಯದಲ್ಲಿ ಸಾಕಷ್ಟು ತೊಂದರೆಯಾಗುತ್ತಿದೆ ಎಂದರು.
ರಸ್ತೆ ಮೇಲೆ ದೊಡ್ಡ ಪ್ರಮಾಣದಲ್ಲಿ ನೀರು ನಿಂತು ವಾಹನ ಸಂಚಾರಕ್ಕೆ ಅಡ್ಡಿಯಾಗುತ್ತದೆ. ಈ ಹಿನ್ನೆಲೆಯಲ್ಲಿ ನಗರದಲ್ಲಿ ದೇವರಗುಡ್ಡ ರಸ್ತೆ, ಗಂಗಾಪುರ ರಸ್ತೆ ಹಾಗೂ ಮೆಡ್ಲೇರಿ ರಸ್ತೆಗಳಿಗೆ ಪ್ರತ್ಯೇಕವಾಗಿ ರೇಲ್ವೆ ಇಲಾಖೆಯು ಸೇತುವೆ ನಿಮರ್ಿಸಬೇಕಾಗಿದೆ.
ಮೇಲ್ಸೇತುವೆ ನಿಮರ್ಿಸುವಂತೆ ಹೋರಾಟ ಸಮಿತಿ ವತಿಯಿಂದ ಅನೇಕ ಬಾರಿ ಮನವಿ ಸಲ್ಲಿಸುವ ಜತೆಯಲ್ಲಿ ಪ್ರತಿಭಟನೆಗಳನ್ನು ನಡೆಸಲಾಗಿದೆ. ಮೇ 13ರಂದು ಗುತ್ತಲ ರಸ್ತೆಯ ಕೆಳ ಸೇತುವೆ ಬಳಿ ಪ್ರತಿಭಟನೆ ನಡೆಸಲಾಗಿದೆ ಎಂದರು.
ಸಂಸದ ಶಿವಕುಮಾರ ಉದಾಸಿ ಸ್ಥಳಕ್ಕೆ ಆಗಮಿಸಿ ಶೀಘ್ರವೇ ಮೇಲ್ಸೇತುವೆ ನಿಮರ್ಿಸಲು ಯೋಜನೆ ರೂಪಿಸಿ ಕಾರ್ಯಗತಗೊಳಿಸುವಂತೆ ರೇಲ್ವೆ ಅಧಿಕಾರಿಗಳಿಗೆ ಸೂಚಿಸುವುದಾಗಿ ಭರವಸೆ ನೀಡಿದ್ದರು. ಆದರೆ ಇಂದಿನವರೆಗೂ ಅದು ಕಾರ್ಯಗತಕ್ಕೆ ಬಾರದ ಹಿನ್ನೆಲೆಯಲ್ಲಿ ರೇಲ್ವೆ ಸಚಿವರಿಗೆ ಸಮಸ್ಯೆ ಕುರಿತು ಪತ್ರ ಬರೆದು ಒತ್ತಾಯಿಸುತ್ತಿದ್ದೇವೆ. ಆದರೂ ಪ್ರಯೋಜನವಾಗಿಲ್ಲ ಎಂದರು.
ಈ ಕುರಿತು ನ.4ರಂದು ನಗರದ ಪ್ರಮುಖ ರಸ್ತೆಗಳಲ್ಲಿ ಪ್ರತಿಭಟನಾ ಮೆರವಣಿಗೆ ಕೈಗೊಂಡು ಗುತ್ತಲ ರಸ್ತೆ ರೇಲ್ವೆ ಗೇಟ್ ಬಳಿ ರೈಲು ತಡೆ ಚಳವಳಿ ನಡೆಸಲಾಗುವುದು ಎಂದು ಎಚ್ಚರಿಸಿದರು.
ರೈತ ಮುಖಂಡ ಹನುಮಂತಪ್ಪ ಕಬ್ಬಾರ, ನಗರಸಭಾ ಸದಸ್ಯ ಮಲ್ಲಿಕಾಜರ್ುನ ಅಂಗಡಿ, ಕೃಷ್ಣಮೂತರ್ಿ ಲಮಾಣಿ, ಉಮೇಶ ಹೊನ್ನಾಳಿ, ಜಗದೀಶ ಕೆರೂಡಿ, ಮಳ್ಳಪ್ಪ ಕಮದೋಡ, ಚಂದ್ರಣ್ಣ ಬೇಡರ, ನೀಲಕಂಠ ಭೂತೆ, ಅಮರ ಭೂತೆ, ಮೀರಾ, ಬಸವರಾಜ ಕೊಂಗಿ, ಹರಿಹರಗೌಡ ಪಾಟೀಲ, ಶಶಿಕಲಾ ಅರಿಕಟ್ಟಿ, ಜಗದೀಶ ಆನ್ವೇರಿ ಇತರರು ಇದ್ದರು