ಲೋಕದರ್ಶನವರದಿ
ರಾಣೆಬೆನ್ನೂರು: ಆರೇಮಲ್ಲಾಪುರ ಗ್ರಾಮದಲ್ಲಿ ಹೆಸ್ಕಾಂ ಕಛೇರಿಯಲ್ಲಿ ಸೇವಾ ನಿರತನಾಗಿರುವ ಜಿತೇಂದ್ರ ಎಂಬಾತನು ಗ್ರಾಮದಲ್ಲಿ ಎರಡು ಗುಂಪು ಮಾಡುವುದರ ಮೂಲಕ ಅಶಾಂತಿ ಮೂಡಿಸುವಲ್ಲಿ ಮುಂದಾಗುತ್ತಿದ್ದು ಕೂಡಲೇ ಈತನ ಮೇಲೆ ಕ್ರಮಕೈಗೊಂಡು ಅಮಾನತುಗೊಳಿಸಲು ಒತ್ತಾಯಿಸಿ ಗ್ರಾಮದ ಶರಣಬಸವೇಶ್ವರ ಮಹಾಸಂಸ್ಥಾನಮಠದ ಡಾ|| ಪ್ರಣವಾನಂದ ಗುರುಜೀ ಅವರ ನೇತೃತ್ವದಲ್ಲಿ ಹೆಸ್ಕಾಂ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಮನವಿ ಸಲ್ಲಿಸಿ ಮಾತನಾಡಿದ ಪ್ರಣವಾನಂದ ಗುರುಜೀ ಅವರು ಜೀತೇಂದ್ರ ಈತನು ಡಿ.16ರಂದು ಶಿವಾಜಿನಗರ ವಿದ್ಯುತ್ಕಂಬ ಹಾಕುವ ಸಂಬಂಧಪಟ್ಟಂತೆ ಈತನು ಗ್ರಾಮದಲ್ಲಿ ಎರಡು ಗುಂಪು ಮಾಡಿ ರಾಜಕೀಯ ಮಾಡುತ್ತಾ ಪರಸ್ಪರ ಜಗಳ ಹಚ್ಚಿ ಗ್ರಾಮದಲ್ಲಿ ಅಶಾಂತಿ ಸೃಷ್ಠಿಮಾಡಿ ಅಹಿತಕರ ಘಟನೆಗಳು ಸಂಭವಿಸುವಂತೆ ಮಾಡುತ್ತಾ ಸಾಗಿದ್ದಾನೆ. ಕೂಡಲೇ ಈತನ ಮೇಲೆ ಕ್ರಮಕೈಗೊಂಡು ಅಮಾನತ್ತುಗೊಳಿಸಲು ಮುಂದಾಗಬೇಕು ಎಂದು ಹೇಳಿದರು.
ಗ್ರಾಮದಲ್ಲಿ ಅಶಾಂತಿಯಿಂದಾಗಿ ಪರಸ್ಪರ ಅಹಿತಕರ ಘಟನೆಗಳು ಜರುಗುವಂತೆ ಪ್ರಚೋದನೆಯಲ್ಲಿ ಪರೋಕ್ಷವಾಗಿ ತೊಡಗುವುದು ಕೇಳಿಬರುತ್ತಿರುವುದು ಸಾಮಾನ್ಯ ಸಂಗತಿಯಗಿದೆ. ತಮ್ಮೊಂದಿಗೂ ಸಹ ವಾಗ್ವಾದಗಳಿಗೆ ಮುಂದಾಗಿದ್ದು, ಈತನು ವ್ಯಕ್ತಿಗತವಾಗಿ ಚಾರಿತ್ರ್ಯ ಹೀನನಾಗಿದ್ದಾನೆ. ಈತನು ಎಲ್ಲಿಲ್ಲಿ ಕಾರ್ಯನಿರ್ವಹಿಸಿದ್ದಾನೆಯೂ ಅಲ್ಲಿಯೂ ಸಹ ಇದೇ ರೀತಿಯ ರಾಜಕೀಯ ಮಾಡುತ್ತಾ ಅಶಾಂತಿಗೆ ಕಾರಣನಾಗಿದ್ದಾನೆ. ತಕ್ಷಣವೇ ಈತನನ್ನು ಕೆಲಸದಿಂದ ವಜಾಗೊಳಿಸುವಂತೆ ಸ್ವಾಮೀಜಿ ಅಗ್ರಹಿಸಿದರು. ಮನವಿ ಸಲ್ಲಿಕೆ ಮುಂಚೂಣಿಯಲ್ಲಿ ಗ್ರಾಮದ ಅನೇಕ ಗಣ್ಯರು ಹಿರಿಯ ನಾಗರೀಕರು, ಮಠಧ ಭಕ್ತರು ಪಾಲ್ಗೊಂಡಿದ್ದರು.