ಹೆಚ್ಚಿನ ರೈಲು ವ್ಯವಸ್ಯೆ ಒದಗಿಸುವಂತೆ ರೈಲ್ವೆ ಸಚಿವರಿಗೆ ಮನವಿ ಸಲ್ಲಿಕೆ

ಬಾಗಲಕೋಟ : ನಗರಕ್ಕೆ ಭೇಟಿ ನೀಡಿದ ರೇಲ್ವೆ ಸಚಿವ ಸುರೇಶ ಅಂಗಡಿಯವರನ್ನು ರಾಜ್ಯ ರೈಲ್ವೆ ಹೋರಾಟ ಸಮಿತಿಯ ಅಧ್ಯಕ್ಷರಾದ ಕುತುಬುದ್ದೀನ ಖಾಜಿ, ಉಪಾಧ್ಯಕ್ಷ ಶ್ರೀನಿವಾಸ ಬಳ್ಳಾರಿಯವರ ನೇತೃತ್ವದಲ್ಲಿ ರೈಲ್ವೆ ಸಚಿವರನ್ನು ಸಮಸ್ಯೆಗಳನ್ನು ಮನವರಿಕೆ ಮಾಡಿ ಮನವಿ ಸಲ್ಲಿಸಿದರು. 

ಸಚಿವರು ಆಗಮಿಸಿ ರೈಲು ನಿಲ್ದಾಣ ಪರಿಶೀಲಿಸಿ ಹೋರಾಟ ಸಮಿತಿಯ ಸಾರ್ವಜನಿಕ ಬೇಡಿಕೆಗಳನ್ನು ಆಲಿಸಲು ಸಮಯ ಇಲ್ಲ ಅಂತ ಹೇಳಿದ್ದು, ಹೋರಾಟ ಸಮಿತಿಯ ಸದಸ್ಯರನ್ನು ಕೆರಳಿಸಿದ್ದು ಸಮಿತಿಯ ಸದಸ್ಯರು ವಾದ ವಿವಾದಕ್ಕೆ ಇಳಿದು ಪಟ್ಟು ಬಿಡದೆ ಗೌರಿಶಂಕರ ಕಲ್ಯಾಣಮಂಟಪಕ್ಕೆ  ಧಾವಿಸಿ ಸಾರ್ವಜನಿಕ ಬೇಡಿಕೆಗಳು ರೈಲ್ವೆ ಮಾರ್ಗಗಳ ಅನುಷ್ಠಾನದ ವಿವರವನ್ನು ಮನವರಿಕೆ ಮಾಡುವಲ್ಲಿ ಯಶಸ್ವಿಯಾಗಿ ಮನವಿ ಸಲ್ಲಿಸಿದರು. 

       ಈ ಸಂದರ್ಭದಲ್ಲಿ ರಾಜ್ಯಾಧ್ಯಕ್ಷರಾದ ಕುತುಬುದ್ದೀನ ಖಾಜಿ ಮಾತನಾಡಿ ಕುಡಚಿ ಬಾಗಲಕೋಟ ರೈಲ್ವೆ ಮಾರ್ಗ ಕೆಲ ನಾಯಕರುಗಳ ಕುತಂತ್ರದಿಂದ ವಿಳಂಬವಾಗುತ್ತಿದ್ದು, ಮಾರ್ಗಕ್ಕೆ ಅಗತ್ಯವಿರುವ ಭೂಮಿಯನ್ನು ಭೂಸ್ವಾಧೀನ ಪಡಿಸಿಕೊಳ್ಳುವ ನಿಟ್ಟಿನಲ್ಲಿ ವಿಶೇಷ ಭೂಸ್ವಾಧೀನ ಅಧಿಕಾರಿಯನ್ನು ನೇಮಕಗೊಳಿಸಿ ಶೀಘ್ರ ಕಾಮಗಾರಿ ಪೂರ್ಣಗೊಳಿಸಬೇಕು. ಸರಕಾರದ ಆಶ್ವಾಸನೆಯಂತೆ ರೈತರ ಬೇಡಿಕೆಗಳನ್ನು ಈಡೇರಿಸಬೇಕು.  ರೈಲು ಸಂಖ್ಯೆ 57476 ಗುಂತಕಲ್-ತಿರುಪತಿ ಪ್ಯಾಸೆಂಜರ್ ರೈಲು ಗುಂತಕಲ್ಲ ರೈಲು ನಿಲ್ದಾಣದಲ್ಲಿ 11 ಗಂಟೆಗಳ ಕಾಲ ಖಾಲಿ ನಿಲ್ಲುತ್ತಿದ್ದು, ಬಿಜಾಪೂರವರೆಗೆ ವಿಸ್ತರಿಸಬಹುದಾಗಿದೆ. 

  ಅದರಂತೆ ಹುಬ್ಬಳ್ಳಿ-ನಿಜಾಮುದ್ದೀನ ರೈಲು ಸಂಖ್ಯೆ 17305 ಮತ್ತು ವಾಸ್ಕೋಡಿಗಾಮ-ನಿಜಾಮುದ್ದೀನ ರೈಲು ಸಂಖ್ಯೆ 12779 ಈ ಎರಡೂ ರೈಲುಗಳು ಲೋಂಡಾ ರೈಲು ನಿಲ್ದಾಣದಲ್ಲಿ ಒಟ್ಟುಗೂಡಿ ದೆಹಲಿಗೆ ತಲುಪುತ್ತಿದ್ದು, ರೈಲ್ವೆ ಇಲಾಖೆಯ ನಿಯಮಾವಳಿ ಪ್ರಕಾರ ಪ್ರತ್ಯೇಕವಾಗಿ ಓಡಬೇಕಾಗಿದ್ದು, ಹುಬ್ಬಳ್ಳಿ-ನಿಜಾಮುದ್ಧೀನಗೆ ತೆರಳುವ ರೈಲನ್ನು ಪ್ರತ್ಯೇಕಗೊಳಿಸಿ ಗದಗ-ಬಾಗಲಕೋಟ-ವಿಜಾಪೂರ ಮಾರ್ಗವಾಗಿ ಸಂಚರಿಸುವಂತೆ ಮಾಡುವಂತೆ ಗದಗ-ಸೋಲಾಪೂರ ಡೆಮೊ ರೈಲು 71303 ಗದಗ ರೈಲು ನಿಲ್ದಾಣದಲ್ಲಿ 8 ಗಂಟೆಗಳ ಖಾಲಿ ನಿಲ್ಲುತ್ತಿದ್ದು, ಬಳ್ಳಾರಿವರೆಗೆ ವಿಸ್ತರಿಸುವುದು. ರೈಲು ಸಂಖ್ಯೆ 11423-11424 ಸೋಲಾಪುರ-ಹುಬ್ಬಳ್ಳಿ ಇಂಟರಸಿಟಿ ಸ್ಥಗಿತಗೊಳಿಸಿದ್ದು, ಪುನರಾರಂಭಿಸಿ ವಾಸ್ಕೋಡಿಗಾಮಾ ಅಥವಾ ಬಳ್ಳಾರಿವರೆಗೆ ಮುಂದುವರೆಸುವುದು.

   ರೈಲು ಸಂಖ್ಯೆ 16531/16532 ಅಜಮೇರಕ್ಕೆ ತೆರಳುವ ಗರೀಬ ನವಾಜ ಎಕ್ಸ್ಪ್ರೆಸ್ ಮಾರ್ಗ ಬದಲಾಯಿಸಿ ಬಾಗಲಕೋಟ-ಬಿಜಾಪೂರ ಮಾರ್ಗವಾಗಿ ಸಂಚರಿಸುವಂತೆ ಮಾಡುವುದು. ಅದರಂತೆ ಬಾಗಲಕೋಟ ರೈಲು ನಿಲ್ದಾಣ ವಿಸ್ತರಿಸುವುದು, ಸರಕು ಸಾಗಾಣಿಕೆ ನಿಲ್ದಾಣ ಸ್ಥಳಾಂತರಿಸುವುದು, ಎರಡು ರಿಸವರ್ೇಷನ್ ಕೌಂಟರ್ಗಳನ್ನು ನಿಮರ್ಿಸುವುದು, ಪ್ಲಾಟಫಾರಂ ಪೂರ್ಣ ಪ್ರಮಾಣದ ಮೇಲ್ಛಾವಣಿ ಅಳವಡಿಸುವುದು. ನಿರ್ಮಲ ಶೌಚಾಲಯಗಳನ್ನು ನಿಮರ್ಿಸುವುದು, ನೀರಿನ ವ್ಯವಸ್ಥೆ, ಆಸನಗಳ ವ್ಯವಸ್ಥೆ ಸೇರಿದಂತೆ ಅನೇಕ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಹೇಳಿ ಪಿ.ಸಿ. ಗದ್ದಿಗೌಡರ, ಪ್ರಕಾಶ ತಪಶೆಟ್ಟಿ, ಶ್ರೀನಿವಾಸ ಬಳ್ಳಾರಿ, ಮಹಾವ್ಯವಸ್ಥಾಪಕರಾದ ಅಜಯಕುಮಾರ ಸಿಂಗ, ಮಂಜುಳಾ ಭುಸಾರಿ, ಜಯಲಕ್ಷ್ಮೀ ಗುಳಬಾಳ, ನಾರಾಯಣಸಾ ಪವಾರ, ದುರಗಪ್ಪ ಕಟ್ಟಿಮನಿ, ಕಿರಣ ರಾಠೋಡ, ಅನಿಲ ರಾಠೋಡ, ಮೈನುದ್ದೀನ ಖಾಜಿ, ರಾಜು ಕಾಶಿಮಠ, ವಿ.ಎಸ್. ಹೊಸೂರ ಸಮ್ಮುಖದಲ್ಲಿ ಮಾನ್ಯ ಸಚಿವರಿಗೆ ಮನವಿ ಪತ್ರವನ್ನು ಸಲ್ಲಿಸಿದರು.