ಬ್ಯಾಡಗಿ 08: ರಾಜ್ಯದಲ್ಲಿ ಸರ್ಕಾರಕ್ಕೆ ಅತಿಹೆಚ್ಚು ಆದಾಯ ನೀಡುವ ಅಬಕಾರಿ ಇಲಾಖೆಗೆ ಸ್ವಂತ ಕಟ್ಟಡ ನೀಡುವಂತೆ ಭ್ರಷ್ಟಾಚಾರ ವಿರೋಧಿ ಜನ ಆಂದೋಲನ ನ್ಯಾಸ ರಾಜ್ಯ ಸಂಚಾಲಕರು ಎಂ ಡಿ ಚಿಕ್ಕಣ್ಣನವರ ಅಬಕಾರಿ ಸಚಿವ ಆರ್ ಬಿ ತಿಮ್ಮಾಪುರ್ ಅವರಿಗೆ ಮನವಿಪತ್ರ ನೀಡಿ ಆಗ್ರಹಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದವರು ರಾಜ್ಯದಲ್ಲಿ ಅಬಕಾರಿ ಇಲಾಖೆಯಿಂದ ಅತೀ ಹೆಚ್ಚು ಆದಾಯ ನೀಡುವಂತೆಯಾಗಿದ್ದು ಹಲವು ಜಿಲ್ಲೆಗಳಲ್ಲಿ ಅಬಕಾರಿ ಇಲಾಖೆಗೆ ಸ್ವಂತ ಕಟ್ಟಡಗಳು ಇರುವುದಿಲ್ಲ ಅವರು ಬಾಡಿಗೆ ಕಟ್ಟಡದನ್ನು ಪಡೆದು ತಮ್ಮ ಕಾರ್ಯ ಚಟುವಟಿಕೆಗಳನ್ನು ಮಾಡುತ್ತಿದ್ದಾರೆ ಮತ್ತು ಬಾಡಿಗೆ ಪಡೆದ ಕಟ್ಟಡಗಳಲ್ಲಿ ಮೂಲ ಸೌಕರ್ಯಗಳಿಲ್ಲದಿರುವುದು ವಿಷಾಧನಿಯ ಸಂಗತಿ ಇದರಿಂದ ಸರ್ಕಾರಕ್ಕೆ ಕೋಟ್ಯಾಂತರ ರೂಪಾಯಿಗಳು ಕಟ್ಟಡದ ಬಾಡಿಗೆಗೆ ಪಾತಿಯಾಗುತ್ತೇವೆ ಕೂಡಲೇ ಮಾನ್ಯ ಸಚಿವರು ತಮ್ಮ ಅವಧಿಯಲ್ಲಿಯೇ ರಾಜ್ಯದಲ್ಲಿ ಹಾಗೂ ತಾಲೂಕುಗಳಲ್ಲಿ ಅಬಕಾರಿ ಇಲಾಖೆಗಳಿಗೆ ಸ್ವಂತ ಕಟ್ಟಡಗಳನ್ನು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.
ಈ ವೇಳೆ ಶಾಸಕ ಬಸವರಾಜ ಶಿವಣ್ಣನವರ.ಅಬಕಾರಿ ಗುತ್ತಿಗೆದಾರ ಆರ್ ನಾಗರಾಜ್.ಚನ್ನಬಸಪ್ಪ ಹುಲ್ಲತ್ತಿ.ಸುಭಾಷ ಮಾಳಗಿ ಹಾಗೂ ಅನೇಕರು ಉಪಸ್ಥಿತರಿದ್ದರು.