ಸಂಶೋಧನೆ ಎಂಬುದು ಜ್ಞಾನದ ಸಲುವಾಗಿ ನಡೆಸುವ ಹುಡುಕಾಟ: ಡಾ.ಅಪ್ಪಾಸಾಹೇಬ್

Research is the pursuit of knowledge: Dr. Appasaheb

ಬಾಗಲಕೋಟೆ ಮೇ 14: ಸಂಶೋಧನೆ  ಎಂಬುದನ್ನು ಜ್ಞಾನದ ಸಲುವಾಗಿ ನಡೆಸುವ ಹುಡುಕಾಟ ಎಂದು ವ್ಯಾಖ್ಯಾನಿಸಬಹುದು, ಅಥವಾ ಮುಕ್ತ ಮನಸ್ಸಿನಿಂದ ಯಾವುದೇ ಶಿಸ್ತುಬದ್ದ ಶೋಧನೆ, ತನಿಖೆ ಮೂಲಕ ನವೀನ ಸಂಗತಿಗಳ ಹುಟ್ಟುಹಾಕಿ ಹೊಸ ಅಥವಾ ಅಸ್ತಿತ್ವದಲ್ಲಿರುವ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವುದು. ಹಾಗೂ  ಒಂದು ವೈಜ್ಞಾನಿಕ ಪದ್ದತಿಯಂತೆ ಹೊಸ ಸಿದ್ದಾಂತಗಳ ಅಭಿವೃದ್ಧಿಪಡಿಸುವಿಕೆಯೇ ಸಂಶೋಧನೆಯಾಗಿದೆ ಎಂದು ಬಾಗಲಕೋಟೆ ವಿಶ್ವವಿದ್ಯಾಲಯದ ಕನ್ನಡ ವಿಷಯದ ಅಭ್ಯಾಸ ಮಂಡಳಿಯ ಸದಸ್ಯರು ಹಾಗೂ ಬಸವೇಶ್ವರ ವಿಜ್ಞಾನ ಮಹಾವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ.ಅಪ್ಪಾ ಸಾಹೇಬ್‌. ಎಂ. ಸತ್ಯನಾಯಕರವರು ಅಭಿಪ್ರಾಯಪಟ್ಟರು.  

ಅವರು ಇಲ್ಲಿನ ಬಸವೇಶ್ವರ ಕಲಾ ಮಹಾವಿದ್ಯಾಲಯದ ಕನ್ನಡ ವಿಭಾಗವು. ಐಚ್ಚಿಕ ಕನ್ನಡ ವಿಷಯದ ಅಂತಿಮ ಪದವಿಯ  ವಿದ್ಯಾರ್ಥಿಗಳಿಗೆ ಏರಿ​‍್ಡಸಿದ್ದ ಮೌಖಿಕ ಪರೀಕ್ಷೆಯಲ್ಲಿ ವಿಷಯ ತಜ್ಞರಾಗಿ ಭಾಗವಹಿಸಿ ಮಾತನಾಡುತ್ತಿದ್ದರು.ಅಭಿವೃದ್ಧಿ ಮೂಲಕ ಮನುಷ್ಯನ ಜ್ಞಾನವನ್ನು ನಿರ್ಧಿಷ್ಟ ಪದ್ದತಿ ಮತ್ತು ಶಿಸ್ತುಗಳಿಗೆ ಅಳವಡಿಸುವುದೇ ಆಗಿದೆ. ನಮ್ಮ ಜಗತ್ತು ಮತ್ತು ಬ್ರಹ್ಮಾಂಡದಲ್ಲಿನ ವೈಜ್ಞಾನಿಕ ಭೌತಿಕ ವಸ್ತುಗಳ ಮೇಲೆ ಸವಿಸ್ತಾರವಾದ ತಿಳಿವಳಿಕೆ ಪಡೆಯುವುದು. ಸಂಶೋಧನೆ ಎನಿಸಿಕೊಳ್ಳುತ್ತದೆ ಎಂದು ಅವರು ತಿಳಿಸಿದರು. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ನಿವೃತ್ತ ಪ್ರಾಚಾರ್ಯರಾದ ಪ್ರೊ ಬಸವರಾಜ ಆರ್ ಪಾಟೀಲ್ ಅವರು ಮಾತನಾಡುತ್ತಾ ಇವತ್ತು ಸಂಶೋಧನೆಗಳು ಸಂಶೋಧನೆಗಳಾಗಿ ಉಳಿಯದೆ ಕೇವಲ ಪದವಿಗಳಿಗಾಗಿ ಇಂಕ್ರಿಮೆಂಟ್ ಮತ್ತು ಹೆಚ್ಚುವರಿ ಸಂಬಳಕ್ಕಾಗಿ ನಡೆಯುತ್ತಿವೆ ಎಂದು ತಿಳಿಸಿದರು.  

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಪ್ರಾಚಾರ್ಯರಾದ ಪ್ರೊ ಶಂಭು ಆರ್ ಮೂಗನೂರು ಮಠ ಅವರು ಮಾತನಾಡುತ್ತಾ ಇವತ್ತಿನ ದಿನಗಳಲ್ಲಿ ಶೈಕ್ಷಣಿಕ ಕ್ಷೇತ್ರದಲ್ಲಿ ಅತಿ ಹೆಚ್ಚು ಸಂಶೋಧನೆಗಳು ನಡೆಯುತ್ತಿವೆ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಇಂಗ್ಲೀಷ್ ವಿಭಾಗದ ಮುಖ್ಯಸ್ಥರಾದ ಪ್ರೊ ಆರ್ ಸುರೇಶ್ ಅವರು ಉಪಸ್ಥಿತರಿದ್ದರು.  

ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ ಆರ್ ನಾಗರಾಜುರವರು ಪ್ರಾಸ್ತಾವಿಕ ನುಡಿಗಳನ್ನಾ ಡಿದರು. ಕನ್ನಡ ವಿಭಾಗದ ಪ್ರಾಧ್ಯಾಪಕರಾದ ಡಾ ಸಜಾನಂದ  ಡಿ ಕೆಂಗಲ ಗುತ್ತಿಯವರು ಸ್ವಾಗತಿಸಿದರು ಕನ್ನಡ ಪ್ರಾಧ್ಯಾಪಕರಾದ ಡಾ. ಎನ್‌. ಬಿ. ವಿರೂಪಾಕ್ಷಿ ಅವರು ವಂದಿಸಿದರು. ನಂತರ ವಿವಿಧ ವಿಷಯಗಳನ್ನು ಆಧರಿಸಿ ವಿದ್ಯಾರ್ಥಿಗಳು ರಚಿಸಿದ ಸಂಶೋಧನ ಕಿರು ಪ್ರಬಂಧವನ್ನು ಕುರಿತು ಮೌಖಿಕ ಪರೀಕ್ಷೆ ನಡೆಯಿತು.