ಸಂಶೋಧಕರು ಸತ್ಯದ ಅನ್ವೇಷಣೆಗೆ ಮುಂದಾಗಬೇಕು: ಪ್ರೊ.ವೈ. ಎಂ ಜಯರಾಜ್

Researchers should pursue the truth: Prof. Y. M. Jayaraj

ವಿಜಯಪುರ 24: ನಾವು ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಬಹಳ ಮುಂದುವರೆದಿದ್ದೇವೆ ಆದರೆ ಸಮಾಜ ವಿಜ್ಞಾನದ ಹಂತದಿಂದ ಬಹಳುಷ್ಟು ಪ್ರಾಚೀನರಾಗಿದ್ದೇವೆ ಎಂದು ಬಿ.ಎಲ್‌.ಡಿ.ಇ ಡೀಮ್ಡ್‌ ವಿವಿ ಸಮಕುಲಾಧಿಪತಿ ಪ್ರೊ.ವೈ.ಎಂ.ಜಯರಾಜ್ ಹೇಳಿದರು. 

ನಗರದ ಬಿ.ಎಲ್‌.ಡಿ.ಇ.ಸಂಸ್ಥೆಯ ಎಸ್‌.ಬಿ.ಕಲಾ ಹಾಗೂ ಕೆಸಿಪಿ ವಿಜ್ಞಾನ ಮಹಾವಿದ್ಯಾಲಯದಲ್ಲಿ ಐಕ್ಯುಎಸಿ,ಐಐಸಿ ಮತ್ತು ಸಂಶೋಧನೆ ಮತ್ತು ಅಭಿವೃದ್ಧಿ ಕೋಶ ಹಾಗೂ ಎಲ್ಲ ಸ್ನಾತಕೋತ್ತರ ವಿಭಾಗಗಳ ಸಹಯೋಗಲ್ಲಿ ದಿ. 23  ಬುಧವಾರದಂದು  ಆಯೋಜಿಸಲಾದ “ಸಂಶೋಧನಾ ಅಭ್ಯಾಸಗಳು: ಸಾಹಿತ್ಯ, ನೀತಿಶಾಸ್ತ್ರ, ಅಂಕಿ ಅಂಶಗಳು ಮತ್ತು ಶೈಕ್ಷಣಿಕದ” ಕುರಿತ ಒಂದು ದಿನದ ರಾಜ್ಯ ಮಟ್ಟದ (ಹೈಬ್ರಿಡ್ ಮೋಡ್) ಕಾರ್ಯಗಾರ ಉದ್ಘಾಟಿಸಿ ಮಾತನಾಡಿದ ಅವರು ಸಂಶೋಧನೆ ಎಂದರೇನು? ಅದಕ್ಕಾಗಿ ನೀವು ತೆಗೆದುಕೊಳ್ಳುವ ನಿರ್ಧಾರವೇನು.ಸಂಶೋಧಕರು ಸತ್ಯದ ಅನ್ವೇಷಣೆಯಲ್ಲಿ ಹೋಗಬೇಕು. ಅದು ಏನು,ಅದು ಏಕೆ, ಎಲ್ಲಿದೆ,ಈ ಎಲ್ಲಾ ಪ್ರಶ್ನೆಗಳು ಅಂತಿಮವಾಗಿ ಹೇಗೆ ರೂಪಿಸುತ್ತವೆ ಮತ್ತು ವಿಶೇಷವಾಗಿ ಸಂಶೋಧನೆಯು ಇತ್ತೀಚಿನ ಎಐ ಹಾಗು ಡಿಜಿಟಲ್ ತಂತ್ರಜ್ಞಾನದಿಂದಾಗಿ ಸರಳೀಕರಣವಾಗಿವೆ. ಹೊಸ ಆವಿಷ್ಕಾರಗಳು ಮತ್ತು ನಾವೀನ್ಯತೆಗಳು ಮೂಲಕ ವಿನೂತನವಾದ ಸಂಶೋಧನೆಯನ್ನು ಕೈಗೊಳ್ಳಬಹುದಾಗಿದೆ. ಇಂದಿನ ಆಧುನಿಕ ಯುಗದಲ್ಲಿ ಹಲವಾರು ಇತ್ತೀಚೆಗಿನ ಘಟನೆಗಳು ನಿದರ್ಶನ ಬಹುಶಃ ನಾವು ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಬಹಳ ಮುಂದುವರಿದಿದ್ದೇವೆ ಆದರೆ ಸಮಾಜ ವಿಜ್ಞಾನದ ಹಂತದಿಂದ ಬಹಳಷ್ಟು ಪ್ರಾಚೀನರಾಗಿದ್ದೇವೆ. ಕಳೆದ ಕೆಲವು ದಿನಗಳ ಹಿಂದೆ ಕಾಶ್ಮೀರದಲ್ಲಿ ಘಟನೆ ಸ್ಮರಿಸಬಹುದು  ಜಾಗತಿಕ ಮಟ್ಟದಲ್ಲಿ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಗೆ  ಮುನ್ನೆಲೆಗೆ ಬರುತ್ತಿದೆ ಯಾರು ಏಕೆ ಕೊಂದರು ಏಕೆ ಬಲಿಯಾದರು? ಸಂಘರ್ಷಕ್ಕೆ ಹಿಂದೂವೇ ಅಥವಾ ಧಾರ್ಮಿಕ ಸಂಘರ್ಷವೇ ನಮಗೆ ಗೊತ್ತಿಲ್ಲದ ಸಾಮಾಜಿಕ ಪರಿಕಲ್ಪನೆಯೇ? ಇದು ರಾಷ್ಟ್ರೀಯ ದೃಷ್ಟಿಕೋನವನ್ನು ನೀಡಿ ಯಾರು ಕೊಲ್ಲುತ್ತಿದ್ದಾರೆ? ಇದು ಶಂಶೋಧಕರಿಗೆ ಮುಂದೆ ಸಂಶೋಧನೆಯಾಗಿದೆ ಎಂದರು.ಇಂತಹ ಹಲವಾರು ಘಟನೆಗಳ ಗೊತ್ತಿಲ್ಲದ ವಿಷಯಗಳನ್ನು ಸಂಶೋಧನೆಗಳಿಂದ ಗೊಂದಲ ನಿವಾರಣೆ ಅಲ್ಲದೆ ವಿಷಯದ ಆಳವನ್ನು ಹೆಕ್ಕಿ ತೆಗೆಯಲು ನಮಗೆ ಸಂಶೋಧನೆ ಅನುಕೂಲರವಾಗಿವೆ ಎಂದು ಹೇಳಿದರು. 

ಈ ವೇಳೆಯಲ್ಲಿ ಕಾರ್ಯಗಾರದಲ್ಲಿ ಒಟ್ಟು ನಾಲ್ಕು ಅಧಿವೇಶನದಲ್ಲಿ ಮುಖ್ಯ ಸಂಪನ್ಮೋಲ ವ್ಯಕ್ತಿಗಳಾಗಿ ಬೆಂಗಳೂರಿನ ರಾಷ್ಟ್ರೀಯ ಏರೋಸ್ಪೇಸ್‌ನ ಐಸಿಎಎಸ್‌ಟಿಯ ಮಾಜಿ ಮುಖ್ಯಸ್ಥರು, ಡಾ. ಐ. ಆರ್‌. ಎನ್‌. ಗೌಡರ್ ‘ಸಾಹಿತ್ಯ ವಿಮರ್ಶೆ ಮತ್ತು ಶೈಕ್ಷಣಿಕ ಸಂಶೋಧನೆಗಾಗಿ ಇ-ಸಂಪನ್ಮೂಲಗಳು’ ಮತ್ತು ‘ಸಂಶೋಧನಾ ಗುಣಮಟ್ಟ, ಪ್ರಕಟಣೆ ನೀತಿಶಾಸ್ತ್ರ ಮತ್ತು ಆಯ್ಕೆ ಜರ್ನಲ್‌ಗಳು’ ಕುರಿತು ವಿಚಾರ ಮಂಡಿಸಿದರು, 

ವಿಜಯಪುರದ ಬಿ ಎಲ್ ಡಿ ಇ ಡೀಮ್ಡ್‌ ವಿಶ್ವವಿದ್ಯಾಲಯದ ಮುಖ್ಯ ಗ್ರಂಥಪಾಲಕರು ಡಾ.ಪ್ರಸನ್ನಕುಮಾರ್ ಬಿ.ಎಂ. ಅವರು ‘ಪುನರ್ ಕಲ್ಪಿಸಿದ ಸಂಶೋಧನೆ:ವಿದ್ಯಾರ್ಥಿವೇತನದಲ್ಲಿ ಎಐ ಶಕ್ತಿಯನ್ನು ಬಳಸಿಕೊಳ್ಳುವುದು’ ಬಗ್ಗೆ ಹಾಗೂ ವಿಜಯಪುರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಲೈಬ್ರರಿ ವಿಭಾಗ ್ಘ ಮಾಹಿತಿ ವಿಜ್ಞಾನದ ಪ್ರಾಧ್ಯಾಪಕ, ಪ್ರೊ.ಗವಿಸಿದ್ದಪ್ಪ ಆನಂದಳ್ಳಿ ‘ಎಸ್ ಪಿ ಎಸ್ ಎಸ್ ಸರಳೀಕರಣ: ಡೇಟಾ ವಿಶ್ಲೇಷಣೆಯ ಶಕ್ತಿಯನ್ನು ಅನ್‌ಲಾಕ್ ಮಾಡುವುದರ’ ಬಗ್ಗೆ  ವಿಚಾರವನ್ನು  ಮಂಡಿಸಿದರು.  

ಸಾಯಂಕಾಲ ಸಮಾರೋಪ ಸಮಾರಂಭ ಕಾರ್ಯಕ್ರಮ ಜರುಗಿತು ಪ್ರಾಚಾರ್ಯೆ ಡಾ ಆರ್‌.ಎಂ.ಮಿರ್ದೆ ಅಧ್ಯಕ್ಷತೆ ವಹಿಸಿ ಮಾತನಾಡಿದರು. 

ಪ್ರೊ.ವಿದ್ಯಾ ಪಾಟೀಲ ಕಾರ್ಯಕ್ರಮದ ಸಂಪೂರ್ಣ ವರದಿ ಓದಿದರು.  

ಈ ಸಂದರ್ಭದಲ್ಲಿ ಉಪಪ್ರಾಚಾರ್ಯ ಅನಿಲ ಬಿ. ನಾಯಕ್, ಐಕ್ಯೂಎಸಿ ನಿರ್ದೇಶಕ ಡಾ.ಪಿ.ಎಸ್‌.ಪಾಟೀಲ, ಸಂಶೋಧನೆ ಮತ್ತು ಅಭಿವೃದ್ಧಿ ಕೋಶದ ಸಂಯೋಜಕರು ಡಾ. ಮಹೇಶ್ ಕುಮಾರ್ ಕೆ. ಪ್ರೊ. ಆರ್‌. ಡಿ. ಜೋಶಿ, ಡಾ. ಗಿರಿಜಾ ನಿಂಬಾಳ್, ಡಾ. ಎಸ್‌. ಎನ್‌. ಉಂಕಿ ಪ್ರೋ.ಸಂತೋಷ ವಂಭಾಸೆ, ಪ್ರೋ.ಸ್ವೇತಾ ಸವನೂರ, ಡಾ.ಶ್ರೀನಿವಾಸ ದೊಡ್ಡಮನಿ, ಪ್ರೊ.ಸೌಮ್ಯ ಸಜ್ಜನ್ ಡಾ. ಅಮಿತ್ ತೇರ್ದಾಳೆ,ಡಾ.ಕೃಷ್ಣಾ ಮಂಡ್ಲಾ,ಡಾ.ತರನ್ನುಮ್ ಜಬೀನಖಾನ್, ಮಹಾವಿದ್ಯಾಲಯದ ಬೋಧಕರ, ಬೋಧಕೇತರ ಸಿಬ್ಬಂದಿ, ಸಂಶೋಧನಾರ್ಥಿಗಳು ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. 

ಪ್ರೋ.ಪವನಕುಮಾರ ಮಹೀಂದ್ರಕರ್ ತಾಂತ್ರಿಕ ವ್ಯವಸ್ಥೆ ನಿರ್ವಹಿಸಿದರು, ಗಣ್ಯರನ್ನು ಡಾ.ಧಾನೇಶ್ವರಿ ಮೂಲಿಮನಿ ಸ್ವಾಗತಿಸಿದರು,ಕುಮಾರಿ ಪ್ರಿಯಾಂಕಾ ಭೂಶೆಟ್ಟಿ ಪ್ರಾರ್ಥಿಸಿದರು, ಕುಮಾರ್ ವಾದಿರಾಜ ಕುಲಕರ್ಣಿ ಕಾರ್ಯಕ್ರಮವನ್ನು ನಿರೂಪಿಸಿದರು. ಡಾ.ಮಂಜುನಾಥ ಹೆಚ್ ಎಂ ವಂದಿಸಿದರು.