ದಾಖಲೆಗಳ ಪರಿಶೀಲನಾ ಘಟಕಕ್ಕೆ ನ್ಯಾಯಾಧೀಶರಿಂದ ಚಾಲನೆ

ಹಾವೇರಿ06:ಜಿಲ್ಲಾ ಕೇಂದ್ರಗಳಲ್ಲಿ ವೃತ್ತಿಪರ ಕೋರ್ಸಗಳ ಪ್ರವೇಶಕ್ಕಾಗಿ ಸಾಮಾನ್ಯ ಅರ್ಹತಾ ಪರೀಕ್ಷೆಯಲ್ಲಿ ಉತ್ತೀರ್ಣರಾದ ವಿದ್ಯಾಥರ್ಿಗಳ ದಾಖಲೆ ಪರಶೀಲನೆ ಘಟಕ ಸ್ಥಾಪಿಸಿರುವುದು ಗ್ರಾಮೀಣ ಪ್ರದೇಶದ ವಿದ್ಯಾಥರ್ಿಗಳಿಗೆ ಅನುಕೂಲವಾಗಿದೆ ಎಂದು ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಕೆ.ಸಿ.ಸದಾನಂದಸ್ವಾಮಿ ಹೇಳಿದರು.

  ನಗರದ ಗುದ್ಲೆಪ್ಪ ಹಳ್ಳಿಕೇರಿ ಪದವಿ ಪೂರ್ವ ಕಾಲೇಜಿನಲ್ಲಿ ವೃತ್ತಿಪರ ಕೋರ್ಸಗಳ ಪ್ರವೇಶಕ್ಕಾಗಿ ಸಾಮಾನ್ಯ ಅರ್ಹತಾ ಪರೀಕ್ಷೆ(ಸಿಇಟಿ)ಯಲ್ಲಿ  ಉತ್ತೀರ್ಣರಾದ ವಿದ್ಯಾಥರ್ಿಗಳ ದಾಖಲೆಗಳ ಪರಶೀಲನೆಗಾಗಿ ಸ್ಥಾಪಿಸಲಾದ  ಘಟಕವನ್ನು ಅವರು  ಉದ್ಘಾಟಿಸಿದರು.

 ಪ್ರಸಕ್ತ 2019-20ನೇ ಸಾಲಿನ ವೃತ್ತಿಪರ ಕೋಸರ್ುಗಳ ಪ್ರವೇಶಕ್ಕಾಗಿ ಸಾಮಾನ್ಯ ಅರ್ಹತಾ ಪರೀಕ್ಷೆ(ಸಿಇಟಿ)ಯಲ್ಲಿ ಅರ್ಹತೆ ಪಡೆದ ವಿದ್ಯಾಥರ್ಿಗಳ ವೃತ್ತಿಪರ ಕೋಸರ್ುಗಳ ಆನ್ಲೈನ್ ಕೌನ್ಸಲಿಂಗ್ ಮೂಲಕ ಪ್ರವೇಶಕ್ಕೆ ಆಯ್ಕೆ ಮಾಡಲು ದಾಖಲೆಗಳ ಪರಿಶೀಲನೆ ಕಾರ್ಯ ಇಂದಿನಿಂದ ಆರಂಭಗೊಂಡಿದೆ ಎಂದು 

ಪದವಿ ಪೂರ್ವ ವೃತ್ತಿ ಶಿಕ್ಷಣ ಇಲಾಖೆ ಉಪನಿದರ್ೆಶಕ ಎಸ್.ಸಿ.ಪೀರಜಾದೆ ತಿಳಿಸಿದರು.

 ಕೆ.ಎಲ್.ಇ.ಸಂಸ್ಥೆಯ ಉಪಾಧ್ಯಕ್ಷ ಎಂ.ಸಿ.ಕೊಳ್ಳಿ, ನೋಡಲ್ ಅಧಿಕಾರಿ ಜಿ.ವಿ.ಬೆಳವಿಗಿ, ಉಪ ನೋಡಲ್ ಅಧಿಕಾರಿ ಗಟ್ಟಿಸಿದ್ದಪ್ಪನವರ, ಪರಿಶೀಲನಾಧಿಕಾರಿಗಳಾದ ಎಂ.ಆಂಜನೇಯ, ಕಾಂತೇಶ ಸಿದ್ದಣ್ಣನವರ, ಪ್ರಾಚಾರ್ಯ ಜೆ.ಆರ್.ಶಿಂಧೆ ಇತರರು ಉಪಸ್ಥಿತರಿದ್ದರು