ಮ್ಯಾರಾಥಾನ ಓಟಕ್ಕೆ ಚಾಲನೆ

ಲೋಕದರ್ಶನ ವರದಿ

ಶಿಗ್ಗಾವಿ 15:ರಾಷ್ಟ್ರ ಲಾಂಛನ ಧರಿಸುವ ಅಧಿಕಾರವಿರುವುದು ಕೇವಲ 2 ಜನರಿಗೆ ಮಾತ್ರ, ಒಂದು ಸೈನಿಕರಿಗೆ ಇನ್ನೊಬ್ಬರು ಪೋಲೀಸ್ರಿಗೆ ಇಂತಹ ಮಾಹಾನ್ ವ್ಯಕ್ತಿಗಳಿಗೆ ದೇಶದ ಜವಾಬ್ದಾರಿಯನ್ನು ನೀಡಲಾಗಿದೆ ಅದನ್ನು ಅವರ ಕರ್ತವ್ಯವೆಂದು ಭಾವಿಸಿ ತಮ್ಮ ಜೀವದ ಹಂಗು ತೊರೆದು ಕಾಪಾಡುವಲ್ಲಿ ನಿರತರಾಗಿದ್ದಾರೆ ಅವರಿಗೊಂದು ನಮ್ಮ ನಮಸ್ಕಾರ ಎಂದು ತಾಲೂಕಾ ಸರಕಾರಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಹನುಮಂತಪ್ಪ ಪಿ ಎಚ್ ಮಾಮರ್ಿಕವಾಗಿ ನುಡಿದರು.

            ಪಟ್ಟಣದ ಸಂತೆ ಮೈದಾನದಲ್ಲಿ ಗಂಗೀಭಾವಿ 10 ನೇ ಪಡೆಯ ವತಿಯಿಂದ ಭಾರತೀಯ ಹುತಾತ್ಮ ಯೋಧರ ಸ್ಮರಣಾರ್ಥವಾಗಿ ಹಮ್ಮಿಕೊಂಡ ಮ್ಯಾರಾಥಾನ ಓಟಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ದಿನದ 24 ಘಂಟೆಗಳ ಕಾಲ ತಮ್ಮದೇ ಆದ ಸೇವೆಯನ್ನು ಸಾರ್ವಜನಿಕರಿಗೆ ನೀಡುವ ಪೋಲೀಸ್ ಇಲಾಖೆಯ ಕಾರ್ಯ ಶ್ಲಾಘನೀಯ ಜೊತೆಗೆ ತಮ್ಮ ಪ್ರಾಣವನ್ನು ಒತ್ತೆ ಇಟ್ಟು ಹೋರಾಡುವ ಸೈನಿಕರ ನೆನಪು ಪ್ರತಿಯೊಬ್ಬರಿಗೂ ಬೇಕಿದೆ ಆ ನಿಟ್ಟಿನಲ್ಲಿ ನಿಮ್ಮ ಕಾರ್ಯಕ್ಕೆ ನಾವೆಲ್ಲರೂ ಹೆಮ್ಮೆ ಪಡುವಂತಿರಬೇಕು ಎಂದರು.

            10 ನೇ ಪಡೆಯ ಕಮಾಂಡೆಂಟ್ ಬಿ ಎಮ್ ಪ್ರಸಾದ್ ಮಾತನಾಡಿ, ಪೋಲೀಸ್ ಮತ್ತು ಹುತಾತ್ಮ ಯೋಧರ ಸ್ಮರಣಾರ್ಥವಾಗಿ ಹಮ್ಮಿಕೊಂಡಿರುವ ಈ ವಿಶೇಷ ಕಾರ್ಯಕ್ರಮದಲ್ಲಿ ಸಾಂಸ್ಕೃತಿಕ ಮತ್ತು ವಿವಿಧ ಧೈಹಿಕ ಕಸರತ್ತಿನ (ಆರೋಗ್ಯಯುತ) ಸ್ಪದರ್ೆಗಳನ್ನು ಹಮ್ಮಿಕೊಂಡಿದ್ದು ಭಾಗವಹಿಸಿ ಪ್ರಥಮ, ದ್ವೀತೀಯ ಮತ್ತು ತೃತೀಯ ಸ್ಥಾನ ಪಡೆದು ಸ್ಪಧರ್ಾಳುಗಳಿಗೆ ಬಹುಮಾನ ನೀಡಲಾಗುವುದು ಎಂದು ತಿಳಿಸಿದರು.

            ಈ ಸಂದರ್ಭದಲ್ಲಿ ತಾಲೂಕಾ ಆಸ್ಪತ್ರೆಯ ವೈದ್ಯರು ಹಾಗೂ ಸಿಬ್ಬಂದಿ ಸೇರಿದಂತೆ 10 ನೇ ಪಡೆಯ ಪೋಲೀಸ್ರು ಹಾಗೂ ಶಿಗ್ಗಾವಿ ಪೋಲಿಸ್ ಸ್ಟೇಷನ್ನ ಪೋಲಿಸ್ರು ಮ್ಯಾರಾಥಾನ್ ಓಟಕ್ಕೆ ಸಾಥ್ ನೀಡಿದರು.