ಎಸ್.ಸಿ. ವರ್ಗೀಕರಣ ಕುರಿತು ಮಾಜಿ ಸಚಿವ ಬಿ, ಶ್ರೀರಾಮುಲು ನೇತೃತ್ವದಲ್ಲಿ ಬೃಹತ್ ತಮಟೆ ಚಳುವಳಿ
ಬಳ್ಳಾರಿ 04: ನಗರದಲ್ಲಿ ಅಂಬೇಡ್ಕರ್ ಕಾಂಪ್ಲೆಕ್ಸ್ ದಿಂದ ಗಡಿಗಿ ಚೆನ್ನಪ್ಪ ಸರ್ಕಲ್ ಮೂಲಕ ಜಿಲ್ಲಾ ಕಚೇರಿಯವರಿಗೆ ದಲಿತ ಸಂಘರ್ಷ ಸಮಿತಿ ಸಿ ರಘು ರವರ ಬಣದ ಜಿಲ್ಲಾ ಮಟ್ಟದ ವತಿಯಿಂದ ಬೃಹತ್ ತಮಟೆ ಚಳುವಳಿಯು ಮಾಡಲಾಯಿತು.ಹಾಗೂ ಎಸ್ಸಿ ಎ, ಬಿ, ಸಿ, ವರ್ಗಿಕರಣ ಮಾಡಬೇಕೆಂದು ಒತ್ತಾಯಿಸಿ ಜಿಲ್ಲಾಧಿಕಾರಿಯ ಮುಖಾಂತರ ರಾಜ್ಯದ ಮಾನ್ಯ ಮುಖ್ಯಮಂತ್ರಿಯವರಿಗೆ ಮನವಿ ಪತ್ರವನ್ನು ಸಲ್ಲಿಸಿದರು.
ಇದೇ ವೇಳೆಯಲ್ಲಿ ದಲಿತ ಸಂಘರ್ಷ ಸಮಿತಿ ಜಿಲ್ಲಾಧ್ಯಕ್ಷರು ಸುರೇಶ ಮಾತನಾಡಿ, ನಮ್ಮ ಭಾರತದೇಶದ ಮೂಲ ನಿವಾಸಿಗಳಾದ ದ್ರಾವಿಡ ವಂಶಸ್ಥರಾದ ನಾವು 30 ವರ್ಷಗಳಿಂದ ನಿರಂತರ ಹೋರಾಟ ಮಾಡಿಕೊಂಡು ಈ ಹೋರಾಟದಲ್ಲಿ ನಮ್ಮ ಸಮಾಜದ ಹಿರಿಯರು ಎಷ್ಟು ಜನ ಪ್ರಾಣ ತ್ಯಾಗ ಮಾಡಿದ್ದಾರೆ. ನಮ್ಮ ಮಾದಿಗ ಜನಾಂಗಕ್ಕೆ ಶೋಷಣೆ ದಬ್ಬಾಳಿಕೆ, ದೌರ್ಜನ್ಯ ಮತ್ತು ಹಳ್ಳಿ- ನಗರದಲ್ಲಿ ಇವತ್ತಿಗೂ ಅಸ್ಪೃಶ್ಯತೆ ಮತ್ತು ಜೀವಂತ ಇರುವುದರಿಂದ ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯ ಆಗುವುದರಿಂದ ದಲಿತರ ಮಕ್ಕಳಿಗೆ ಶಿಕ್ಷಣದ ಕೊರತೆಯಿಂದ ಮುಕ್ತರಾಗಿ ನಮ್ಮ ಮಾದಿಗ ಜನಾಂಗಕ್ಕೆ ಎಸ್.ಸಿ. ವರ್ಗೀಕರಣ ಮಾಡಬೇಕೆಂದು ಆಯಾ ರಾಜ್ಯಗಳಲ್ಲಿ ಸುಪ್ರಿಂ ಕೋರ್ಟ್ನಲ್ಲಿ ಆದೇಶ ಮಾಡಲಾಗಿದೆ.ಆದರೆ ಇವತ್ತಿಗೂ ರಾಜ್ಯ ಸರ್ಕಾರವು ವಿಳಂಬ ಮಾಡುತ್ತಾ ಬಂದಿದೆ.ಆದ್ದರಿಂದ ಮಾನ್ಯ ರಾಜ್ಯ ಸರ್ಕಾರದ ಮುಖ್ಯಮಂತ್ರಿಗಳು ಮಾದಿಗ ಜನಾಂಗಕ್ಕೆ ಗುರುತಿಸಿ ನಮ್ಮ ಸಮಾನತೆ ಏಳಿಗೆಗಾಗಿ ಮತ್ತು ಅಭಿವೃದ್ಧಿಗಾಗಿ ಅತಿ ಶೀಘ್ರದಲ್ಲಿ ಕಮಿಟಿ ರಚನೆ ಮಾಡಿ ಎಸ್.ಸಿ.ಎ ಬಿ ಸಿ ವರ್ಗೀಕರಣವ ಮಾಡಬೇಕೆಂದು ಇಡೀ ಕರ್ನಾಟಕ ಮಾದಿಗ ಜನಾಂಗಕ್ಕೆ ನ್ಯಾಯ ಒದಗಿಸಬೇಕೆಂದು ಹೇಳಿದರು.ಹಾಗೂ ಪಂಜಾಬ್ ರಾಜ್ಯದ ಅಮೃತ್ಸರ್ ನಲ್ಲಿ ಡಾಽ ಬಿ.ಆರ್.ಅಂಬೇಡ್ಕರ್ ಪುತ್ಥಳಿಯನ್ನು ವಿರುಪಗೊಳಿಸಿದ ವ್ಯಕ್ತಿಯನ್ನು ನ್ಯಾಯಾಲಯ ಯಾವುದೇ ಬೇಲ್ ಮಂಜೂರಾತಿ ಮಾಡದೆ ಕ್ರಮ ಕೈಗೊಳ್ಳಬೇಕೆಂದು ಮತ್ತು ಪಂಜಾಬ್ ರಾಜ್ಯದಿಂದ ಗಡಿಪಾರು ಮಾಡಬೇಕೆಂದು ಕರ್ನಾಟದ ದಲಿತ ಸಂಘರ್ಷ ಸಮಿತಿ ಡಾಽ ಸಿ.ಎಸ್. ರಘು ಬಣ ಸಂಘದ ಸದಸ್ಯರುಗಳು ವತಿಯಿಂದ ಮತ್ತು ಬಳ್ಳಾರಿ ಜಿಲ್ಲಾ ಮಟ್ಟದ ವತಿಯಿಂದ ಬೃಹತ್ ತಮಟೆ ಚಳುವಳಿಯನ್ನು ಮಾಡಿದ್ದೇವೆ ಎಂದು ತಿಳಿಸಿದರು.
ತರುವಾಯ ಈ ನಮ್ಮ ಚಳುವಳಿ ಹಾಗೂ ಮನವಿಗೆ ಎಸ್ ಸಿ ವರ್ಗೀಕರಣದ ಕುರಿತು ಸ್ಪಂದಿಸದೆ ಇದ್ದರೆ, ಮುಂದಿನ ದಿನಗಳಲ್ಲಿ ಎಡೆಬಿಡದೆ ನಿರಂತರವಾಗಿ ರಾಜ್ಯಮಟ್ಟದಲ್ಲಿ ಬೆಂಗಳೂರಿನ ವಿಧಾನಸೌಧದ ಮುಂದುಗಡೆಯಲ್ಲಿ ಪ್ರತಿಭಟನೆ ಮಾಡುತ್ತವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಈ ಸಂದರ್ಭದಲ್ಲಿ ಹನುಮಂತಪ್ಪ,ನಾಗರಾಜ್ ಸಂಗನಕಲ್ಲು,ಅರ್ಜುನ್ ಕೌಲ್ ಬಜಾರ್, ಭೀಮ ಲಿಂಗಪ್ಪ,ಅಶೋಕ, ಶಿವು, ಲಕ್ಷ್ಮಣ್ ಭಂಡಾರಿ, ನಾಗೇಶ್, ಲಕ್ಷ್ಮಣ, ಸಂಘದ ಸದಸ್ಯರು ವಿವಿಧ ಪದಾಧಿಕಾರಿಗಳು ದಲಿತ ಮುಖಂಡರು ಈ ಚಳುವಳಿಯಲ್ಲಿ ನೆರೆದಿದ್ದರು.