ಎಸ್‌ಎಸ್‌ಎಲ್‌ಸಿ ಹೋರ್ತಿ ಸೋಮೇಶ್ವರ ಪ್ರೌಢಶಾಲೆ ಉತ್ತಮ ಸಾಧನೆ

SSLC Horthi Someshwara High School achieves excellent results

ಎಸ್‌ಎಸ್‌ಎಲ್‌ಸಿ ಹೋರ್ತಿ ಸೋಮೇಶ್ವರ ಪ್ರೌಢಶಾಲೆ ಉತ್ತಮ ಸಾಧನೆ  

ಲೋಕದರ್ಶನ ವರದಿ   

ಇಂಡಿ 14: ತಾಲೂಕಿನ ಹೋರ್ತಿ 2024-25ನೇ ಸಾಲಿನ ಸೋಮೇಶ್ವರ ಪ್ರೌಢ ಶಾಲೆಯ ಮಕ್ಕಳು ಉತ್ತಮ ಸಾಧನೆ ಮಾಡಿದ್ದಾರೆ.  

ಈ ಬಾರಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲಿ ರಮ್ಯಾ ಚ. ಬಿರಾದಾರ 584(ಶೇ. 93.44) ಅಂಕಗಳು ತಗೆದುಕೊಂಡು ಪ್ರಥಮ ಶ್ರೇಣಿಯಲ್ಲಿ ತೇರ್ಗಡೆಯಾಗಿ ಶಾಲೆಗೆ ಪ್ರಥಮ ಸ್ಥಾನ ಪಡೆದರೆ, ಚೈತನ್ಯ ಪ. ತಳವಾರ 580 (ಶೇ. 93) ದ್ವಿತೀಯ ಸ್ಥಾನ ಪಡೆದಿದ್ದಾರೆ. ತ್ರಿವೇಣಿ ರ. ನೇಸೂರ 570(ಶೇ. 91) ತೃತೀಯ ಸ್ಥಾನ ಪಡೆದಿದ್ದಾರೆ. ಹಾಗೂ ಆಶೀಷ ಜಾಧವ 568(ಶೇ. 91) ಉತ್ತಮ ದರ್ಜೆಯಲ್ಲಿ ಉತೀರ್ಣ ಆಗಿದ್ದು, ಶಾಲೆಗೆ ಕೀರ್ತಿಯನ್ನು ತಂದುಕೊಟ್ಟಿದ್ದಾರೆ. ಇವರ ಸಾಧನೆಗೆ ಸೋಮೇಶ್ವರ ಪ್ರೌಢಶಾಲೆಯ ಸಂಸ್ಥೆಯ ಅಧ್ಯಕ್ಷ ಅನಿತಾ ಗು ಭೋಸಗಿ, ಸಂಸ್ಥೆಯ ಆಡಳಿತ ಮಂಡಳಿ ಹಾಗೂ ಮಲ್ಲಿಕಾರ್ಜುನ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಗುರು ಬಿ ಬಿ ಗಡ್ಡದ, ಶಾಲೆಯ ಹಿತೈಸಿಗಳಾದ ಗುರುನಾಥ ಭೋಸಗಿ. ಪಿಕೆಪಿಎಸ್ ಹೊರ್ತಿ ಕಾರ್ಯದರ್ಶಿ ಎ ಬಿ ಪೂಜಾರಿ ಹಾಗೂ ಸೋಮೇಶ್ವರ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಸಿ.ಚ್‌. ಕೋಳಿ ಹಾಗೂ ಶಾಲೆಯ ಎಲ್ಲ ಶಿಕ್ಷಕ ವೃಂದ ಹರ್ಷ ವ್ಯಕ್ತಪಡಿಸಿದ್ದಾರೆ.