ಲೋಕದರ್ಶನ ವರದಿ
ಗುರಕರ ಸಂಜಾತರಿಗೆ ಮೋಕ್ಷ : ಸಿದ್ದ ಶಿವಯೋಗಿ ಶಿವಚಾರ್ಯ ಮಹಾಸ್ವಾಮಿಗಳು
ಯರಗಟ್ಟಿ, 27 : ಸಮೀಪದ ಕೋಟೂರ ಶಿವಾಪೂರ ಗ್ರಾಮದ ಶ್ರೀ ಚರಂತಯ್ಯ ಗುರು ಪಟ್ಟಾಧಿಕಾರ ಪ್ರಯುಕ್ತ ಶನಿವಾರ ಜರುಗಿದ ಪುರಾಣ ಪ್ರವಚನ ಕಾರ್ಯಕ್ರಮದಲ್ಲಿ ಹೋಟ್ಟೆಯಲ್ಲಿ ಮಕ್ಕಳು ಹುಟ್ಟದೇ ಇದ್ದರೆ ಮೊಕ್ಷ ಆಗುವುದಿಲ್ಲ ಎಂಬ ಮಾತು ಲೌಕಿಕವಲ್ಲ ಇದರ ಅರ್ಥವೇ ಬೇರೆ ಅದು ಎನೆಂದರೆ ನಾವು ಯಾರೇ ಇರಲಿ ಗುರುವಿನ ಕರ ಸಂಜಾತರಾಗಬೇಕು. ಗುರುವಿನಿಂದ ದಿಕ್ಷೆಯನ್ನು ಪಡೆದುಕೋಳ್ಳಬೇಕು.
ಗುರುವಿಗೆ ಜಾತಿವಿಲ್ಲ,ಮಕ್ಕಳಾಗದವರಿಗೆ ಮೋಕ್ಷವಿಲ್ಲ, ಹೋಟ್ಟೆಯಲ್ಲಿ ಮಕ್ಕಳಾಗುವುದು ಮುಖ್ಯವಲ್ಲ ,ಮನುಷ್ಯ ಸಂಸ್ಕಾರವಂತನಾಗಬೇಕು,ಸಂಸ್ಕೃತಿವಂತನಾಗಬೇಕು.ಆ ಸಂಸ್ಕೃತಿ ಸಂಸ್ಕಾರ ಯಾರಿಂದ ದೊರೆಯುತ್ತದೆ ಎಂದರೆ ಶ್ರೀ ಗುರುವಿನಿಂದ ಆ ಗುರುವಿನ ಸೇವೆಯನ್ನು ಮಾಡಿ ಗುರು ಕರುಣೆಯನ್ನು ಪಡೆದುಕೋಂಡರೆ ಗುರುವಿನಿಂದ ದಿಕ್ಷೆಯನ್ನು ಹೋಂದಿದರೆ ಅಂತವರು ಯಾರು ಹೋಂದಿರುತಾರೊ ಅವರು ಗುರುವಿಗೆ ಮಕ್ಕಳಾಗುತ್ತಾರೆ. ಗುರು ತಂದೆ-ತಾಯಿ ಸ್ವರುಪನಾಗುತ್ತಾರೆ ಅವರಿಗೆ ಮೋಕ್ಷ ಇದೆ.
ತಂದೆ-ತಾಯಿ ಹೋಟ್ಟೆಯಲ್ಲಿ ಹುಟ್ಟಿ ಬಂದಿದ್ದು ಒಂದನೇ ಜನ್ಮ ಎರಡನೆಯದು ಗುರುವಿನ ಸಂಸ್ಕಾರದಿಂದ ,ಗುರುವಿನ ಅಂತಃಕರುನೆಯಿಂದ ದಿಕ್ಷೆಯಿಂದ ಮರುಜನ್ಮ ಸಿಗುತ್ತದೆ ಎಂದು ಮಾನವ ಜನ್ಮಕ್ಕೆ, ಪಾಲ್ಗೊಂಡು ಅವರು. ತಮ್ಮ ಪ್ರವಚಣ ದಲ್ಲಿ ಅಂತೂರ-ಬೇಂತೂರ ಕುಮಾರದೇವರು ಮಾತನಾಡಿದರು.
ಧಿವ್ಯ ಸಾನಿದ್ಯ ವಹಿಸಿದ ಸಿದ್ದ ಶಿವಯೋಹಿ ಶಿವಚಾರ್ಯ ಮಹಾಸ್ವಾಮಿಗಳು ಪತ್ರಿವನಮಠ ನರಗುಂದ ಇವರು ಸಂಸ್ಕಾರದ ಬಗ್ಗೆ ತಂದೆ-ತಾಯಿಗಳು ಮಕ್ಕಳಿಗೆ ಅರಿವು ಮುಡಿಸಬೆಕೆಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ಮಹಾದೇವ ಬಾವಿಹಾಳ, ಚನ್ನಪ್ಪ ಬೆನಚನ್ನಮರಡಿ, ರಾಮನ್ನ ಬಡಿಗೇರ, ಮಾಹಾಂತೇಶ ತೋಟಗಿ, ಪ್ರಜ್ವಲ್ ಹಿರೇಮಠ, ಪ್ರವೀಣ ವಿಭೂತಿ, ರಮೇಶ ಅರಭಾಟ,ಸಿಂಗಯ್ಯ ಮಠಪತಿ, ಬಸವರಾಜ ವಕ್ಕುಂದ ಹಾಗೂ ಸಂಗೀತ ಬಳಗದವರಾದ ಮಲ್ಲಿಕಾರ್ಜೂನ ಗವಾಯಿಗಳು ಹೂಗಾರ, ಸುಭಾಷಚಂದ್ರ ಹೋಸಮನಿ ಸೇರಿದಂತೆ ಅಪಾರ ಭಕ್ತರು ಪಾಲ್ಗೋಂಡಿದ್ದರು ಇದಾದ ನಂತರ ಮಹಾಪ್ರಸಾದ ಜರುಗಿತು.