ಹುಬ್ಬಳ್ಳಿ 07: ಜೀವ ವಿಮಾ ನಿಗಮ ಇನ್ನಷ್ಟು ಹೆಚ್ಚಿನ ಸಾಧನೆ ಮಾಡುವಂತಾಗಲಿ. ಸಂಸ್ಥೆಯಿಂದ ಗ್ರಾಹಕರು ಇನ್ನಷ್ಟು ಹೆಚ್ಚಿನ ವಿಮೆ ಪಡೆದು, ಒಳ್ಳೆಯ ಯೋಜನೆಗಳ ಲಾಭ ಪಡೆಯುವಂತಾಗಲಿ ಜೊತೆಗೆ ರಕ್ಷಣೆಯ ಬದುಕನ್ನು ಸಾಗಿಸುವಂತಾಗಲಿ ಎಂದು ಬಿಎಸ್ಎನ್ಎಲ್ನ ಜನರಲ್ ಮ್ಯಾನೇಜರ್ ಜೆ.ಎಲ್. ಗೌತಮ್ ಹೇಳಿದರು.
ಭಾರತೀಯ ಜೀವ ವಿಮಾ ನಿಗಮದ 63 ನೇ ವಾಷರ್ಿಕೋತ್ಸವದ ಹಿನ್ನೆಲೆ ಹುಬ್ಬಳ್ಳಿಯ ಕಸ್ಟಮರ್ ಝೋನ್ನ ಮತ್ತು ನೇರ ಮಾರುಕಟ್ಟೆ ಘಟಕದಲ್ಲಿ ಆಚರಿಸಲಾದ 2019 ವಿಮಾ ಸಪ್ತಾಹ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿ ಅವರು ಮಾತನಾಡಿದರು.
ಎಲ್ಐಸಿ ಕಸ್ಟಮರ್ ಝೋನ್ನ ವಿಭಾಗೀಯ ಸಹಾಯಕ ವ್ಯವಸ್ಥಾಪಕಿ ಸಂಗೀತಾ ಬಾಗೇವಾಡಿ ಮಾತನಾಡಿ, ಎಲ್ಐಸಿ ಗ್ರಾಹಕ ಸ್ನೇಹಿ ಸಂಸ್ಥೆಯಾಗಿದೆ. ಇಂದಿಗೂ ಗ್ರಾಹರು ಎಲ್ಐಸಿ ವಿಮಾ ನಿಗಮವನ್ನು ಇಷ್ಟಪಡುತ್ತಾರೆ. ಕಾರಣ ಜೀವ ವಿಮಾನಿಗಮದ ಸೇವೆ ಶ್ಲಾಘನೀಯವಾಗಿದೆ ಎಂದರು.
ಕಸ್ಟಮರ್ ಝೋನ್ ಹಾಗೂ ನೇರ ಮಾರುಕಟ್ಟೆ ಘಟಕದ ಸ್ಥಾಪನೆ, ವಿಮಾ ಉತ್ಪಾದನೆಗಳ ನೇರ ಹಾಗೂ ಆನ್ಲೈನ್ ಮಾರಾಟ, ಒಂದೇ ಸೂರಿನಡಿ ಆನ್ಲೈನ್ ಸೇವೆ ಸಹಿತವಾಗಿ ಹಲವಾರು ಗ್ರಾಹಕ ಸೇವೆಗಳ ಕುರಿತು ಸಂಗೀತಾ ಮಾಹಿತಿ ನೀಡಿದರು.
ನೇರ ಮಾರುಕಟ್ಟೆ ಘಟಕದ ಸಿಒ ಹಾಗೂ ಡಿಎಸ್ಎ, ಎಡಿಎಂ ಆರ್.ಜಿ.ಬಾಳಂಬೀಡ ಉಪಸ್ಥಿತರಿದ್ದರು.ಎಸ್.ಎ. ಕುಲಕಣರ್ಿ ನಿರೂಪಿಸಿದರು. ಜಯತೀರ್ಥ ಜೋಶಿ ಪರಿಚಯಿಸಿದರು. ಶಿವಾನಂದ ತಾಂಡೇಲ್ ವಂದಿಸಿದರು.
ವಿಮಾ ಸಪ್ತಾಹದ ಅಂಗವಾಗಿ ರೊಟ್ಟಿಗವಾಡದ ಸಕರ್ಾರಿ ಹಿರಿಯ ಪ್ರಾಥಮಿಕ ಶಾಲಾ ಮಕ್ಕಳಿಗಾಗಿ ಚಿತ್ರಕಲಾ ಸ್ಪಧರ್ೆ ಏರ್ಪಡಿಸಲಾಗಿದ್ದು, 140 ವಿದ್ಯಾಥರ್ಿಗಳು ಭಾಗವಹಿಸಿದ್ದರು.