ಶಾಲಾ ಪ್ರಾರಂಭೋತ್ಸವ: ವಿದ್ಯಾರ್ಥಿಗಳಿಗೆ ಸಿಹಿ ನೀಡಿ ಸಿದ್ಧು ಮಾಳಿ ಸ್ವಾಗತ

School commencement ceremony: Siddhu Mali welcomes students with sweets

ರನ್ನ ಬೆಳಗಲಿ 01: ಪಟ್ಟಣದ ಮೊದಲ ಶಾಲೆ, ಮಾದರಿ ಪ್ರಾಥಮಿಕ ಶಾಲೆಯಲ್ಲಿ ಶುಕ್ರ ವಾರ ದಂದು ಶಾಲಾ ಪ್ರಾರಂಭೋತ್ಸವವು ವಿಶೇಷವಾಗಿ ಜರಗಿತು. ಶಾಲೆಯನ್ನು ತಳಿರು, ತೋರಣ, ಕಬ್ಬು, ಹೂವು ಹಾಗೂ ರಂಗೋಲಿಯಿಂದ ಸಿಂಗರಿಸಿ, ಶಾಲಾ ಆಡಳಿತ ಮಂಡಳಿಯವರು, ಶಿಕ್ಷಕ ವೃಂದದವರು ಹಾಗೂ ಸದಸ್ಯರೆಲ್ಲರೂ ಸೇರಿ ರಿಬ್ಬನ್ ಕತ್ತರಿಸುವುದರ ಮೂಲಕ ಶಾಲೆಗೆ ಮಕ್ಕಳನ್ನು ಸ್ವಾಗತಿಸಲಾಯಿತು ಎಲ್ಲಾ ವಿದ್ಯಾರ್ಥಿಗಳಿಗೆ ಸಿಹಿಯನ್ನು ಹಂಚಿ, ವಿದ್ಯಾರ್ಥಿಗಳಿಗೆ ಹಾಗೂ ಪಾಲಕ ಪೋಷಕರಿಗೆ ಶಾಲಾ ದಾಖಲಾತಿಯ ಕರಪತ್ರವನ್ನು ನಿಡಿ ಹೆಚ್ಚಿನ ದಾಖಲಾತಿಗೆ ಎಸ್‌ಡಿಎಮ್‌ಸಿ ಅಧ್ಯಕ್ಷ ಸಿದ್ಧು ಮಾಳಿ ವಿನಂತಿಸಿ ಕೊಂಡರು.  

ಸರಸ್ವತಿ ದೇವಿಯ ಪೂಜಾ ಕಾರ್ಯಕ್ರಮವನ್ನು ನೆರವೇರಿಸಿದ ಮುಖಂಡರು ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆಯನ್ನು ಮಾಡಿದರು. ಶಾಲೆಯ ಎಸ್‌.ಡಿ.ಎಂ.ಸಿ ಉಪಾಧ್ಯಕ್ಷ ಅರ್ಜುನ ದೊಡಮನಿ, ಪಟ್ಟಣ ಪಂಚಾಯತಿಯ ಸದಸ್ಯರಾದ  ಪ್ರವೀಣ ಪಾಟೀಲ, ಶಿಕ್ಷಕರಾದ ಆರ್‌.ಎ. ತಳವಾರ, ವ್ಹಿ.ಎಸ್‌.ಬಿರಾದಾರ ಗೌರವ ಶಿಕ್ಷಕರಾದ ಚೇತನ ಕೊಣ್ಣೂರ, ಕಾಶಪ್ಪ ಸರವಿ, ಬಂದವ್ವ ಹೊಳೆಪ್ಪಗೋಳ, ವಿಜಯಲಕ್ಷ್ಮೀ ಮಠಪತಿ, ಎಸ್‌.ಡಿ.ಎಮ್‌.ಸಿ ಸದಸ್ಯರಾದ ರಾಜು ತೇರದಾಳ, ದುಂಡಪ್ಪ ಕೊಣ್ಣೂರ, ಸಿದ್ದಲಿಂಗಯ್ಯ ಮಠಪತಿ, ನಾಗಪ್ಪ ಲೋಹಾರ, ಮಧುಕರ ಇತಾಪಿ, ರೂಪಾ ಕೋಳಿ, ಲಕ್ಷ್ಮೀ ತೇರದಾಳ, ಮಂಜುನಾಥ ಪಾಟೀಲ ಮತ್ತು ವಿದ್ಯಾರ್ಥಿಗಳು, ಪಾಲಕ ಪೋಷಕರು ಉಪಸ್ಥಿತರಿದ್ದರು.