ಹಾಸ್ಟೆಲ್ ಮತ್ತು ವಸತಿ ಶಾಲಾ ಹೊರಗುತ್ತಿಗೆ ನೌಕರರ ಸಂಘದ ತಾಲೂಕ ಪದಾಧಿಕಾರಿಗಳ ಆಯ್ಕೆ

Selection of Taluk office bearers of Hostel and Residential School Outsourced Employees Association

ಹಾಸ್ಟೆಲ್ ಮತ್ತು ವಸತಿ ಶಾಲಾ ಹೊರಗುತ್ತಿಗೆ ನೌಕರರ ಸಂಘದ ತಾಲೂಕ ಪದಾಧಿಕಾರಿಗಳ ಆಯ್ಕೆ 

ಕಾರಟಗಿ 05: ಕರ್ನಾಟಕ ರಾಜ್ಯ ಸರ್ಕಾರಿ ಹಾಸ್ಟೆಲ್ ಮತ್ತು ವಸತಿ ಶಾಲಾ ಹೊರಗುತ್ತಿಗೆ ನೌಕರರ ಸಂಘದ ವತಿಯಿಂದ ಶನಿವಾರ ದಂದು ಕಾರ್ಮಿಕರ ದಿನಾಚರಣೆ ಕಾರ್ಯಕ್ರಮ ಜರುಗಿತು.  

ಕಾರಟಗಿ ಪಟ್ಟಣದ ಪಾಲಿಟೆಕ್ನಿಕ್ ಕಾಲೇಜ್ ಕ್ಯಾಂಪಸ್ ಆವರಣದಲ್ಲಿರುವ ಡಿ.ದೇವರಾಜ್ ಅರಸು ಹಿಂದುಳಿದ ವರ್ಗಗಳ ಬಾಲಕರ ಮೆಟ್ರಿಕ್ ನಂತರದ ವಸತಿ ನಿಲಯದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಸರ್ಕಾರಿ ಹಾಸ್ಟೆಲ್ ಮತ್ತು ವಸತಿ ಶಾಲಾ ಹೊರಗುತ್ತಿಗೆ ನೌಕರರ ತಾಲೂಕು ಸಂಘ ರಚಿಸಿ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ಪದಾಧಿಕಾರಿಗಳನ್ನ ನೇಮಿಸಲಾಯಿತು.  

ಈ ಸಂಘಕ್ಕೆ ಗೌರವಧ್ಯಕ್ಷರಾಗಿ ಮೊಮ್ಮದ್ ರಫೀಕ್, ಅಧ್ಯಕ್ಷ ಬಾಳೇಶ್ ಅಂಗಡಿ, ಕಾರ್ಯದರ್ಶಿ ಮಾರುತಿ ಕತ್ತಿ, ಹಿರಿಯ ಉಪಾಧ್ಯಕ್ಷರಾಗಿ ಯಂಕಮ್ಮ, ರೇವಣ್ಣ, ಶೇಖರ​‍್ಪ ಅವರು ಆಯ್ಕೆಯಾದರೆ, ಸಹಕಾರಿದರ್ಶಿಗಳಾಗಿ ನಾಗಮ್ಮ, ಹಿರೇಲಿಂಗಪ್ಪ, ಹನುಮಂತ ಹಾಗೂ ಸದಸ್ಯರಾಗಿ ರಾಜು, ಲಕ್ಷ್ಮೀ, ರಸುಲ್‌.ಬಿ, ರಾಜಸಾಬ್, ರಮೇಶ್ ಮೂಲಿಮನಿ, ಶೀರೀಷಾ, ಸೈಫಾನ್ ಬೇಗಂ, ರೇಣುಕಮ್ಮ, ತಿಮ್ಮಣ್ಣ, ದೇವಮ್ಮ, ಗಂಗೇಶ, ನಾಗರಾಜ್ ಸಿದ್ದಾಪುರ ಹನುಮಂತ ಸಿದ್ದಾಪುರ ಇವರು ಆಯ್ಕೆಯಾಗಿದ್ದಾರೆ. ಈ ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ಹಾಸ್ಟೆಲ್ ಮತ್ತು ವಸತಿ ಶಾಲಾ ಹೊರಗುತ್ತಿಗೆ ನೌಕರರ ಸಂಘದ ಕೊಪ್ಪಳ ಜಿಲ್ಲಾ ಅಧ್ಯಕ್ಷ ಗ್ಯಾನೇಶ್ ಕಡಗದ್, ಕೊಪ್ಪಳ ಸರ್ಕಾರಿ ಹಾಸ್ಟೆಲ್ ಮತ್ತು ವಸತಿ ಶಾಲಾ ಹೊರಗುತ್ತಿಗೆ ನೌಕರರ ಸಹಕಾರ ಸಂಘದ ನಿರ್ದೇಶಕರಾದ ಪಾರ್ವತಮ್ಮ, ಶೇಖರ​‍್ಪ, ಸದಸ್ಯ ರಾಜೆಸಾಬ್ ಸೇರಿದಂತೆ ಸರ್ಕಾರಿ ಹಾಸ್ಟೆಲ್ ಮತ್ತು ವಸತಿ ಶಾಲಾ ಹೊರಗುತ್ತಿಗೆ ನೌಕರರು ಉಪಸ್ಥಿತರಿದ್ದರು.