ಜೀವನದಲ್ಲಿ ನೆಮ್ಮದಿ ಮತ್ತು ಮುಕ್ತಿಗೆ ಶಂಕರರ ಆದರ್ಶಗಳು ದಾರಿ ದೀಪ - ಕೆ.ರಾಜಶೇಖರ ಹಿಟ್ನಾಳ

Shankara's ideals are the guiding light for peace and liberation in life - K. Rajashekar Hitnal

ಲೋಕದರ್ಶನ ವರದಿ 

  

ಜೀವನದಲ್ಲಿ ನೆಮ್ಮದಿ ಮತ್ತು ಮುಕ್ತಿಗೆ ಶಂಕರರ  ಆದರ್ಶಗಳು ದಾರಿ ದೀಪ - ಕೆ.ರಾಜಶೇಖರ ಹಿಟ್ನಾಳ 

ಕೊಪ್ಪಳ  02:  ಹಿಂದೂ ಧರ್ಮದಲ್ಲಿ ಆಚಾರ ವಿಚಾರಗಳು ಹೇಗೆ ಇರಬೇಕು, ನಾವು ಹೇಗೆ ನಮ್ಮ ದಿನನಿತ್ಯದ ಜೀವನದಲ್ಲಿ ನೆಮ್ಮದಿ ಮತ್ತು ಮುಕ್ತಿಯನ್ನ ಕಾಣಬೇಕು ಅನ್ನೋದಕ್ಕೆ ಶಂಕರಾಚಾರ್ಯರ ಆದರ್ಶಗಳು ದಾರಿ ದೀಪವಾಗಿವೆ ಎಂದು ಕೊಪ್ಪಳ ಸಂಸದರಾದ ಕೆ.ರಾಜಶೇಕರ ಬಸವರಾಜ ಹಿಟ್ನಾಳ ಹೇಳಿದರು. 

ಅವರು ಶುಕ್ರವಾರ ಕೊಪ್ಪಳ ಕೋಟೆ ಹತ್ತಿರದ ಶ್ರೀ ಶಂಕರ ಸಾಂಸ್ಕೃತಿಕ ಭವನದಲ್ಲಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕೊಪ್ಪಳ ನಗರಸಭೆ ಇವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಶ್ರೀ ಶಂಕರಾಚಾರ್ಯರ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ನಾವು ಶಂಕರಾಚಾರ್ಯರ ಬಗ್ಗೆ ಬಹಳಷ್ಟು ತಿಳಿದುಕೋಳ್ಳಬೇಕಾಗಿದೆ, ನಾವು ಎಷ್ಟು ಅವರ ಬಗ್ಗೆ ತಿಳಿದುಕೋಳ್ಳುತ್ತೇವೋ ಅಷ್ಟು ಭಗವಂತನ ಹತ್ತಿರ ಹೋಗಲಿಕ್ಕೆ ಸಾಧ್ಯವಾಗುತ್ತದೆ. ಅಷ್ಟೊಂದು ಮಾರ್ಗದರ್ಶನ ನೀಡಿರುವಂತ ದಾರ್ಶನಿಕರು ಶಂಕರಾಚಾರ್ಯರು. ಇವತ್ತು ಅಂತಹ ಮಹಾನ್ ದಾರ್ಶನಿಕರ ಜಯಂತಿ ಕಾರ್ಯಕ್ರಮಕ್ಕೆ ನನ್ನನ್ನು ಕೂಡ ಕರೆದು ಪ್ರೀತಿಯಿಂದ ಸ್ವಾಗತಿಸಿದಕ್ಕೆ ಧನ್ಯವಾದಗಳನ್ನು ಸಲ್ಲಿಸುತ್ತೇನೆ. ಈ ಸಮಾಜದ ಬಹಳಷ್ಟು ಕಾರ್ಯಕ್ರಮಕ್ಕೆ ನಾನು ಬಂದ್ದಿದ್ದೇನೆ, ಈ ಸಮಾಜಕ್ಕೆ ಸಮುದಾಯ ಭವನದ ಬೇಡಿಕೆ ಇತ್ತು, ಅದಕ್ಕೆ ಅನುದಾನ ಕೇಳಿದಾಗ ನಾವು ಖುಷಿಯಿಂದ ಬಿಡುಗಡೆ ಮಾಡಿದ್ದೇವೆ. ಅದಕ್ಕಿಂತ ಖುಷಿ ಅಂದರೆ ಸಮುದಾಯ ಭವನವನ್ನು ಬಹಳ ಸುಂದರವಾಗಿ ನಿರ್ಮಾಣ ಮಾಡಿದ್ದಿರಿ. ಅದು ಬಹಳ ಖುಷಿ ತಂದಿದೆ ಎಂದು ಹೇಳಿದರು. 

ಇವತ್ತಿನ ಈ ಜಯಂತಿ ಕಾರ್ಯಕ್ರಮವು ಆಚರಣೆಗೆ ಮಾತ್ರ ಸೀಮಿತವಾಗದೆ, ಶಂಕರಾಚಾರ್ಯರ ಆದರ್ಶಗಳ ಪ್ರಚಾರದ ಕಾರ್ಯಕ್ರಮವಾಗಬೇಕು. ಇವತ್ತು ನಾವು ಜಗತ್ತಿನಲ್ಲಿ ಬಹಳ ಧರ್ಮಗಳನ್ನು ನೋಡುತ್ತೇವೆ ಎಲ್ಲಾ ಧರ್ಮಗಳು ಒಳ್ಳೇದನ್ನೆ ತಿಳಿಸುತ್ತವೇ, ಆದರೆ ಹಿಂದೂ ಧರ್ಮದವನ್ನು ಯಾಕೆ ಪ್ರೀತಿಸುತ್ತಾರೆ ಅಂದರೆ ನಮ್ಮಲ್ಲಿ ಸಂಬಂಧಗಳಿಗೆ ಹೆಚ್ಚು ಆದ್ಯತೆಯನ್ನು ನೀಡಿದ್ದಾರೆ. ಸಂಬಂಧಗಳು ಹೀಗೆ ಇರಬೇಕು, ತಂದ-ತಾಯಿ ಹೇಗಿರಬೇಕು, ಮಕ್ಕಳು ಹೇಗಿರಬೇಕು, ಮಕ್ಕಳಿಗೆ ಯಾವ ರೀತಿ ಸಂಸ್ಕಾರ ಹೇಳಿ ಕೊಡಬೇಕು, ಶಿಕ್ಷಣ ಹೇಗಿರಬೇಕು ಇವೆಲ್ಲವೂ ಬಹಳ ಅರ್ಥಗರ್ಭಿತ ವಾಗಿರುವಂತವು, ಹಾಗಾಗಿ ಇವತ್ತು ಜಗತ್ತಿನಲ್ಲಿ ಎಲ್ಲರೂ ಕೂಡಾ ಹಿಂದೂ ಧರ್ಮ ವನ್ನ ಪ್ರೀತಿಸುತ್ತಾರೆ ಎಂದರು. 

ಇವತ್ತು ಜಗತ್ತು ಬಹಳ ವೇಗವಾಗಿ ಬೇಳಿತಾ ಇದೆ, ಜಗತ್ತಿನ ಇತರೆ ಧರ್ಮಗಳು ಬದಲಾವಣೆ ಹೊಂದಿವೆ ಆದರೆ ಹಿಂದೂ ಧರ್ಮದ ಆಚಾರ ವಿಚಾರಗಳು, ಭಜನೆಗಳು, ಪ್ರಾರ್ಥನೆಗಳು, ಎಲ್ಲಾ ಧಾರ್ಮಿಕ ಕಾರ್ಯಗಳು ಇವತ್ತಿಗೂ ಆಚರಣೆಯಲ್ಲಿವೆ. ಮುಂದೆಯೂ ಸಹ ಶಂಕರಾಚಾರ್ಯರ ಆದರ್ಶಗಳನ್ನು ಉಳಿಸಿ ಬೆಳೆಸಲು ನಾವೆಲ್ಲರೂ ಪ್ರಯತ್ನ ಮಾಡೋಣ ಎಂದರು.  

ಹರಿಹರದ ನಿವೃತ್ತಿ ಸಂಸ್ಕೃತ ಪ್ರಾಧ್ಯಾಪಕರಾದ ವಿದ್ಯಾನಾಥ ಶಾಸ್ತ್ರೀಯವರು ಶ್ರೀ ಶಂಕರಾಚಾರ್ಯರ ಕುರಿತು ವಿಶೇಷ ಉಪನ್ಯಾಸ ನೀಡಿದರು. 

ಈ ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕೋಟ್ರೇಶ್ ಮರಬನಲಳ್ಳಿ, ಶ್ರೀ ಶಂಕರಾಚಾರ್ಯ ಸಮಾಜದ ಮುಖಂಡರಾದ ಡಿ.ವಿ ಜೋಷಿ, ರವಿ ಪುರೋಹಿತ, ರಮೇಶ ಕೆ., ಅಶೋಕ ವಿ., ಕೃಷ್ಣ ವಿ., ವೆಂಕಟೇಶ ವಿ., ಸುರೇಶ್ ಪಿ.ನಾಡಿಗಾರ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಇತರರು ಉಪಸ್ಥಿತರಿದ್ದರು.