ಶಂಕರಾಚಾರ್ಯರ ಜಯಂತಿ ಎಸ್ಸೆಸ್ಸೆಲ್ಸಿ ಟಾಪರ್ ಗೆ ಸನ್ಮಾನ

Shankaracharya Jayanti SSLC topper felicitated

ಶಂಕರಾಚಾರ್ಯರ ಜಯಂತಿ ಎಸ್ಸೆಸ್ಸೆಲ್ಸಿ ಟಾಪರ್ ಗೆ  ಸನ್ಮಾನ

ಹೂವಿನಹಡಗಲಿ  15: ಪಟ್ಟಣದ ಅನಂತ ಸ್ಟೋರ್ಸ್‌ ಸಂಸ್ಥಾಪಕರಾದ ಕೀರ್ತಿಶೇಷ ಕರಣಂ ಪಂಪಾಪತಿರಾವ್ ಹೆಸರಿನಲ್ಲಿ ಶ್ರೀ ನಾವಿಕ ಪ್ರತಿಷ್ಠಾನವು ​‍್ರ​‍್ರಥಮ ಬಾರಿಗೆ ಸ್ಮಾರಕ ದತ್ತಿ ಬಹುಮಾನ ವಿತರಣಾ ಸಮಾರಂಭವನ್ನು ಏರಿ​‍್ಡಸಿತ್ತು.ತಾಲೂಕಿನ ನಂದಿಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ಓದಿದ  ಸಂಗೀತಾ ಪಾಟೀಲ 2024-25 ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 615 (98ಅ) ಅಂಕಗಳನ್ನು ಪಡೆದಿರುತ್ತಾರೆ.ಕನ್ನಡ ಮಾಧ್ಯಮದಲ್ಲಿ ತಾಲೂಕಿಗೆ ಪ್ರಥಮಳಾಗಿ ಅಪೂರ್ವ ಸಾಧನೆ ಮಾಡಿದ ಹಿನ್ನೆಲೆಯಲ್ಲಿ ಅವರ ಪ್ರತಿಭೆಯನ್ನು ಗುರುತಿಸಿ ಶ್ರೀ ನಾವಿಕ ಪ್ರತಿಷ್ಠಾನವು 5,000 ರೂ.ಗಳೊಂದಿಗೆ ಪ್ರಶಸ್ತಿ ಪತ್ರವನ್ನು ನೀಡಿ ಗೌರವಿಸಿದೆ.  

ಗಾಯತ್ರೀ ಪಂಪಾಪತಿರಾವ್, ಶ್ರೀಕಾಂತ, ವಿಶಾಲಾಕ್ಷೀ, ನಾಗೇಶರಾವ್ ಕರಣಂ ಹಾಗೂ ಶಿಕ್ಷಕರಾದ ಪ್ರಸನ್ನಕುಮಾರ ಜೋಶಿ ಅವರು ಸಾಧಕ ವಿದ್ಯಾರ್ಥಿನಿಯನ್ನು ಸನ್ಮಾನಿಸಿದರು. ಇದೇ ಸಂದರ್ಭದಲ್ಲಿ ಶಂಕರಾಚಾರ್ಯರ ಜಯಂತಿಯನ್ನು ಆಚರಿಸಲಾಯಿತು. ಪ್ರತಿಷ್ಠಾನದ ಅಧ್ಯಕ್ಷ ಶಶಿಕಾಂತ ಕರಣಂ ಅವರು ಮಾತೃಪಂಚಕ ಸ್ತೋತ್ರ ಕುರಿತು ಪ್ರವಚನ ಮಾಡಿದರು. ಸುಧಾ, ನಚಿಕೇತ, ಶ್ರೀಧರ, ದೇವೇಂದ್ರ​‍್ಪ, ಭೀಮಪ್ಪ ಮುಂತಾದ ಅನೇಕ ಗಣ್ಯರು ಉಪಸ್ಥಿತರಿದ್ದರು. ಪ್ರತಿ ವರ್ಷವೂ ಸರ್ಕಾರಿ ಪ್ರೌಢಶಾಲೆಯಲ್ಲಿ ಕನ್ನಡ ಮಾಧ್ಯಮದಲ್ಲಿ ಓದಿ ತಾಲೂಕಿಗೆ ಪ್ರಥಮ ಶ್ರೇಣಿ ಗಳಿಸುವ ಹತ್ತನೇ ತರಗತಿ ವಿದ್ಯಾರ್ಥಿಗಳಿಗೆ ಪಂಪಾಪತಿರಾವ್ ಸ್ಮಾರಕ ದತ್ತಿ ಬಹುಮಾನ ಪ್ರಶಸ್ತಿಯನ್ನು ನೀಡಲಾಗುವುದು ಎಂದು ಪ್ರತಿಷ್ಠಾನದ ಕಾರ್ಯದರ್ಶಿ ಬಿ. ಅರುಣಕುಮಾರ  ತಿಳಿಸಿದ್ದಾರೆ.