ಕೆಲವೇ ದಿನಗಳಲ್ಲಿ ಶ್ರೀ ಚನ್ನವೃಷಬೇಂದ್ರ ಏತ್ ನೀರಾವರಿ ಯೋಜನೆಗೆ ಅನುಷ್ಠಾನ: ಬಾಬಾಸಾಹೇಬ ಪಾಟೀಲ

Shri Channavrishabendra Aeth Irrigation Project to be implemented in a few days: Babasaheb Patil

ಕೆಲವೇ ದಿನಗಳಲ್ಲಿ ಶ್ರೀ ಚನ್ನವೃಷಬೇಂದ್ರ ಏತ್ ನೀರಾವರಿ ಯೋಜನೆಗೆ ಅನುಷ್ಠಾನ: ಬಾಬಾಸಾಹೇಬ ಪಾಟೀಲ  

ನೇಸರಗಿ  8 : ನೇಸರಗಿ ನಾಗನೂರ ಜಿಲ್ಲಾ ಪಂಚಾಯತ ವ್ಯಾಪ್ತಿಯ ಕೃಷಿ ಭೂಮಿಗಳಿಗೆ  ನೀರಾವರಿ ಕಲ್ಪಿಸಿ ರೈತರಿಗೆ ನೀರು ಒದಗಿಸುವ ಮಹತ್ವಕಾಂಕ್ಷೆ ಯೋಜನೆಯಾದ  ಚೆನ್ನ ವೃಷ ಬೇಂದ್ರ  ಏತ್ ನೀರಾವರಿ ಯೋಜನೆಗೆ ಶೀಘ್ರವೇ ಅನುಧಾನ ತಂದು ಟೆಂಡರ ಕರೆದು ಸಿ ಎಮ್ ಅಥವಾ ನೀರಾವರಿ ಮಂತ್ರಿಗಳನ್ನು ಕರೆದು ಕಾಮಗಾರಿಗೆ ಚಾಲನೆ ನೀಡಲಾಗುವದು  ಇದರೊಂದಿಗೆ ಚಚಡಿ ಏತ್ ನೀರಾವರಿ ಯೋಜನೆ 2 ಹಂತ ಕಾಮಗಾರಿ ಮುಗಿದು 3 ನೇ  ಹಂತದ  ಕಾಮಗಾರಿ ಹೊಲಗಾಲುವೆ ಕಾಮಗಾರಿಯಿಂದ ರೈತರಿಗೆ ಅನುಕೂಲ ಆಗುತ್ತದೆ ಎಂದು ಚನ್ನಮ್ಮನ ಕಿತ್ತೂರ ಶಾಸಕ ಬಾಬಾಸಾಹೇಬ ಪಾಟೀಲ ಹೇಳಿದರು.       ಅವರು ಶನಿವಾರದಂದು ಸಮೀಪದ ಮೇಕಲಮರಡಿ ಗ್ರಾಮದ ಸೋಮನಟ್ಟಿ ರಸ್ತೆಯಲ್ಲಿ ಹತ್ತಿರ ಚಚಡಿ  ನೀರಾವರಿ ಕಾಲುವೆಗಳಿಗೆ ಕರ್ನಾಟಕ  ನೀರಾವರಿ ನಿಗಮ ನಿಯಮಿತ ವತಿಯಿಂದ 12 ಕೋಟಿ ರೂಪಾಯಿಗಳ ಅನುಧಾನದಲ್ಲಿ ಹೊಲಗಾಲುವೆ 16 ಕಾಮಗಾರಿಗೆ  ಭೂಮಿ ಪೂಜೆ ನೆರವೇರಿಸಿ ಮಾತನಾಡಿ  ನೇಸರಗಿ ಭಾಗದ ಹೊಸಕೋಟಿ  ಗಜಮನಹಾಳ ಮಾಸ್ತಮರಡಿ ಹಣಬರಹಟ್ಟಿ ವಣ್ಣೂರ ಮೇಕಲಮರಡಿ ಕಲಕುಪ್ಪಿ ಬುಧನೂರ ಹಿರೇಬುದ ನೂರ ಚಚಡಿ ಸೇರಿದಂತೆ ಇನ್ನೂ ಅನೇಕ ಗ್ರಾಮಗಳ ರೈತರಿಗೆ ನೀರು ದೊರಕುತ್ತದೆ. ಹಿಂದಿನ ಕಾಮಗಾರಿ ಮಾಡಿದ ಗುತ್ತಿಗೆದಾರರ ಬಿಲ್ಲು ಬಾಕಿ ಉಳಿದಿದ್ದು ಆದಷ್ಟು ಬೇಗ ಆ ಗುತ್ತಿಗೆದಾರರ ಬಿಲ್ಲು ಪಾವತಿಸಲಾಗುವದೆಂದು ಹೇಳಿದರು.  ನೀರಾವರಿ ನಿಗಮದ ಕಾರ್ಯನಿರ್ವಾಹಕ ಅಭಿಯಂತರ ಎಚ್ ಎಸ್ ಕಾಖಂಡಕಿ ಮಾತನಾಡಿ ಶಿರೂರು ಡ್ಯಾಮ್ ಮುಕಾಂತರ 35 ವರ್ಷಗಳ ಹೋರಾಟದ ಪಲವಾಗಿ  ಟನಲ್ ಮುಕಾಂತರ 39 ಕಿಲೋ ಮೀಟರ್ ಗೋಕಾಕ ಬೈಲಹೊಂಗಲ ಮತ್ತು ಸವದತ್ತಿ ತಾಲೂಕೂಗಳಲ್ಲಿ 3980 ಹೆಕ್ತೇರ್    ನೀರಾವರಿ ಯೋಜನೆ ಇದಾಗಿದೆ ಎಂದರು.   ಕಾರ್ಯಕ್ರಮದಲ್ಲಿ  ಮಾಜಿ ಜಿ ಪಂ. ಸದಸ್ಯ ನಿಂಗಪ್ಪ ಅರಿಕೇರಿ ಯುವ ಮುಖಂಡ ಸಚಿನ ಪಾಟೀಲ ಅಡಿವಪ್ಪ  ಮಾಳಣ್ಣವರ ಗ್ರಾಮ ಅಧ್ಯಕ್ಷರಾದ ತಿ ಭಾರತಿ ಮಲ್ಲಪ್ಪ ತಿಗಡಿ ನಾಗರಾಜ್ ದೇಸಾಯಿ ರವಿ ಸಿದ್ದಮ್ಮಣ್ಣವರ ಗ್ರಾ ಪಂ ಉಪಾಧ್ಯಕ್ಷರಾದ ಕಾಶಿಮ್ ಜಮಾದಾರ ಶಿವಾನಂದ ಹಿರೇಮಠ ಮಂಜುನಾಥ ಹುಲಮನಿ ನಜೀರ ತಹಶೀಲ್ದಾರ ಮಲ್ಲಿಕಾರ್ಜುನ ಕಲ್ಲೋಳಿ ರಾಜು ಹಣ್ಣಿಕೇರಿ ವಾಯ್ ಆರ ಗುಡಿ ರವಿ ಹುಲಮನಿ ಶಿವಪ್ಪ ಹುಲಮನಿ ಸಿದಪ್ಪ ಕಡಕೋಳ ರೇಣುಕಾ ಕಡಕೋಳ ಸಹಾಯಕ ಕಾರ್ಯನಿರ್ವಾಹಕ ಶ್ರೀನಿವಾಸ್ ಬಿರಾದಾರ ಪಿ ಡಿ ಓ ಸವಿತಾ ಹಾಲಹಳ್ಳಿ  ಗುತ್ತಿಗೆದಾರರಾದ ಚನ್ನಪ್ಪ ಗುದಗನವರ ವಿಠ್ಠಲ ಕೋಳಿ ಗಣಪತಿ ಗೊರಬಾಳ  ಗ್ರಾ ಪಂ ಸದಸ್ಯರು ಸುತ್ತಮುತ್ತಲಿನ ಗ್ರಾಮಗಳ ಹಿರಿಯರು ರೈತರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ರೈತ ಮುಖಂಡ ಮಹಾಂತೇಶ ಹಿರೇಮಠ ನಿರೂಪಿಸಿದರು.