ಹುತಾತ್ಮರಾದ ಭಾವಚಿತ್ರಕ್ಕೆ ಮೆಣ್ಣದ ಬತ್ತಿ ಹಿಡಿದು ಮೌನಚರಣೆ
ಮುಂಡಗೋಡ 26 : ಜಮ್ಮು ಕಾಶ್ಮೀರದ ಪಹಲ್ಗಾನ್ ನಲ್ಲಿ ಪ್ರವಾಸಿಗರ ಮೇಲೆ ನಡೆದ ಭಯೋತ್ಪಾದಕ ಕೃತ್ಯವನ್ನು ಖಂಡಿಸಿ ಮುಂಡಗೋಡ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಪಟ್ಟಣದ ಶಿವಾಜಿ ಸರ್ಕಲ್ ನಲ್ಲಿ ಶುಕ್ರವಾರ ಹುತಾತ್ಮರಾದ ಭಾವಚಿತ್ರಕ್ಕೆ ಶ್ರದ್ಧಾಂಜಲಿ ಸಲ್ಲಿಸಿ ಮೆಣ್ಣದ ಬತ್ತಿ ಹಿಡಿದು ಮೌನಚರಣೆ ನಡಿಸಿದ್ದರು . ಪಟ್ಟಣದ ಪ್ರವಾಸ ಮಂದಿರದಿಂದ್ ಮೆಣ್ಣದ ಬತ್ತಿ ಹಿಡಿದು ಪಟ್ಟಣದ ಪ್ರಮುಖ ಬೀದೀಗಳಲ್ಲಿ ಮೌನ ಮೆರವಣಿಗೆಯಲ್ಲಿ ತೆರಲಿ ಹುತಾತ್ಮರಾದ ಭಾವಚಿತ್ರಕ್ಕೆ ಮೌನಚರಣೆ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾಗಿ ಕೃಷ್ಣ ಹಿರೇಹಳ್ಳಿ,ಕೆ.ಪಿ.ಸಿ.ಸಿ ಸದಸ್ಯರಾದ ವಿವೇಕ್ ಹೆಬ್ಬಾರ್, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಎಚ್.ಎಮ್.ನಾಯ್ಕ, ಬ್ಲಾಕ್ ಕಾರ್ಯದರ್ಶಿ ಗೋಪಾಲ್ ಪಾಟೀಲ್, ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿಯ ಅಧ್ಯಕ್ಷರಾದ ರಾಜಶೇಖರ ಹಿರೇಮಠ, ನಾಗಭೂಷಣ ಹಾವಣಗಿ, ಗುಡ್ಡಪ್ಪ ಕಾತೂರ, ಸಿದ್ದಪ್ಪ ಹಡಪದ, ಶಾರದಾ ರಾಠೋಡ, ಸಲ್ಮಾ ಶೇರಖಾನೆ, ಶಿವರಾಜ್ ಸುಬ್ಬರಾಯ ರಜಾ ಖಾನ್ ಪಠಾಣ್, ಮಹಮ್ಮದ್ ಗೌಸ್, ಫಣಿರಾಜ ಹದಲಗಿ, ಶೇಖರ್ ಲಮಾಣಿ, ವಿಶ್ವನಾಥ ಪವಾಡಶೆಟ್ಟರ್ ಕಾರ್ಯಕರ್ತರು ಹಾಗೂ ಉಪಸ್ಥಿತರಿದ್ದರು.