ಲೋಕದರ್ಶನ ವರದಿ
ಬೆಳಗಾವಿ, 27: ಮುಂಬರುವ ಉಪಚುನಾವಣೆಯಲ್ಲಿ ದಲಿತ ಸಮುದಾಯವು ಬಿಜೆಪಿಗೆ ಮತನೀಡಿ ಅಹಿಂದ್ ವರ್ಗಕ್ಕೆ ಅನ್ಯಾಯ ಮಾಡಿದ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ಪಕ್ಷಕ್ಕೆ ತಕ್ಕಪಾಠ ಕಲಿಸಬೇಕೆಂದು ನ್ಯಾಯಮೂರ್ತಿ ಎ.ಜೆ ಸದಾಶಿವ ಆಯೋಗ ವರದಿ ಜಾರಿ ಹೋರಾಟ ಸಮನ್ವಯ ಸಮಿತಿಯ ರಾಜ್ಯಾಧ್ಯಕ್ಷ ಮುತ್ತಣ್ಣ ಬೆಣ್ಣೂರ ಹೇಳಿದರು.
ನಗರದಲ್ಲಿ ಬುಧವಾರ ಪತ್ರೀಕಾಗೋಷ್ಠಿಯಲ್ಲಿ ಮಾತನಾಡಿದರು. ಸಿದ್ದರಾಮಯ್ಯ 5 ವರ್ಷದ ಅಧಿಕಾರದಲ್ಲಿ ಕೇವಲ ದಲಿತರ ಹೆಸರನ್ನು ಬಳಿಸಿ ಅಧಿಕಾರ ಮಾಡಿದ್ದಾರೆ. ಯಾವುದೇ ಅಭಿವೃದ್ಧಿ ಕಾರ್ಯ ಮಾಡಿಲ್ಲ. ಕೇವಲ ಬೂಟಾಟಿಕೆ ಮಾತುಗಳನ್ನಾಡಿದ್ದಾರೆ. ಅಹಿಂದ ವರ್ಗದವರ ಪರವಾಗಿದ್ದೆನೆಂದು ಹೇಳಿ ನ್ಯಾಯಮೂತರ್ಿ ಕಾಂತರಾಜ ಮತ್ತು ನ್ಯಾಯಮೂರ್ತಿ ಸದಾಶಿವ ಆಯೋಗಗಳನ್ನು ಜಾರಿಗೊಳಿಸದೆ ಅನ್ಯಾಯ ಮಾಡಿದ್ದಾರೆ. ಬುದ್ಧ, ಬಸವ, ಅಂಬೇಡ್ಕರ ಅವರ ಹೆಸರನ್ನು ಬಳಸಿದರೆ ಹೊರತು ಅವರ ವ್ಯಕ್ತಿತ್ವವನ್ನು ಪಾಲಿಸಲಿಲ್ಲ ಎಂದು ಆರೋಪಿಸಿದರು.
ಬಿಜೆಪಿ ಸರಕಾರವು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ್ ಪಂಗಡಗಳ ಸಮುದಾಯಕ್ಕೆ ಮೀಸಲಾತಿ ಹೆಚ್ಚಿಸಲಿದೆ. ನ್ಯಾಯಮೂರ್ತಿ ನಾಗಮೋಹನದಾಸ ರವರ ಏಕಸದಸ್ಯ ಆಯೋಗವನ್ನು ಜಾರಿಗೊಳಿಸಿ ದಲಿತರ ಅಭಿವೃದ್ಧಿ ಮಾಡುವ ಭರವಸೆ ಮೂಡಿಸಿದ್ದು ಉಪಚುನಾವಣೆಯಲ್ಲಿ ಬಿಜೆಪಿಗೆ ಮತ ನೀಡಿ ಕಾಂಗ್ರೆಸಗೆ ತಕ್ಕ ಪಾಠ ಕಲಿಸಬೇಕು ಎಂದರು.
ಬಿಜೆಪಿಗೆ ಮತ ನೀಡಿದರೆ ಸ್ಥಿರ ಸರ್ಕಾ ರ ರಚನೆಯಾಗುತ್ತದೆ. ಒಂದು ವೇಳೆ ಕಾಂಗ್ರೆಸ್ಗೆ ಮತ ನೀಡಿದರೆ ಮತ್ತೆ ಅತಂತ್ರ ಸಕರ್ಾರ ಜಾರಿಗೆ ಬರುತ್ತದೆ. ದಲಿತರು ಬಿಜೆಪಿ ಬೆಂಬಲಿಸಬೇಕು. ಸಂವಿಧಾನವನ್ನು ಬಿಜೆಪಿ ಪಾಲಿಸಿದೆ ಕಾಂಗ್ರೆಸ್ ಅಲ್ಲ ಎಂದರು.
ನಾಗರಾಜ ಕೊಡಿಗೆಹಳ್ಳಿ, ಸಿ.ಮುನಿಕೃಷ್ಣ, ರವಿರಾಜ ಕೋಗಿಲು, ಬಸವರಾಜ ಸನದಿ, ಬಾಬು ಪೂಜೇರಿ, ಯಲ್ಲಪ್ಪಾ ಕಗದಾಳ ಮೊದಲಾದವರು ಉಪಸ್ಥಿತರಿದ್ದರು.