ಜನ ಮನ ತಲುಪಿದ ಸಾಮಾಜಿಕ ಭದ್ರತಾ ಯೋಜನೆಗಳು: ಮಹಾಂತೇಶ್ ದರಗದ

Social security schemes that have reached the hearts of the people: Mahantesh Dargada

ಕೊಪ್ಪಳ  28:  ಕಂದಾಯ ಇಲಾಖೆ ಹಾಗೂ ಗ್ರಾಮೀಣಾಭಿವೃದ್ಧಿ ಇಲಾಖೆಯ ಸೇವೆಗಳು ಜನರ ಮನೆ ಬಾಗಿಲಿಗೆ ಬಂದಿದೆ,ಕಂದಾಯ ಅದಾಲತ್ ಮೂಲಕ ಜನಮನ ತಲುಪಿದ ಸಾಮಾಜಿಕ ಭದ್ರತಾ ಯೋಜನೆಗಳು ಇದಾಗಿವೆ ಎಂದು ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮಹಾಂತೇಶ್ ದರಗದ ಹೇಳಿದರು,ಅವರು ತಾಲೂಕಿನ ಕಿನ್ನಾಳ ಗ್ರಾಮದಲ್ಲಿಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಕೊಪ್ಪಳದ ದತ್ತು ಗ್ರಾಮ ಕಿನ್ನಾಳದಲ್ಲಿ  ತಶೀಲ್ದಾರ ಕಾರ್ಯಾಲಯ ಕೊಪ್ಪಳ ತಾಲೂಕ ಪಂಚಯತಿ ಕೊಪ್ಪಳ ಹಾಗೂ ಗ್ರಾಮ ಪಂಚಾಯತಿ ಕೊಪ್ಪಳ. ಇವರ ಸಂಯುಕ್ತಾಶ್ರಯದಲ್ಲಿ ಏರಿ​‍್ಡಸಲಾಗಿದ್ದ ಕಂದಾಯ ಅದಾಲತ್  ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. 

ಇಂದು ಕಂದಾಯ ಇಲಾಖೆ ಹಾಗೂ ಗ್ರಾಮೀಣಾಭಿವೃದ್ದಿ ಇಲಾಖೆಯ ಸೇವೆಗಳು ಜನರ ಮನೆ ಬಾಗಿಲಿಗೆ ಬಂದಿವೆ ಇದರ ಸದುಪಯೋಗವನ್ನು ಪ್ರತಿಯೊಬ್ಬರೂ ಪಡೆಯಲು ತಿಳಿಸಿದರು. ಈ ಸಂದರ್ಭದಲ್ಲಿ ಕಂದಾಯ ಇಲಾಖೆಯ ಸಂದ್ಯಾಸುರಕ್ಷಾ , ವಿ ಧವಾ ಮಾಸಾಶನ , ಸೇರಿಂತೆ 371ಜೇ ಪ್ರಮಾಣ ಪತ್ರಗಳನ್ನು  ಐವತ್ತಕ್ಕೂ ಅಧಿಕ ಅಭ್ಯರ್ಥಿಗಳಿಗೆ ವಿತರಿಸಲಾಯಿತು.  ಹಾಗೇಯೆ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತಿ ರಾಜ್ ಇಲಾಖೆ ಯೋಜನೆಗಳ ಅಡಿ ವಿಕಲಚೇನರಿಗೆ ಉದ್ಯೋಗ ಚೀಟಿ , ಜನನ ಮರಣ ಪ್ರಮಾಣ ಪತ್ರಗಳು , ನಲ್ಲಿ ನೀರಿನ ಸಂಪರ್ಕದ ಪತ್ರಗಳು ಸೇರಿದಂತೆ ಇ ಖಾತಾಗಳನ್ನು ವಿತರಿಸಲಾಯಿತು. ನಂತರ ಸರ್ವಜನಿಕರಿಂದ ಅಹವಾಲು ಸ್ವೀಕರಿಸಲಯಿತು.  

ವೇದಿಕೆಯಲ್ಲಿ ತಹಶೀಲ್ದಾರ ವಿಠ್ಠಲ ಚೌಗಲೆ , ಕಾರ್ಯನಿರ್ವಾಹಕ ಅಧಿಕಾರಿ ಡುಂಡಪ್ಪ ತುರಾದಿ , ಭೂ ದಾಖಲೆಗಳ ಇಲಾಖೆಯ ಸಹಾಯಕ ನಿರ್ದೇಶಕ ಬಸವಾಜ , ಗ್ರಾಮ ಪಂಚಾಯತಿ ಅಧ್ಯಕ್ಷರಾದ ಶ್ವೇತಾ ಡಂಬಳ , ಉಪಾಧ್ಯಕ್ಷರಾದ ದುರಗಪ್ಪ ಡಂಬರ  ಸೇರಿದಂತೆ ಸದಸ್ಯರಾದ ಹನುಮೇಶ ಕೊವಿ ಪ್ರಶಾಂತ ಕುಲಕರ್ಣಿ ಮೈಲಾರ​‍್ಪ ಉದ್ದಾರ ಮಂಜುನಾಥ ಉದ್ದಾರ ಸಣ್ಣೆಪ್ಪ ಶಕುಂತಲಾ ಮೇಘಾ ಹಿರೇಮಠ ಕಮಲಮ್ಮ ಪೂರ್ಣಿಮಾ ಶೀಲ್ಪಾ , ಪಿ.ಡಿ.ಓ ಪರಮೇಶ್ವರಯ್ಯ ಉಪಸ್ಥತರಿದ್ದರು . ಕಾರ್ಯಕ್ರಮದಲ್ಲಿ ಕಾರ್ಯದರ್ಶಿ ನೀಲಮ್ಮ ರವರು ನಿರೂಪಿಸಿದರು ಉಪತಹಶೀಲ್ದಾರ ಮಲ್ಲಿಕಾರ್ಜುನ ಪ್ರಾಸ್ಥಾವಿಕ ನುಡಿಗಳನ್ನು ಆಡಿದರು ಸದಸ್ಯರಾದ ಹನುಮೇಶ ಕೋವಿ ವಂದಿಸಿದರು.