ಲೋಕದರ್ಶನವರದಿ
ಶಿಗ್ಗಾವಿ : ವರ್ಷವಿಡಿ ಕೆಲಸ ಮಾಡುವ ವ್ಯಕ್ತಿಗಳಿಗೆ ಹೊಸ ಚೈತನ್ಯ ಬರಬೇಕೆಂದರೆ ಒಮ್ಮೆ ಉತ್ಸವ ರಾಕ್ ಗಾರ್ಡನ್ ಸಂದಶರ್ಿಸಬೇಕು ಎಂದು ಭಾರತೀಯ ಜೀವ ವಿಮಾ ನಿಗಮದ ಹಿರಿಯ ವಿಭಾಗಾಧಿಕಾರಿ ಜಿ.ಎ.ರಾಮಕೃಷ್ಣ ಹೇಳಿದರು.
ತಾಲೂಕಿನ ಗೊಟಗೋಡಿಯ ಉತ್ಸವ ರಾಕ್ ಗಾರ್ಡನ್ನ ಜಾನಪದ ರಂಗಮಂದಿರದಲ್ಲಿ ಭಾನುವಾರ ನಡೆದ ನಿಗಮದ ಪ್ರತಿನಿಧಿಗಳ ಸಾಧನಾ ಸಮಾವೇಶದ ಅಧ್ಯಕ್ಷತೆ ವಹಿಸಿ ಮಾತನಾಡಿ ಸತತ ಪರಿಶ್ರಮದಿಂದ ಆಥರ್ಿಕ ಅಭಿವೃದ್ಧಿ ಸಾಧ್ಯ ಎಂಬುದು ಎಷ್ಟು ಸತ್ಯವೋ ಪರಿಶ್ರಮಿಗಳಿಗೆ ಒಂದು ದಿನವಾದರೂ ಮನೋರಂಜನೆಯೊಂದಿಗೆ ವಿಶ್ರಾಂತಿಯೂ ಬೇಕು ಎಂಬುದು ಕೂಡ ಸತ್ಯ ಎಂದ ಅವರು, ಕಲೆ,ಸಂಸ್ಕೃತಿಯ ಬೀಡು ಎನಿಸಿರುವ ರಾಕ್ ಗಾರ್ಡನ್ ಪ್ರತಿನಿಧಿಗಳು, ಅಧಿಕಾರಿಗಳನ್ನು ಭರಪೂರ ರಂಜಿಸಿದೆ ಎಂದು ಭಾವಿಸುತ್ತೇನೆ ಎಂದು ನುಡಿದರು.
ನಾವು ಹಮ್ಮಿಕೊಂಡಿದ್ದ 'ಉತ್ಸವ ರಾಕ್ ಗಾರ್ಡನ್ ಕ್ಯಾಂಪೇನ್ ಅತ್ಯಂತ ಯಶಸ್ವಿ ಆಗಿರುವುದು ಪ್ರತಿನಿಧಿಗಳ ಅತ್ಯುತ್ತಮ ನಿರ್ವಹಣೆ ಹಾಗೂ ಅಂಕಿ ಅಂಶಗಳಿಂದ ತಿಳಿದು ಬರುತ್ತದೆ ಎಂದ ರಾಮಕೃಷ್ಣ ಅವರು, ನಿಗಮದ ಅಭಿವೃದ್ಧಿಗೆ ಸ್ಪಂದಿಸಿದ ಎಲ್ಲರಿಗೂ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದರು.
ವಿಭಾಗೀಯ ಕಚೇರಿ ಗೈದ ಸಾಧನೆಗಳನ್ನು ಅಂಕಿ, ಅಂಶ ಸಮೇತ ಮಾಕರ್ೇಟಿಂಗ್ ಮೆನೇಜರ್ ರಾಧಾಕೃಷ್ಣ ಭಟ್ ವಿವರಿಸಿದರು. ಕ್ಯಾಂಪೇನ್ನಲ್ಲಿ ಉತ್ತಮ ಸಾಧನೆ ತೋರಿದ ಪ್ರತಿನಿಧಿಗಳು, ಶಾಖಾಧಿಕಾರಿಗಳು, ಅಭಿವೃದ್ಧಿ ಅಧಿಕಾರಿಗಳು, ಬ್ಯಾಂಕ್ ಅಧಿಕಾರಿಗಳು ಹಾಗೂ ಮತ್ತಿತರರನ್ನು ಸನ್ಮಾನಿಸಲಾಯಿತು.ಶಿವಮೊಗ್ಗ, ದಾವಣಗೆರೆ, ಚಳ್ಳಕೆರೆ, ಚನ್ನಗಿರಿ, ತೀರ್ಥಹಳ್ಳಿ, ಜಗಳೂರು, ಹಿರಿಯೂರು, ಸಾಗರ, ಹಿರಿಯೂರು, ಶಿಕಾರಿಪುರ, ಹೊನ್ನಾಳಿ, ಚಿತ್ರದುರ್ಗ, ಭದ್ರಾವತಿ ಶಾಖಾಧಿಕಾರಿಗಳು, ಬ್ಯಾಂಕ್ ಅಧಿಕಾರಿಗಳು ಹಾಗೂ ಪ್ರತಿನಿಧಿಗಳು ಭಾಗವಹಿಸಿದ್ದರು.
ಸೇಲ್ಸ್ ಮೆನೇಜರ್ ಕೆ.ಸದಾಶಿವ, ರಾಕ್ ಗಾರ್ಡನ್ನ ಮೆನೇಜರ್ ಬಸವರಾಜ ಮಡಿವಾಳರ ಉಪಸ್ಥಿತರಿದ್ದರು. ಕೆ.ಸದಾಶಿವ ಪ್ರಾಸ್ತಾವಿಕ ಮಾತನಾಡಿದರು. ಸೋಮಶೇಖರ್ ಸ್ವಾಗತಿಸಿದರು. ಎ.ಜಿ.ನಂದೀಶಕುಮಾರ್ ವಂದಿಸಿದರು.