ತಿರುಮಲ, ಫೆ 11 ಶ್ರೀಲಂಕಾ ಪ್ರಧಾನಿ ಮಹಿಂದ ರಾಜಪಕ್ಸ ಮಂಗಳವಾರ ಬೆಳಗ್ಗೆ ತಿರುಪತಿ ತಿಮ್ಮಪ್ಪನಿಗೆ ವಿಶೇಷ ಪೂಜೆ ಸಲ್ಲಿಸಿ, ದರ್ಶನ ಪಡೆದುಕೊಂಡರು.ತಿರುಪತಿ ತಿಮ್ಮಪ್ಪನ ಪರಮ ಭಕ್ತರಾಗಿರುವ ರಾಜಪಕ್ಸ, ಸಂಪ್ರದಾಯಿಕ ವಸ್ತ್ರ ಧರಿಸಿ, ಪುತ್ರ ಯೋಷಿತ್ ರಾಜಪಕ್ಸ, ಸಂಪುಟ ಸಚಿವ ಆರ್ಮುಗಂ ತೊಂಡಮಾನ್ ಅವರೊಂದಿಗೆ ಮಂಗಳವಾರ ಬೆಳಗ್ಗೆ ಅಷ್ಟದಳ ಪಾದ ಪದ್ಮರಾಧನಾ ಸಂದರ್ಭದಲ್ಲಿ ವೆಂಕಟೇಶ್ವರ ಸ್ವಾಮಿಯ ದರ್ಶನ ಪಡೆದುಕೊಂಡರು.ಇದಕ್ಕೂ ಮುನ್ನ, ಮಹಿಂದ ರಾಜಪಕ್ಸ ತಿಮ್ಮಪ್ಪನ ದೇಗಲ ಬಳಿ ಆಗಮಿಸಿದಾಗ, ಆಂಧ್ರ ಪ್ರದೇಶ ಸರ್ಕಾರ ಸಚಿವ ಪಿ. ರಾಮಚಂದ್ರ ರೆಡ್ಡಿ, ಟಿಟಿಡಿ ಕಾರ್ಯಕಾರಿ ಅಧಿಕಾರಿ ಅನಿಲ್ ಕುಮಾರ್ ಸಿಂಘಾಲ್ ಹಾಗೂ ಹೆಚ್ಚುವರಿ ಕಾರ್ಯಕಾರಿ ಅಧಿಕಾರಿ ಎ.ವಿ. ಧರ್ಮಾ ರೆಡ್ಡಿ ಸ್ವಾಗತ ಕೋರಿದರು. ದೇವರ ದರ್ಶನ ಪಡೆದುಕೊಂಡ ನಂತರ ರಾಜಪಕ್ಸೆ ಅವರಿಗೆ ರಂಗನಾಯಕುಲ ಮಂಟಪ ನಲ್ಲಿ ವೇದ ಪಂಡಿತರು ವೇದ ಆರ್ಶಿವಚನ ನಡೆಸಿ, ತೀರ್ಥ, ಪ್ರಸಾದ ವಿತರಿಸಿದರು.ಶ್ರೀ ಲಂಕಾ ಪ್ರಧಾನಿ ಭೇಟಿಯ ಹಿನ್ನಲೆಯಲ್ಲಿ ತಿರುಪತಿ ತಿರುಮಲದಲ್ಲಿ ಭಾರಿ ಬಿಗಿ ಭದ್ರತೆ ಕೈಗೊಳ್ಳಲಾಗಿತ್ತು