ಬಳ್ಳಾರಿ ವಿಮ್ಸ್ನಲ್ಲಿ ವೈರಾಣು ಪರೀಕ್ಷಾ ಲ್ಯಾಬ್ ಆರಂಭ

ಬಳ್ಳಾರಿ, ಏ.06: ಬಹುದಿನಗಳ ಬೇಡಿಕೆ ಕೊನೆಗೂ ಈಡೇರಿದೆ. ಬಳ್ಳಾರಿಯ ವಿಜಯನಗರ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿಯೇ ವೈರಾಣು ಪರೀಕ್ಷಾ ಪ್ರಯೋಗಾಲಯ ಆರಂಭವಾಗಿದೆ. 

        ಮಹಾಮಾರಿ ಕೊರೊನಾ ಸೊಂಕಿನ ಪರೀಕ್ಷಾ ವರದಿ ಬೆಂಗಳೂರಿನಿಂದ ಬರುವಿಕೆಗಾಗಿ ಕಾಯುವುದಕ್ಕೆ ಇನ್ಮುಂದೆ ಬ್ರೇಕ್ ಬಿಳಲಿದ್ದು, ತತ್ಕ್ಷಣವೇ ವರದಿ ಲಭ್ಯವಾಗಲಿದೆ.ಇದರಿಂದ ಅಗತ್ಯ ಕ್ರಮಗಳನ್ನುಕೈಗೊಳ್ಳಲು ಜಿಲ್ಲಾಡಳಿತಕ್ಕೆ ಅನುಕೂಲವಾಗಲಿದೆ. ಬಳ್ಳಾರಿ ಸೇರಿದಂತೆ ಸುತ್ತಮುತ್ತಲಿನ ಜಿಲ್ಲೆಗಳಿಗೂ ಇದು ಸಹಕಾರಿಯಾಗಲಿರುವುದು ವಿಶೇಷ.ಅವಿಮ್ಸ್ ನಲ್ಲಿ ಆರಂಭಿಸಲಾಗಿರುವ ವೈರಾಣು ಸಂಶೋಧನಾ ಮತ್ತು ರೋಗ ಪರೀಕ್ಷಾ ಪ್ರಯೋಗಾಲಯವು ಸರಕಾರದಿಂದ ಎಲ್ಲ ರೀತಿಯ ಪರಿಶೀಲನೆಗೆ ಒಳಪಟ್ಟು ಸುಸೂತ್ರ ಕಾಯರ್ಾರಂಭಕ್ಕೆ ಅನುಮತಿ ದೊರಕಿದೆ. 

         ಈ ಪ್ರಯೋಗಾಲಯದಲ್ಲಿ ಒಂದು ಯಂತ್ರವಿದ್ದು, ಪ್ರತಿದಿನಕ್ಕೆ ಒಂದು ಶಿಪ್ಟ್ ನಲ್ಲಿ 15 ಸ್ಯಾಂಪಲ್ ಪರೀಕ್ಷಿಸಬಹುದಾಗಿದೆ. 

         ಈ ಪ್ರಯೋಗಾಲಯದಲ್ಲಿ ಎಲ್ಲ ರೀತಿಯ ವೈಧ್ಯಕೀಯ ಪರಿಕರಗಳನ್ನು ವ್ಯವಸ್ಥೆಗೊಳಿಸಲಾಗಿದೆ.ಜಿಲ್ಲಾಡಳಿತದಿಂದ ಜಿಲ್ಲಾ ವಿಪತ್ತು ಪರಿಹಾರ ಅಡಿ 16.5ಲಕ್ಷ ರೂ.ಮೊತ್ತದಲ್ಲಿ ಇನ್ನೊಂದು ವೈರಾಣು ಪರೀಕ್ಷಾ ಯಂತ್ರವನ್ನು ಖರೀದಿಸಲಾಗಿದ್ದು,ಇದು ಕೂಡ ಪ್ರತಿ ಶಿಪ್ಟ್ ನಲ್ಲಿ 45 ಸ್ಯಾಂಪಲ್ ಪರೀಕ್ಷಿಸಲಿದೆ. ಎರಡು ಶಿಪ್ಟ್ ಗಳಲ್ಲಿ ಎರಡು ಯಂತ್ರಗಳಿಂದ 110 ಸ್ಯಾಂಪಲ್ ಗಳನ್ನು ಪ್ರತಿನಿತ್ಯ ಪರೀಕ್ಷಿಸಬಹುದಾಗಿದೆ ಎಂದು ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಅವರು ತಿಳಿಸಿದ್ದಾರೆ.

           ಈ ಪ್ರಯೋಗಾಲಯ ಸ್ಥಾಪಿಸುವಲ್ಲಿ ವಿಮ್ಸ್ ನಿದರ್ೇಶಕ ಡಾ.ದೇವಾನಂದ, ಮೈಕ್ರೋಬಯೋಲಾಜಿ ವಿಭಾಗದ ಮುಖ್ಯಸ್ಥ ಡಾ.ಕೃಷ್ಣ ಅವರು ವಿಶೇಷ ಶ್ರಮವಹಿಸಿದ್ದಾರೆ ಎಂದು ಅವರು ಶ್ಲಾಘಿಸಿದ್ದಾರೆ.