ಸ್ಟೇಯ್ನ್ ಅವರ ತಲೆಮಾರಿನವರಲ್ಲಿ ಶ್ರೇಷ್ಠ ಬೌಲರ್: ಡುಪ್ಲೇಸಿಸ್

ನವದೆಹಲಿ, ಆ 6   ದಕ್ಷಿಣ ಆಫ್ರಿಕಾ ಡೇಕಲ್ ಸ್ಟೇಯ್ನ್ ಟೆಸ್ಟ್ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ವಿದಾಯ ಘೋಷಿಸಿದ ಬಳಿಕ ಮೊದಲ ಬಾರಿ ಪ್ರತಿಕ್ರಿಯಿಸಿದ ನಾಯಕ ಫಾಫ್ ಡುಪ್ಲೇಸಿಸ್ ಅವರು ಸ್ಟೇಯ್ನ್ ಅವರ ತಲೆಮಾರಿನಲ್ಲಿ ಅವರೊಬ್ಬ ಅದ್ಭುತ ಬೌಲರ್ ಎಂದು ಶ್ಲಾಘಿಸಿದ್ದಾರೆ.  

ಈ ಕುರಿತು ಟ್ವೀಟ್ ಮಾಡಿರುವ ಅವರು, ಸ್ಟೇಯ್ನ್ ಅವರು ಅವರ ತಲೆಮಾರಿನಲ್ಲಿ ಶ್ರೇಷ್ಠ ಬೌಲರ್ ಎನ್ನುವುದಕ್ಕಿಂತ ಅವರ ಬೌಲಿಂಗ್ ದಾಖಲೆ ನೋಡಿದಲ್ಲಿ ಅರ್ಥವಾಗಲಿದೆ. ಟೆಸ್ಟ್ ಕ್ರಿಕೆಟ್ ಬಗ್ಗೆ ನೀವೆಷ್ಟು ಆಸಕ್ತಿ ಹಾಗೂ ಎಷ್ಟು ಸಾಧನೆ ಮಾಡಿದ್ದೀರಿ ಎಂಬುದು ಎಲ್ಲರಿಗೂ ತಿಳಿದಿದೆ. ನಿಗದಿತ ಓವರ್ ಪಂದ್ಯಗಳಲ್ಲಿ ನಿಮ್ಮ ಬೌಲಿಂಗ್ ಕಣ್ತುಂಬಿಸಿಕೊಳ್ಳಲಿದ್ದೇವೆ ಎಂಬ ನಿರೀಕ್ಷೆ ಇದೆ.   

ಸ್ಟೇಯ್ನ್ ಅವರ ಟೆಸ್ಟ್ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ ಬಳಿಕ ಭಾರತೀಯ ಕ್ರಿಕೆಟ್ ಮಂಡಳಿ ಕೂಡ ಪ್ರತಿಕ್ರಿಯೆ ನೀಡಿದೆ.  

"93 ಟೆಸ್ಟ್ ಪಂದ್ಯಗಳಲ್ಲಿ 439 ವಿಕೆಟ್ ಪಡೆದು ಸಾಧನೆ ಮಾಡಿರುವ ದಕ್ಷಿಣ ಆಫ್ರಿಕಾ ವೇಗಿ ಡೇಲ್ ಸ್ಟೇಯ್ನ್ ಅವರು ಟೆಸ್ಟ್ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ್ದಾರೆ. ಅವರ ನಿಗದಿತ ಓವರ್ಗಳ ಮಾದರಿಯಲ್ಲಿ ಅವರ ಬೌಲಿಂಗ್ ಅನ್ನು ಆಹ್ಲಾದಿಸಲಿದ್ದೇವೆ. ಅವರ ಮುಂದಿನ ಜೀವನ ಸುಖಕರವಾಗಿರಲಿ" ಎಂದು ಬಿಸಿಸಿಐ ಟ್ವೀಟ್ ಮಾಡಿದೆ. 

ಡೇಲ್ ಸ್ಟೇಯ್ನ್ ಅವರು ಟೆಸ್ಟ್ ಕ್ರಿಕೆಟ್ ವೃತ್ತಿ ಜೀವನದಲ್ಲಿ 93 ಪಂದ್ಯಗಳಿಂದ 22.95 ಸರಾಸರಿಯಲ್ಲಿ 439 ವಿಕೆಟ್ ಪಡೆಯುವ ಮೂಲಕ ದಕ್ಷಿಣ ಆಫ್ರಿಕಾ ಪರ ಅತಿ ಹೆಚ್ಚು ವಿಕೆಟ್ ಪಡೆದವರ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿದ್ದಾರೆ. ಶಾನ್ ಪೊಲಾಕ್ ಅವರನ್ನು ಪ್ರಸಕ್ತ ವರ್ಷದಲ್ಲಿ ಸ್ಟೇಯ್ನ್ ಹಿಂದಿಕ್ಕಿದ್ದರು.