ವಿದ್ಯಾರ್ಥಿ ಮತ್ತು ಕ್ರೀಡಾ ಸಂಘ ಸಮಾರೋಪ ಸಮಾರಂಭ

Student and Sports Association Closing Ceremony

ವಾರ್ಷಿಕ ಸ್ನೇಹ ಸಮ್ಮೇಳನ 

ಇಂಡಿ 29: ತಾಲ್ಲೂಕಿನ ಸರಕಾರಿ ಪಾಲಿಟೆಕ್ನಿಕ್ ಝಳಕಿ ಸರ್ ಎಮ್ ವಿಶೇಶ್ವರಯ್ಯ ಸಭಾಂಗಣದಲ್ಲಿ 2024-25ನೇ ಸಾಲಿನ ವಿದ್ಯಾರ್ಥಿ ಮತ್ತು ಕ್ರೀಡಾ ಸಂಘ ಸಮಾರೋಪ ಸಮಾರಂಭ ಹಾಗೂ ವಾರ್ಷಿಕ ಸ್ನೇಹ ಸಮ್ಮೇಳನ ಸಮಾರಂಭ ಸರಕಾರಿ ಪ್ರಥಮ ದರ್ಜೆ ಕಾಲೇಜು ಝಳಕಿ ಪ್ರಾಚಾರ್ಯರು ಡಾ!! ವಿವೇಕಾನಂದ ಉಘಾಡೆ ಮತ್ತು ಚಡಚಣ ತಾಲೂಕು ಸರಕಾರಿ ನೌಕರರ ಸಂಘದ ಅಧ್ಯಕ್ಷರು ಬಸವರಾಜ ಮಜ್ಜಗಿ ಇವರ ಸಹಯೋಗದಲ್ಲಿ ನೆರವೇರಿಸಲಾಯಿತು.ವಿದ್ಯಾರ್ಥಿ ಜೀವನ ಬಂಗಾರದ ಜೀವನ, ಈ ಸಮಯ ಮರಳಿ ಬಾರದು, ಇದು ಜೀವನ ಎಂಬ ಕಟ್ಟಡದ ತಳಪಾಯ, ಇಲ್ಲಿ ನಿರ್ಮಿಸುವ ತಳಪಾಯ ನಿಮ್ಮ ಜೀವನದಲ್ಲಿ ಬಹು ಮಹಡಿಯ ಕಟ್ಟಡ ಅಂದರೆ ಎತ್ತರದ ಸಾಧನೆ ಮಾಡಲು ಸಾಧ್ಯ, ಡಿಪ್ಲೋಮ ಇದು ತಾಂತ್ರಿಕ ವಿಭಾಗ ಈ ಕಾಲೇಜಿನ ವಿದ್ಯಾರ್ಥಿಗಳು ಸಾಧಾರಣ ಕ್ರೀಡೆಗಳಲ್ಲಿ ಭಾಗವಹಿಸೋದು ವಿರಳ, ಆದರೆ ವಿದ್ಯಾಕಾಶಿ ಝಳಕಿ ಕಾಲೇಜಿನ ವಿದ್ಯಾರ್ಥಿಗಳು ಆಟದ ಜ್ಯೋತೆ ಪಾಠ, ಈಗಾಗಲೇ ಹಲವು ವಿದ್ಯಾರ್ಥಿಗಳು ಈಗಾಗಲೇ ಹಲವಾರು ಕಂಪನಿಗಳಲ್ಲಿ ಹುದ್ದೆ ಪಡೆದಿದ್ದು ಬಹು ಸಂತೋಷ ಎಂದು ಚಡಚಣ ತಾಲೂಕು ಸರಕಾರಿ ನೌಕರರ ಸಂಘದ ಅಧ್ಯಕ್ಷರು ಬಸವರಾಜ ಮಜ್ಜಗಿ ಮಾತನಾಡಿದರು. 

ಈ ಸಂದರ್ಭದಲ್ಲಿ ಕಾಲೇಜಿನ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪ್ರಧಾನ ಮತ್ತು ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಈ ಸಂದರ್ಭದಲ್ಲಿ ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಅಧ್ಯಕ್ಷರಾದ ಸತೀಶ್ ಪಾಟೀಲ ಹಾಗೂ, ಶೈನಾಜ ನಡದಾಳ, ನರೇಂದ್ರಕುಮಾರ ಡಿ ಎನ್, ರಾಜೇಶ್ವರಿ ತಿವಾರಿ, ಶಂಕರ ನಾಯಕ, ಅನಿಲಕುಮಾರ ಪಾಟೀಲ ಹಾಗೂ ಕಾಲೇಜಿನ ಸಿಬ್ಬಂದಿ ಮತ್ತು ಎಲ್ಲ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.