ರಾಯಬಾಗ, 29; ಇಂದಿನ ವಿದ್ಯಾರ್ಥಿಗಳು ಮೊಬೈಲ್ ಹಾಗೂ ದೂರದರ್ಶನಗಳ ಭರಾಟೆಯಲ್ಲಿ ಏಕಾಗ್ರತೆ ಮತ್ತು ಸಮಯ ಪ್ರಜ್ಞೆಯನ್ನು ಕಳೆದುಕೊಳ್ಳುತ್ತಿದ್ದಾರೆ ಎಂದು ಸಾಹಿತಿ ಟಿ.ಎಸ್ ವಂಟಗೂಡಿ ಖೇದ ವ್ಯಕ್ತಪಡಿಸಿದರು. ತಾಲೂಕಿನ ಖೈರವಾಡಿಯ ಸರಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ವಾರ್ಷಿಕ ಸ್ನೇಹ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಅವರು, ಶಿಕ್ಷಕರು ವಿದ್ಯಾರ್ಥಿಗಳಿಗೆ ಉತ್ತಮ ಮಾರ್ಗದರ್ಶನ ನೀಡಿ ಶಿಕ್ಷಣದೊಂದಿಗೆ ಸಂಸ್ಕಾರ, ವಿನಯ ಕಲಿಸಿಕೊಡಬೇಕು. ವಿದ್ಯಾರ್ಥಿಗಳು ಗುರುವಿನ ಮಾರ್ಗದರ್ಶನದಲ್ಲಿ ನಡೆದರೆ ಜೀವನ ಪಾವನವಾಗುವುದು ಎಂದರು.
ಅಧ್ಯಕ್ಷತೆಯನ್ನು ಶಾಲೆಯ ಪ್ರಧಾನ ಗುರುಮಾತೆ ಚೆನ್ನಮ್ಮ ನಾಯಕ ವಹಿಸಿಕೊಂಡಿದ್ದರು. ವೇದಿಕೆ ಮೇಲೆ ಗ್ರಾ. ಪಂ ಅಧ್ಯಕ್ಷೆ ಮಹಾದೇವಿ ದೀಪಾಳೆ, ಎಸ್. ಡಿ. ಎಂ. ಸಿ ಅಧ್ಯಕ್ಷ ಸಂತೋಷ ತೇರದಾಳ, ಕ್ಷೇತ್ರ ಸಮನ್ವಯಾಧಿಕಾರಿ ಬಸವರಾಜ ಕಾಂಬಳೆ, ವಕೀಲರಾದ ರಾಯಪ್ಪ ಗೊಂಡೆ, ಸಿ.ಆರಿ್ಪ. ಎಸ್.ಎ ಸುತಾರ, ಸಂಜು ಭಾವಚಿ, ಮಹಾದೇವ ಗೇನೆನವರ, ನಾರಾಯಣ ದಾವಣೆ, ಭೀಮವ್ವ ಹಾವನ್ನವರ, ಸದಾಶಿವ ಜಾಧವ ಪ್ರಣತಿ ತೇರದಾಳೆ ಮತ್ತು ಶಿಕ್ಷಕರು, ವಿದ್ಯಾರ್ಥಿಗಳು ಇದ್ದರು.
ಗಾಯತ್ರಿ ಹೋಳ್ಕರ ಸ್ವಾಗತಿಸಿದರು, ಮಂಜುಳಾ ಗೊಂಡೆ ನಿರೂಪಿಸಿದರು, ಹೇಮಲತಾ ಪಾಟೀಲ ವಂದಿಸಿದರು.