ಮಹಾಲಿಂಗಪುರ 30: ಕಲಿಕಾ ಹಂತದಲ್ಲಿ ಮಕ್ಕಳಿಗೆ ಹೊರ ಪ್ರಪಂಚದ ವ್ಯಾಪಾರ, ವಹಿವಾಟು ಮತ್ತು ಭವಿಷ್ಯದ ಬದುಕಿಗೆ ಅಗತ್ಯವಿರುವ ಇನ್ನಿತರ ವಿಷಯಗಳ ಅರಿವು ನೀಡುವುದು ಇವತ್ತಿನ ಅನಿವಾರ್ಯವಾಗಿದೆ ಎಂದು ಸ್ಥಳೀಯ ರಾಂಭವ ಗಾಮೆಂರ್ಟ್ ಮಾಲೀಕರಾದ ಬಾಳಕೃಷ್ಣ ಮಾಳವದೆ ಹೇಳಿದರು.
ಶುಕ್ರವಾರ ಮುಂಜಾನೆ ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕಿನ ಕಂಕಣವಾಡಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯ 8 ಮತ್ತು 9 ನೇ ತರಗತಿ ವಿದ್ಯಾರ್ಥಿಗಳಿಗೆ ಶಾಲಾ ಶಿಕ್ಷಣ ಇಲಾಖೆಯ ಸಮಗ್ರ ಶಿಕ್ಷಣ ಕರ್ನಾಟಕ ವಿಷಯ ಅಡಿಯಲ್ಲಿ ' ರಾಷ್ಟ್ರೀಯ ಕೌಶಲ್ಯ ಅರ್ಹತಾ ಚೌಕಟ್ಟು ' ಯೋಜನೆಯಂತೆ ಒಂದು ದಿನದ ಶೈಕ್ಷಣಿಕ ಕಾರ್ಯಕ್ರಮ ಅಂಗವಾಗಿ ರಾಂಭವ ಗಾಮೆಂರ್ಟ್ ಗೆ ಭೇಟಿ ನೀಡಿದ ಸಂದರ್ಭದಲ್ಲಿ ಅವರು ಮಾತನಾಡಿದರು.
ಇವತ್ತಿನ ಈ ಭೇಟಿ ಮಕ್ಕಳ ಭವಿಷ್ಯದ ಬಾಳಿನ ಬುತ್ತಿಯೇ ಸರಿ ಎಂದರೆ ಅತಿಶಯೋಕ್ತಿಯಲ್ಲ. ಈ ಸಂದರ್ಭ ಕೇಂದ್ರದ ಯೋಜನೆ ಭಾರತದ ಭಾವಿ ಭವಿಷ್ಯತ್ ರೂಪಿಸುವುದಾಗಿದೆ. ಆದ್ದರಿಂದ ಇಂದಿನ ಮಕ್ಕಳು ನಾಳಿನ ಉತ್ತಮ ನಾಗರಿಕರಾಗಬೇಕು ಸೋಮಾರಿಗಳಲ್ಲ. ತಾವು ಕಾರ್ಯಾಗಾರಕ್ಕೆ ಭೇಟಿ ನೀಡುತ್ತಿರುವುದನ್ನು ಸ್ವಾವಲಂಬಿ ಬದುಕು ಕಟ್ಟಿಕೊಳ್ಳುವ ನಿಟ್ಟಿನಲ್ಲಿ ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.
ವಿಧ್ಯಾರ್ಥಿಗಳು ಗಾಮೆಂರ್ಟ್ ನ ವಿವಿಧೆಡೆ ಸಂಚರಿಸಿ ಬಟ್ಟೆಗಳ ಗುಣಮಟ್ಟ, ಆಧುನಿಕ ಯಂತ್ರಗಳು, ವಿವಿಧ ಶೈಲಿಗಳಲ್ಲಿ ಬಟ್ಟೆ ಕತ್ತರಿಸುವಿಕೆ, ಹೊಲಿಯುವ ಕೌಶಲ್ಯ ಮತ್ತು ಯಂತ್ರೋಪಕರಣಗಳ ಬಿಡಿ ಭಾಗಗಳನ್ನು ವೀಕ್ಷಣೆ ಮಾಡಿದರು. ಕಾರ್ಯಾಗಾರ ಸಿಬ್ಬಂದಿಗಳು ವಿಧ್ಯಾರ್ಥಿಗಳಿಗೆ ಮಾಹಿತಿ ನೀಡಿದರು.
ಈ ಸಮಯದಲ್ಲಿ ಅಪೇರಲ್ಸ್ ಶಿಕ್ಷಕಿ ಗೀತಾ ಉಪ್ಪಾರ, ಬ್ಯೂಟಿ ಮತ್ತು ವೆಲ್ ನೆಸ್ ಶಿಕ್ಷಕಿ ನಿಕಿತಾ ಪೋಳ, ದೈಹಿಕ ಶಿಕ್ಷಕ ಸುಭಾಸ್ ಹೆಳವರ ಮತ್ತು ಸಹ ಶಿಕ್ಷಕರಾದ ಎಂ ಎಂ ನುಚ್ಚುಂಡಿ, ವೆಂಕಟೇಶ್ ಹಾಗೂ ಶ್ರೀಶೈಲ ಹುಲಕುಂದ, ನವಿನ ಕಲಾಲ ಅಲ್ಲದೆ ವಿಧ್ಯಾರ್ಥಿ, ವಿಧ್ಯಾರ್ಥಿನಿಯರು ಇದ್ದರು.