ಲೋಕದರ್ಶನ ವರದಿ
ಪ್ರತಿಭೆಗಳನ್ನು ಗುರುತಿಸಲು ಇಂತಹ ಚಟುವಟಿಕೆಗಳು ಅವಶ್ಯಕ; ಟೋಪನ್ನವರ
ಯರಗಟ್ಟಿ, 27 : ಮಕ್ಕಳಲ್ಲಿನ ಪ್ರತಿಬೆಯನ್ನು ಗುರುತಿಸುವುದಕ್ಕೆ ಇಂತಹ ಬೆಸಿಗೆ ರಜೆಯಲ್ಲಿ ವೇಳೆ ಹಾಳು ಮಾಡದೆ ಇಂತಹ ಸುದ್ದ ಬರಹ, ಸ್ಪಷ್ಠ ಓದುವುದು, ಕ್ರೀಡೆ, ಸಂಗೀತ ಚಟುವಟಿಕೆ ಭಾಗವಹಿಸುವುದರಿಂದ ಅವರ ಪ್ರತಿಭೆಗಳನ್ನು ಗುರುತಿಸಲು ಅನುಕೊಲವಾಗುತ್ತದೆ. ಎಂದು ಕೋಟೂರ ಶಿವಾಪೂರ ಗ್ರಾಮ ಪಂಚಾಯತಿ ಅಧ್ಯಕ್ಷ ತವಣಪ್ಪ ಟೋಪನ್ನವರ ತಿಳಿಸಿದರು.
ಅವರು ಯರಗಟ್ಟಿ ಸಮೀಪದ ಕೋ.ಶಿವಾಪೂರ ಗ್ರಾಮ ಪಂಚಾಯತಿ ಆವರದಲ್ಲಿ ದಿ.24 ರಂದು ಗ್ರಂಥಾಲಯದಲ್ಲಿ ವಿದ್ಯಾರ್ಥಿಗಳಿಗೆ ಬೇಸಿಗೆ ಕಲಿಕಾ ಸಂಭ್ರಮ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಇಂತಹ ಚಟುವಟಿಕೆಗಳನ್ನು ಎರಿ್ಡಸುವುದರಿಂದ ಬಡಮಕ್ಕಳಿಗೆ ಅನನುಕೊಲವಾಗುತ್ತದೆ ಇದರಿಂದ ನಮ್ಮ ದೇಶದಲ್ಲಿ ಶಿಕ್ಷಣದಲ್ಲಿ ಬದಲಾವಣೆ ತರಲು ಸಾದ್ಯವೆಂದರು.
ಗ್ರಾಮ ಪಂಚಾಯತಿ ಅಭಿವೃದ್ದಿ ಅಧಿಕಾರಿ ಸಂಕಪ್ಪ ಪಡಿ ಮಾತನಾಡಿ ಗ್ರಾಮೀಣ ಭಾಗದಲ್ಲಿನ ಗ್ರಂಥಾಲಯ ಅರಿವು ಕೇಂದ್ರಗಳು ಸಾಕಷ್ಟು ಡಿಜಿಟಲ್ ಕೇಂದ್ರವಾಗಿ ಕಾರ್ಯನಿರ್ವಹಿಸುತ್ತಿವೆ. ಅದರಲ್ಲೂ ಸಹ ಇಂತಹ ಅನೇಕ ಕಾರ್ಯಕ್ರಮಗಳನ್ನು ಬೆಸಿಗೆಯಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ವಿವಿಧ ಚಚಟುವಟಿಗಳನ್ನು ಮಾಡುತ್ತಿರುವುದರಿಂದ ಇಂದಿನ ಮಕ್ಕಳಲ್ಲಿ ಅಡಗಿರುವಂತಾ ಜ್ಞಾನವನ್ನು ಗುರುತಿಸಲು ಅನುಕೊಲವಾಗುತ್ತದೆ ಎಂದು ತಿಳಿಸಿದರು.
ಗ್ರಾಪಂ ಉಪಾಧ್ಯಕ್ಷ ಮಲಿಕಸಾಬ ಸನದಿ, ಎ ಎಸ್ ಮುಲ್ಲಾ, ಸರಸ್ವತಿ ಬೆಟಸೂರ, ಭಾರತಿ ಪಾಟೀಲ, ಮಹಾದೇವ ಜಕ್ಕನ್ನವರ, ಮಹಾಂತೇಶ ಮಠಪತಿ, ಯಲ್ಲಪ್ಪ ಹಣಬರಟ್ಟಿ, ಭರಮಪ್ಪ ಉಪಾದ್ಯೆ, ಶಿವಪ್ಪ ನಾಯ್ಕರ, ಮಹಾದೇವ ಹರಿನ, ಈರ್ಪ ಜಕ್ಕನ್ನವರ, ಎಸ್ ಎಮ್ ಪಾಟೀಲ, ಶಾಲಾ ವಿದ್ಯಾರ್ಥಿಗಳು ವಬಾಗವಹಿಸಿದ್ದರು.