ರೆಡ್‍ಕ್ರಾಸ್‍ನಿಂದ ಆರೋಗ್ಯ ಇಲಾಖೆಗೆ ಸಾಮಾಗ್ರಿ ಹಸ್ತಾಂತರ

ಮಂಗಳೂರು,  ಮೇ 8,  ರೆಡ್‍ಕ್ರಾಸ್ ಸಂಸ್ಥಾಪಕ ಸರ್ ಹೆನ್ರಿ ಡೊನಾಂಟ್ ಅವರ  ಜನ್ಮದಿನದ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ರೆಡ್‍ಕ್ರಾಸ್ ಘಟಕದ ವತಿಯಿಂದ  ಆರೋಗ್ಯ ಇಲಾಖೆಗೆ ಮಾಸ್ಕ್, ಸ್ಯಾನಿಟೈಸರ್, ಸಾಬೂನುಗಳ ಹಸ್ತಾಂತರ ಕಾರ್ಯಕ್ರಮ ಶುಕ್ರವಾರ  ಸಂಸದರ ಕಚೇರಿಯಲ್ಲಿ ನಡೆಯಿತು. ಭಾರತೀಯ ರೆಡ್‍ಕ್ರಾಸ್ ಜಿಲ್ಲಾ ಗೌರವ ಕಾರ್ಯದರ್ಶಿ  ಪ್ರಭಾಕರ ಶರ್ಮಾ ಮಾತನಾಡಿ, ರೆಡ್‍ಕ್ರಾಸ್ ಸಂಸ್ಥಾಪಕರ ಜನ್ಮದಿನದ ಪ್ರಯುಕ್ತ ಕೋರೋನಾ  ನಿಯಂತ್ರಣಕ್ಕಾಗಿ ಹಗಲಿರುಳು ದುಡಿಯುತ್ತಿರುವ ಆರೋಗ್ಯ ಕಾರ್ಯಕರ್ತರಿಗೆ ಪೂರಕವಾಗಿ  ನೆರವಾಗಲು ಆರೋಗ್ಯ ಇಲಾಖೆಗೆ ಇಂದು ಅಗತ್ಯ ಸಾಮಾಗ್ರಿಗಳನ್ನು ನೀಡಿ ರೆಡ್‍ಕ್ರಾಸ್  ನೆರವಾಗುತ್ತಿದೆ ಎಂದು ಹೇಳಿದರು.
ಲೋಕಸಭಾ ಸದಸ್ಯ ನಳಿನ್ ಕುಮಾರ್ ಕಟೀಲು ಅವರು  ರೆಡ್‍ಕ್ರಾಸ್ ಸಾಮಾಗ್ರಿಗಳನ್ನು ಜಿಲ್ಲಾ ಆರೋಗ್ಯಾಧಿಕಾರಿಗೆ ಹಸ್ತಾಂತರಿಸಿ ಮಾತನಾಡಿ,  ರೆಡ್‍ಕ್ರಾಸ್ ಸಂಸ್ಥಾಪಕರ ಜನ್ಮದಿನವನ್ನು ಆರೋಗ್ಯ ಕಾರ್ಯಕರ್ತೆಯರಿಗೆ ನೆರವಾಗುವ ಮೂಲಕ  ವಿಶಿಷ್ಟವಾಗಿ ಹಸ್ತಾಂತರಿಸಲಾಗುತ್ತಿರುವುದು ಶ್ಲಾಘನೀಯ. ಕೋರೋನಾ ನಿಯಂತ್ರಣಕ್ಕಾಗಿ  ಸರ್ವರೂ ಕೈಜೋಡಿಸಬೇಕು. ಶುದ್ಧ ಆರೋಗ್ಯ ಹಾಗೂ ಮನೆಯೊಳಗೆ ಸ್ವಯಂ ಇರುವುದರ ಮೂಲಕ ಇದರ  ನಿಯಂತ್ರಣ ಸಾಧ್ಯವಿದೆ ಎಂದು ಹೇಳಿದರು. ರೆಡ್‍ಕ್ರಾಸ್ ಪ್ರಸಕ್ತ ವರ್ಷದ  ಧ್ಯೇಯವಾಕ್ಯ “ ಸ್ವಯಂಸೇವಕರಿಗೆ ಚಪ್ಪಾಳೆ ತಟ್ಟಿರಿ” ಎಂಬಂತೆ  ಕಾರ್ಯಕ್ರಮದಲ್ಲಿ  ಚಪ್ಪಾಳೆ ತಟ್ಟುವ ಮೂಲಕ ಕೋರೋನಾ ಸ್ವಯಂಸೇವಕರಿಗೆ ಗೌರವ ಸೂಚಿಸಲಾಯಿತು. ಈ  ಸಂದರ್ಭದಲ್ಲಿ ಭಾರತೀಯ ರೆಡ್‍ಕ್ರಾಸ್ ಜಿಲ್ಲಾ ಅಧ್ಯಕ್ಷ ಶಾಂತರಾಮ ಶೆಟ್ಟಿ, ಉಪಾಧ್ಯಕ್ಷ  ನಿತ್ಯಾನಂದ ಶೆಟ್ಟಿ, ರವೀಂದ್ರ ಶೆಟ್ಟಿ, ಗಣಪತಿ ಗೌಡ, ಜಿಲ್ಲಾ ಆರೋಗ್ಯಾಧಿಕಾರಿ ಡಾ.  ರಾಮಚಂದ್ರ ಬಾಯರಿ, ಜಿ.ಪಂ. ಮಾಜಿ ಉಪಾಧ್ಯಕ್ಷ ಸತೀಶ್ ಕುಂಪಲ, ಸುದರ್ಶನ್ ಮತ್ತಿತರರು  ಇದ್ದರು.