ಶರಣ ಸಂಸ್ಕೃತಿ ಎಂಬುದು ಸವ್ರೋದಯ ಪ್ರೇರಣೆಯ ಹಬ್ಬ: ಸಂಗನಬಸವ ಶ್ರೀ

ಶಿಗ್ಗಾವಿ11 : ಶರಣ ಸಂಸ್ಕೃತಿ ಎಂಬುದು ಸಾಂಪ್ರದಾಯಿಕ ಆಚರಣೆಯಾಗಿರದೇ ವೈಚಾರಕತೆಯನ್ನು ಬಿತ್ತುವ, ಸಮಾನತೆಯನ್ನು ಸಾರುವ, ಸರ್ವರೂ ಪಾಲ್ಗೊಳ್ಳುವಿಕೆಯ ಮತ್ತು ಸವರ್ೋದಯ ಪ್ರೇರಣೆಯ ಹಬ್ಬವಾಗಿದೆ ಎಂದು ಶಿಗ್ಗಾವಿ ವಿರಕ್ತಮಠದ ಸಂಗನಬಸವ ಶ್ರೀಗಳು ಹೇಳಿದರು.

ಪಟ್ಟಣದ ವಿರಕ್ತಮಠದಲ್ಲಿ ನಡೆಯುತ್ತಿರುವ ಶರಣ ಸಂಸ್ಕೃತಿ ಉತ್ಸವದ ಸಾನಿದ್ಯವಹಿಸಿ ಮಾತನಾಡಿದ ಅವರು ಸೌಹಾರ್ಧತೆಗೆ ಇನ್ನೋಂದು ಹೆಸರೇ ಶರಣ ಸಂಸ್ಕೃತಿ ಉತ್ಸವಾಗಿದೆ, ಇದು ಶರಣ್ಯ ಭಾವದಿಂದ ಶಿವನನ್ನು ರಾದಿಸಿ ಕೊನೆಗೆ ಶಿವನೇ ಆಗುವ ಭಕ್ತರನ್ನು ಶಿವಶರಣರು ಎಂದು ಹೇಳಬಹುದಾಗಿದ್ದು ಶರಣ ಸಂಸ್ಕೃತಿಯ ಮುಖ್ಯ ಉದ್ದೇಶ ಕಾಯಕವೇ ಆಗಿದೆ ಎಂದರು.

ಪತ್ರಕರ್ತ ಸುಧಾಕರ ದೈವಜ್ಞ ಸನ್ಮಾನ ಸ್ವೀಕರಿಸಿ ಮಾತನಾಡಿ ಕಾಯಕವೇ ಕೈಲಾಸ ಎಂದು ಬಸವಣ್ಣನವರು, ನರದೇವಾಲಯವನ್ನು ಹರ ದೇವಾಲಯವೆನ್ನುತ್ತಾರೆ ಶರಣರು ಅಂದೇ ಸಾಮಾಜಿಕ ಸಮಾನತೆಗೆ ಬಹಳಷ್ಟು ಕೊಡುಗೆಯನ್ನು ನೀಡಿದ್ದಾರೆ. ಅವರ ಮಾರ್ಗದಲ್ಲಿ ನಾವೆಲ್ಲ ನಡೆಯಬೇಕಿದೆ ಅಂದಾಗ ಅಂದಿನ ಸಮಾನತೆಯ ಅವಶ್ಯಕ ವಿಚಾರಗಳನ್ನು ಮನಗಾಣಬಹುದಾಗಿದೆ, ಜೊತೆಗೆ ಒತ್ತಡದ ಜೀವನದಲ್ಲಿ ಅವುಗಳನ್ನು ನಾವೆಲ್ಲರೂ ದಿಕ್ಕರಿಸುತ್ತಿದ್ದು ಅದು ಬೆಳವಣಿಗೆಯ ದೃಷ್ಟಿಯಿಂದ ಒತ್ತಡಕ್ಕೆ ಮಣಿಯದೇ ಕಾಯಕ ದೃಷ್ಟಿಯಿಂದ ಜೀವನವನ್ನ ಸಾಗಿಸಬೇಕಿದೆ ಎಂದರು.

ಇದೇ ಸಂದರ್ಭದಲ್ಲಿ ಜಗದ್ಗುರು ರೇಣುಕಾಚಾರ್ಯರರ ಜಯಂತಿ ಪ್ರಯುಕ್ತ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು.

ನಂತರ ನಡೆದ ರಾಮದುರ್ಗದ ಓಂ ಶಿವಮೇಳದ ಸಿದ್ದು ಮೋಟೆ ಮತ್ತು ಅವರ ತಂಡದಿಂದ ನಡೆದ ಡೊಳ್ಳಿನ ಹಾಡಿನ ಹಾಡುಗಳು ನೆರೆದ ಭಕ್ತರನ್ನ ಮಂತ್ರಮುಗ್ದರನ್ನಾಸಿದವು.

ಕಾರ್ಯಕ್ರಮದಲ್ಲಿ ಕಲೋತ್ಸವ ಪ್ರಶಸ್ತಿ ಪುರಸ್ಕೃತ ಸಹದೇವಪ್ಪ ಕಮಡೊಳ್ಳಿ ಮತ್ತು ನಟರಾಜ ನಾಟ್ಯ ಶಾಲೆಯ ಸಾಯಿಬಾಬಾ ಕಾಮನಹಳ್ಳಿ ಅವರನ್ನ ಸನ್ಮಾನಿಸಲಾಯಿತು.

ಇದಕ್ಕೂ ಮೊದಲು ಅಗಡಿ ಅಕ್ಕಿಮಠದ ಡಾ.ಗುರುಲಿಂಗ ಸ್ವಾಮೀಜಿ ಪ್ರವಚನ ನೀಡಿದರು, ತಾಪಂ ಅದ್ಯಕ್ಷೆ ಪಾರವ್ವ ಆರೇರ, ವಿವಿಧ ಸಮಾಜಕ ಸಂಸ್ಥೆಯ ಪಧಾಧಿಕಾರಿಗಳು ಮತ್ತು ಮಠದ ಭಕ್ತರು ಉಪಸ್ಥಿತರಿದ್ದರು.