ನೆರೆಹಾವಳಿ ಪ್ರದೇಶಗಳಿಗೆ ತಹಶೀಲ್ದಾರ ಭೇಟಿ ನೀಡಿ ಪರಿಶೀಲನೆ

ಶಿಗ್ಗಾವಿ11 : ತಾಲೂಕಿನ ಬಂಕಾಪುರ ಪಟ್ಟಣದ ಕುಂಬಾರಗಟ್ಟಿ ಪ್ಲಾಟಿನಲ್ಲಿ ನೆರೆ ಹಾವಳಿಯಿಂದ ಬಿದ್ದ ಮನೆಗಳನ್ನು ಶಿಗ್ಗಾವಿ ತಹಶೀಲ್ದಾರ ಪ್ರಕಾಶ ಕುದರಿ ಭೇಟಿ ನೀಡಿ ಪರಿಶೀಲಿಸಿದರು.

     ಕುಂಬಾರಗಟ್ಟಿ ಕೆರೆಗೆ ಹೊಂದಿಕೋಂಡು, ನೆರೆಹಾವಳಿಯಿಂದ 6 ಮನೆಗಳು ಸಂಪೂರ್ಣ ಬಿದ್ದಿವೆ. ಸರಕಾರದಿಂದ ಹಣ ಕೂಡಾ ಮಂಜೂರಾಗಿದೆ. ಆದರೆ ಪುರಸಭೆಯವರು ವರ್ಕ ಆರ್ಡರ ನೀಡಿರುವುದಿಲ್ಲ ಎಂಬ ಆರೋಪದ ಹಿನ್ನಲೆಯಲ್ಲಿ ತಹಶೀಲ್ದಾರ ಪ್ರಕಾಶ ಕುದರಿ ಪುರಸಭೆ ಮುಖ್ಯಾಧಿಕಾರಿ ರೇಣುಕಾ ದೇಸಾಯಿ ಹಾಗು ಕಂದಾಯ ಅಧಿಕಾರಿಗಳೋಂದಿಗೆ ಆಗಮಿಸಿ ಬಿದ್ದ ಮನೆಗಳ ಪರಿಶೀಲನೆ ನಡೆಸಿದರು. 

     ನಂತರ ವರದಿಗಾರರೋಂದಿಗೆ ಮಾತನಾಡಿದ ಅವರು, ಕುಂಬಾರಗಟ್ಟಿ ಕೆರೆಗೆ ಹೋಂದಿಕೊಂಡಿರುವ 6 ಮನೆಗಳು ಅತೀವೃಷ್ಠಿಯಿಂದ ಹಾನಿಯಾಗಿವೆ. ಆದರೆ ಅವು ಕೆರೆಯ ಜಾಗವನ್ನು ಒತ್ತುವರಿಮಾಡಿಕೋಂಡ ಬಗ್ಗೆ ಅನುಮಾನವಿದ್ದು, ಸವರ್ೆ ಅಧಿಕಾರಿಗಳಿಂದ ಕೆರೆಯಜಾಗವನ್ನು ಸವರ್ೆ ಮಾಡಿಸಲಾಗುವುದು. ಇಗ ಮನೆ ಕಳೆದುಕೋಂಡ ಪಲಾನುಭವಿಗಳು ಕೆರೆಯ ಜಾಗವನ್ನು ಒತ್ತುವರಿಮಾಡಿಕೋಂಡಿದ್ದರೆ ಮನೆಯನ್ನು ತೆರವುಮಾಡಿ ಕೊಡುವುದಾಗಿ ಬಾಂಡ ಪೇಪರ ಸಲ್ಲಿಸಿ, ಪುರಸಭೆಯಿಂದ ವರ್ಕ ಆರ್ಡರ ಪಡೆದು ಮನೆ ಕಟ್ಟಿಸಿಕೋಳ್ಳುವಂತೆ ಪಲಾನುಭವಿಗಳಿಗೆ ಸೂಚಿಸಿದರು.

     ಮನೆ ಕಳೆದುಕೋಂಡು ನಿರ್ಗತಿಕರಾದ ಸಂತ್ರಸ್ತರಿಗೆ ಕೂಡಲೆ ಅನುದಾನ ಬಿಡುಗಡೆಮಾಡಿ ಅನಕೂಲಮಾಡಿಕೊಡಲಾಗುವುದು. ಮನೆಬಿದ್ದ ಪಲಾನುಭವಿಗಳಿಗೆ ಗ್ರೇಡ್ ನೀಡುವಲ್ಲಿ ತಾರತಮ್ಯ ಎಸಗಲಾಗಿದೆ ಎಂಬ ಬಲವಾದ ಆರೋಪ ಕೇಳಿಬರುತ್ತಿದ್ದು, ಅಧಿಕಾರಿಗಳ ವಿಷೇಶ ತಂಡ ರಚಿಸಿ ಪರಿಶೀಲಿಸಿ ತಪ್ಪಿತಸ್ತ ಅಧಿಕಾರಿಗಳ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು. ಹಾನಿಯಾದ ಮನೆಗಳ ಕುರಿತು ಸಂತ್ರಸ್ತರು ಅಜರ್ಿ ಸಲ್ಲಿಸದಿದ್ದರೂ ಕೂಡಾ ಸಂಬಂದಿಸಿದ ಅಧಿಕಾರಿಗಳೆ ಸ್ಥಳಕ್ಕೆ ಬೇಟಿ ನೀಡಿ ಹಾನಿ ಕುರಿತು ಸರಕಾರಕ್ಕೆ ಮಾಹಿತಿ ಸಲ್ಲಿಸಿದ್ದರು. ಅದರಲ್ಲಿ ಕೆಲವು ಅಧಿಕಾರಿಗಳು ಮಾಡಿದ ತಪ್ಪಿನಿಂದ ಸಂತ್ರಸ್ತರಿಗೆ ಪೂತರ್ಿ ಹಣ ಸಂದಾಯವಾಗಿರುವುದಿಲ್ಲ. ಆದ್ದರಿಂದ ಕೆಲವು ಮನೆಗಳ ಕಾಮಗಾರಿ ಅರ್ದಕ್ಕೆ ನಿಂತಿರುವುದಾಗಿ ತಿಳಿಸಿದರಲ್ಲದೇ ಕುಂಬಾರಗಟ್ಟಿ ಸಂತ್ರಸ್ತರಿಗೆ ಸದ್ಯ ಮನೆಕಟ್ಟಲು ಹಣ ಮಂಜೂರು ಮಾಡಲಾಗುತ್ತಿದ್ದು, ಕುಂಬಾರಗಟ್ಟಿ ಕೆರೆ ಒಡೆದು ಅಪಾಯವಾಗುವುದಕ್ಕೀಂತ ಮುನ್ನ ಇಲ್ಲಿ ವಾಸಿಸುವ ನಿವಾಸಿಗಳಿಗೆ ಬೇರೆ ಕಡೆಗೆ ಸ್ಥಳಾಂತರಿಸಲಾಗುವುದು ಎಂದು ಹೇಳಿದರು.

     ಉಪತಹಶೀಲ್ದಾರ ಎಂ.ಎಸ್.ಪಾಟೀಲ, ಕಂದಾಯ ನಿರಿಕ್ಷಕ ಆರ್.ಎಂ.ನಾಯಕ, ಪುರಸಭೆ ಮುಖ್ಯಾಧಿಕಾರಿ ರೇಣುಕಾ ದೇಸಾಯಿ, ಎಂಜನೀಯರ ನಾಗರಾಜ ಮಿಜರ್ಿ, ಮುಖಂಡರಾದ ಆಂಜನೇಯ ಗುಡಗೇರಿ, ಈರಣ್ಣ ಚಿಗಳ್ಳಿ, ಮಂಜುನಾಥ ಹೊಸಮನಿ, ಸೇರಿದಂತೆ ಸಂತ್ರಸ್ತರು ಇದ್ದರು.