ಕುಷ್ಟಗಿ 23 : ಕೊಪ್ಪಳ ಲೋಕಸಭಾಕ್ಷೇತ್ರದ ವ್ಯಾಪ್ತಿಯ ಕುಷ್ಟಗಿ ಮತಕ್ಷೇತ್ರದಲ್ಲಿ ಕುಷ್ಟಗಿ ತಾಲೂಕ ಹಾಲುಮತ ಸಮಾಜ ಹಾಗೂ ಹಾಲುಮತ ಮಹಾಸಭಾ ಹಾಗೂ ಕನಕ ನೌಕರರ ಸಂಘ ಕುಷ್ಟಗಿ ಸಹಯೋಗದಲ್ಲಿ 2024 - 25 ನೇ ಸಾಲಿನ ಎಸ್‌ಎಸ್‌ಎಲ್ ಸಿ ಹಾಗೂ ಪಿ ಯು ಸಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಭಾಗಿಯಾಗಿ ಎಲ್ಲ ವಿದ್ಯಾರ್ಥಿಗಳಿಗೆ ಶುಭ ಕೋರಿ ಅವರ ಮುಂದಿನ ವಿದ್ಯಾಭ್ಯಾಸ ಉನ್ನತ ಮಟ್ಟಕ್ಕೆ ಹೋಗಲೆಂದು ಆಶಿಸಿದರು.
ಈ ಸಂದರ್ಭದಲ್ಲಿ ಕುಷ್ಟಗಿ ಮತಕ್ಷೇತ್ರದ ಶಾಸಕರಾದ ದೊಡ್ಡನಗೌಡ ಪಾಟೀಲ್‌ರವರು ಕನಕ ಗುರುಪೀಠದ ಶಾಖಾ ಮಠದಜಗದ್ಗುರು ಶಿವಸಿದ್ಧೇಶ್ವರ ಸ್ವಾಮಿಗಳು, ಮತ್ತೋರ್ವ ಸಹೋದರಇನ್ ಸೈಟ್‌ಐಎಎಸ್‌ಇನ್ಸ್ಟಿಟ್ಯೂಟ್ ನ ಸಂಸ್ಥಾಪಕರಾದ ಜಿ ಬಿ ವಿನಯ್‌ಕುಮಾರ್‌ರವರು, ಕುರಿ ಮತ್ತುಉಣ್ಣೆ ನಿಗಮದ ಮಾಜಿ ಅಧ್ಯಕ್ಷರಾದ ಶರಣು ತಳ್ಳಿಕೇರಿ ರವರು ಹಾಗೂ ಸಮಾಜದ ಹಿರಿಯರಾದ ಮಲ್ಲಣ್ಣ ಪಲ್ಲೆದ್, ಫಕೀರ್ಪ ಚಳ್ಳಿಗೇರಿ ರವರು ಕುಷ್ಟಗಿ ಹಾಲುಮತ ಮಹಾಸಭಾ ತಾಲೂಕು ಅಧ್ಯಕ್ಷರಾದ ಗೂರ್ಪಕುರಿ, ಮಂಜುನಾಥ ನಾಲಗಾರ್ ಹಾಗೂ ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು