ಮಹಾಲಿಂಗಪುರ 10: ವಿದ್ಯಾರ್ಥಿಗಳಲ್ಲಿ ತಾಂತ್ರಿಕ ಜ್ಞಾನದ ಜೊತೆ ಆಧ್ಯಾತ್ಮವೂ ಬೆರೆತರೆ ಪರಿಪೂರ್ಣ ಬದುಕು ಸಾಧ್ಯ ಎಂದು ಚಿಮ್ಮಡ ವಿರಕ್ತಮಠದ ಶ್ರೀ ಪ್ರಭು ಸ್ವಾಮೀಜಿ ಹೇಳಿದರು.
ಸ್ಥಳೀಯ ಕೆಎಲ್‌ಇ ಪಾಲಿಟೆಕ್ನಿಕ್‌ನಲ್ಲಿ ವಾರ್ಷಿಕ ಸ್ನೇಹ ಸಮ್ಮೇಳನ ಸಂಕ್ರಮಣ ಕಾರ್ಯಕ್ರಮದಲ್ಲಿ ಸಾನಿಧ್ಯ ವಹಿಸಿ ಮಾತನಾಡಿದರು. ಕಾಲೇಜಿನಲ್ಲಿ ಪಡೆದ ವಿದ್ಯೆ ಪಾವನವೆನಿಸಬೇಕಾದರೆ ವಿದ್ಯಾರ್ಥಿಗಳು ಉದ್ಯೋಗಿಯಾಗಿ ಇಲ್ಲವೇ ಉದ್ಯಮಿಯಾಗಿ ತನ್ನ ಕುಟುಂಬಕ್ಕೆ ಮತ್ತು ದೇಶಕ್ಕೆ ಆಧಾರವಾಗಬೇಕು ಎಂದರು.
ಮುಖ್ಯ ಅತಿಥಿ ದಂಪತಿ ಮಹೇಶ್ವರಿ ನಾಗರಾಳ ಮತ್ತು ಮಲ್ಲೇಶ ಪಾಟೀಲ ಮಾತನಾಡಿ, ಕಾಲೇಜಿನಲ್ಲಿ ವಿದ್ಯಾರ್ಥಿಯಾಗಿ ಕಲಿತ ವಿದ್ಯೆಗೂ, ಸಮಾಜದಲ್ಲಿ ಅಭ್ಯರ್ಥಿಯಾಗಿ ಎದುರಿಸುವ ಸವಾಲಿಗೂ ವ್ಯತ್ಯಾಸ ಇರುತ್ತದೆ. ಅಪ್‌ಡೇಟಾದರೆ ಮಾತ್ರ ಯಶಸ್ಸು ಸಾಧಿಸಲು ಸಾಧ್ಯ ಎಂದರು.
ಪ್ರಾಚಾರ್ಯ ಎಸ್.ಐ.ಕುಂದಗೋಳ ವರದಿ ವಾಚನ ಮಾಡಿದರು. ನಂತರ ಅಧ್ಯಕ್ಷತೆ ವಹಿಸಿ ಮಾತನಾಡಿ, ಕಾಲೇಜಿನ 17 ವರ್ಷಗಳ ಸಮರ್ಥ ಸಾರಥ್ಯದಲ್ಲಿ ಉಪನ್ಯಾಸಕರ ಸಮರಾ್ಣ ಮನೋಭಾವ, ವಿದ್ಯಾರ್ಥಿಗಳ ಶ್ರದ್ದೆಯನ್ನು ಕಂಡಿದ್ದೇನೆ. ಪ್ರತಿ ವರ್ಷ ಬಹುರಾಷ್ಟ್ರೀಯ ಕಂಪನಿಗಳ ಕ್ಯಾಂಪಸ್ ಸಂದರ್ಶನದಲ್ಲಿ ನಮ್ಮ ಕಾಲೇಜಿನ ವಿದ್ಯಾರ್ಥಿಗಳು ಶೇ.100 ರಷ್ಟು ಉದ್ಯೋಗ ಪಡೆದಿದ್ದು ಸಾರ್ಥಕತೆ ಉಂಟು ಮಾಡಿದೆ ಎಂದರು. ಎಸ್‌ಸಿಪಿ ಪ್ರೌಢಶಾಲೆಯ ಉಪಪ್ರಾಂಶುಪಾಲ ಬಿ.ಎನ್.ಅರಕೇರಿ ಮಾತನಾಡಿದರು.
ಗಣಿತ ವಿಷಯದಲ್ಲಿ ಶೇ.100 ಅಂಕ ಪಡೆದ ಮೊದಲ ವರ್ಷದ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು. ಅಂತಿಮ ವರ್ಷದ 205 ವಿದ್ಯಾರ್ಥಿಗಳಿಗೆ ಎಕ್ಸಿಕ್ಯೂಟಿವ್ ಫೈಲ್ ಉಚಿತವಾಗಿ ನೀಡಿ ಶುಭ ಹಾರೈಸಲಾಯಿತು. ಪೂಜ್ಯರನ್ನು ಮತ್ತು ಮುಖ್ಯ ಅತಿಥಿಗಳನ್ನು ಸನ್ಮಾನಿಸಲಾಯಿತು. ಇದಕ್ಕೂ ಮುನ್ನ ಗಣೇಶ ಮೂರ್ತಿಗೆ ಪೂಜೆ ಸಲ್ಲಿಸಿ ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ವಿದ್ಯಾರ್ಥಿನಿಯ ಭರತ ನಾಟ್ಯದೊಂದಿಗೆ ಕಾರ್ಯಕ್ರಮ ಆರಂಭವಾಯಿತು. ವಿದ್ಯಾರ್ಥಿಗಳು ಅನಿಸಿಕೆ, ಅನುಭವ ಹಂಚಿಕೊಂಡರು. ನಂತರ ವಿದ್ಯಾರ್ಥಿಗಳಿಂದ ಸಾಂಕ್ಕೃತಿಕ ಕಾರ್ಯಕ್ರಮ ಜರುಗಿದವು. ಎಲ್ಲರೂ ಹಾಲುಗ್ಗಿ ಅನ್ನಸಾರು ಭೋಜನ ಸವಿದರು. ಸ್ಥಾನಿಕ ಆಡಳಿತ ಮಂಡಳಿ ಸದಸ್ಯರಾದ ಅಶೋಕ ಅಂಗಡಿ, ಸಂತೋಷ ಹುದ್ದಾರ, ಪ್ರಾಚಾರ್ಯ ಎಸ್.ಐ.ಕುಂದಗೋಳ, ಸಾಂಸ್ಕೃತಿಕ ವಿಭಾಗದ ಮುಖ್ಯಸ್ಥೆ ಸವಿತಾ ಬೀಳಗಿ, ಕ್ರೀಡಾ ವಿಭಾಗದ ಮುಖ್ಯಸ್ಥ ಸುಭಾಸ್ ಮೂಶಿ, ವಂದನಾ ಪಸಾರ, ಅನಿಕೇತ ತಾರದಾಳೆ, ಗುರುರಾಜ ಅಥಣಿ, ಮಿನಾಜ ಅತ್ತಾರ, ನಿರ್ಮಲಾ ಫಕೀರಪುರ, ಉಮೇಶ ಹಾದಿಮನಿ, ಅಮೀತ ಜಾಧವ, ಮಂಜುನಾಥ ಅರಕೇರಿ, ಮಹಾದೇವಿ ಅಂಬಿ, ಈಶ್ವರ ಹೂಲಿ, ವಿಶಾಲ ಮೆಟಗುಡ ಇದ್ದರು.