ರೂ.8.75 ಕೋಟಿ ಕಾಮಗಾರಿಗಳಿಗೆ ಟೆಂಡರ್ ಪ್ರಕ್ರಿಯೆ ಮುಕ್ತಾಯ: ಶಾಸಕ ಸೈಲ್

ಕಾರವಾರ 16 : ಲೊಕೋಪಯೋಗಿ ಇಲಾಖೆಯ ಶಿಷರ್ಿಕೆ 5054ರಡಿಯಲ್ಲಿ 2018 ಮಾರ್ಚ 21 ಮಂಜೂರಾಗಿದ್ದ ಸುಮಾರು ರೂ.8.75 ಕೋಟಿ ಮೊತ್ತದ ಕಾರವಾರ-ಅಂಕೋಲಾ ತಾಲೂಕಗಳ ವಿವಿಧ ಕಾಮಗಾರಿಗಳಿಗೆ ಇದೀಗ ಟೆಂಡರ್ ಪ್ರಕ್ರಿಯೆ ಆರಂಭಗೊಂಡು, ಟೆಂಡರ್  ಮುಕ್ತಾಯ ಹಂತದಲ್ಲಿದೆ ಎಂದು ಕಾರವಾರ ವಿಧಾನಸಭಾ ಕ್ಷೇತ್ರದ  ಮಾಜಿ ಶಾಸಕ ಸತೀಶ  ಸೈಲ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುವರು.

  2018ರ  ಮಾರ್ಚನಲ್ಲಿಯೇ ಕಾರವಾರ ಅಂಕೋಲಾ ತಾಲೂಕಿನ 16  ಕಾಮಗಾರಿಗಳು ಮಂಜೂರಿಯಾಗಿದ್ದರೂ, ವಿಧಾನಸಭಾ ಚುನಾವಣೆ ಘೋಷಿಸಲ್ಪಟ್ಟಿದ್ದರಿಂದ ಇಲಾಖೆಯ ಆಡಳಿತಾತ್ಮಕ ಪ್ರಕ್ರಿಯೆ ಜರುಗುವಲ್ಲಿ 2019 ಜನೇವರಿತನಕ ತಡವಾಗಿತ್ತು ಎಂದಿದ್ದಾರೆ. ಹಾಗಾಗಿ ಈ ಎಲ್ಲಾ ಕಾಮಗಾರಿಗಳನ್ನು ಮಂಜೂರಿ ಮಾಡಿಸುವಲ್ಲಿ ತಮ್ಮ ಪ್ರಯತ್ನವಿದೆ ಎಂದು ಮಾಜಿ ಶಾಸಕ ಸೈಲ್ ಪರೋಕ್ಷವಾಗಿ ಹೇಳಿಕೊಂಡಂತಾಗಿದೆ. ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ, ಲೊಕೋಪಯೋಗಿ ಸಚಿವರಾಗಿದ್ದ  ಮಾಹಾದೇವಪ್ಪ ಅವರ ಸಹಕಾರ ಹಾಗೂ ತಮ್ಮ ಪ್ರಯತ್ನ  ಪುರಸ್ಕರಿಸಿ ಈ ಕಾಮಗಾರಿಗಳನ್ನು ಮಂಜೂರಿ ಮಾಡಿದ್ದರು. ಮಂಜೂರಾದ ಕಾಮಗಾರಿಗಳ ವಿವರ ಮತ್ತು ಮೊತ್ತ  ಇಂತಿದೆ. 

ಲೆಕ್ಕಶಿಷರ್ಿಕೆ - 5054-03-337-0-17-154 ಪ್ರಕಾರ ಸದಾಶಿವಗಡ- ಔರಾದ ರಾಜ್ಯ ಹೆದ್ದಾರಿ 34ರ ಕಿ.ಮೀ. 714ರಿಂದ 717ರವರೆಗೆ ಮರು ಡಾಂಬರೀಕರಣ - 50.0 ಲಕ್ಷ ರೂ. ಮಂಜೂರಾಗಿದೆ ಹಾಗೂ ಟೆಂಡರ್ ಮುಕ್ತಾಯ ಹಂತದಲ್ಲಿದೆ.  ಸದಸ್ಯದಲ್ಲೇ ಕಾಮಗಾರಿ ಆರಂಭವಾಗಲಿದೆ ಎಂದಿದ್ದಾರೆ.  ಅಂಕೋಲಾ ತಾಲೂಕಿನ ಗೋಕರ್ಣ-ವಡ್ಡಿ ರಾಜ್ಯ ಹೆದ್ದಾರಿಯಲ್ಲಿ ಕಿರುಸೇತುವೆ ಮತ್ತು ರಸ್ತೆ ಅಭಿವೃದ್ಧಿಗೆ 125.0 ಲಕ್ಷ ರೂ.,  ಜಿಲ್ಲಾ ಮುಖ್ಯ ರಸ್ತೆಗಳಾದ ಅಂಕೋಲಾ ತಾಲೂಕಿನ ಹೊಸಗದ್ದೆ-ಬೋಳೆ ರಸ್ತೆ ಸುಧಾರಣೆಗೆ - 60.0 ಲಕ್ಷ, ಮೀಸಲಿಡಲಾಗಿದೆ.  ಸುಂಕೇರಿ-ಕಡವಾಡ ರಸ್ತೆ ಅಗಲೀಕರಣ - 80.0 ಲಕ್ಷ,    ಮತ್ತು  ಹಟ್ಟಿಕೇರಿ-ಕೆಳಗಿನಬೇಣ ರಸ್ತೆ ಸುಧಾರಣೆ -  40.0 ಲಕ್ಷ, ಹಾಗೂ  ಗೋಟೆಗಾಳಿ-ಬರಗದ್ದೆ ಕೋಟೆ ರಸ್ತೆ ಸುಧಾರಣೆ -  50.0 ಲಕ್ಷ,. ಹಣವಿದೆ.   ಅಲಗೇರಿ - ಬೊಗ್ರಿಬೈಲ್ ರಸ್ತೆ ಸುಧಾರಣೆ -  40.0 ಲಕ್ಷ, ರೂ. ಗೋಟೆಗಾಳಿ - ಗೋಯರ್ ರಸ್ತೆ ಸುಧಾರಣೆಗೆ 40.0 ಲಕ್ಷ, ರೂ.,  ಬೆಲೇಕೇರಿ - ಮಂಜುಗುಣಿ ರಸ್ತೆಯ ಆಯ್ದ ಭಾಗಗಳಲ್ಲಿ ಸುಧಾರಣೆಗೆ - 35.0 ಲಕ್ಷ,.  ಶೇಜವಾಡಾ - ಜಾಂಬಾ - ಬೇಳೂರು ರಸ್ತೆ, ಕೆಳಸೇತುವೆ ಪುನರ್ ನಿಮರ್ಾಣ 60.0 ಲಕ್ಷ ಕಾಮಗಾರಿಗೆ ಇಲಾಖಾ ಎಸ್ಟೀಮೇಟ್ ರಿವೀವ್ಯೂ ಕಮೀಟಿಯಿಂದ ಅನುಮೋದನೆ ದೊರಕಬೇಕಿದೆ ಎಂದಿದ್ದಾರೆ.  ಕಿನ್ನರ್ - ಸಿದ್ದರ್ ರಸ್ತೆ, ಕಿನ್ನರ್ - ಮಳೆಪೂತ್ ರಸ್ತೆ ಮರು ಡಾಂಬರೀಕರಣ - 50.0 ಲಕ್ಷ, ,  ಅಗ್ರಗೋಣ - ಹೆಗ್ರೆಬೈಲ್ಕೇರಿ ರಸ್ತೆ ಸುಧಾರಣೆ - 35.0 ಲಕ್ಷ, ,  ಸುಂಕಸಾಳ - ಮೂಲೆಮನೆ ರಸ್ತೆ ಸುಧಾರಣೆ 35.0 ಲಕ್ಷ, ರೂಗಳು,  ಅಗಸೂರು-ಶಿರಗುಂಜಿ ರಸ್ತೆ ಸುಧಾರಣೆ - 35.0 ಲಕ್ಷ, ಮತ್ತು  ಹಿಲ್ಲೂರು - ನೆವಳ್ಸೆ, ಗುಡಿನೆವಳ್ಸೆ ರಸ್ತೆ ಸುಧಾರಣೆ - 35.0 ಲಕ್ಷ ರೂ,. ಹಾಗೂ  ಮಾಜಾಳಿಯ ಕೋಠಾರ - ಹೊಳೆಸಿಟ್ಟಾ ರಸ್ತೆ ಸುಧಾರಣೆಗೆ  - 35.0 ಲಕ್ಷ ರೂ. ಮೀಸಲಿದೆ.  ಶೇಟಗೇರಿ- ಹಡವಾ ರಸ್ತೆ ಸುಧಾರಣೆ - 35.0 ಲಕ್ಷ ರೂ. ತೆಗೆದಿಡಲಾಗಿದೆ. 

ಮೇಲಿನ ಎಲ್ಲ ರಸ್ತೆ ಕಾಮಗಾರಿಗಳ ಗ್ರಾಮಾಂತರ ಜನರ ಬಹುಕಾಲದ ಬೇಡಿಕೆಗಳಾಗಿದ್ದು, ಅವು ಇದೀಗ ಕಾಮಗಾರಿ ಆರಂಭವಾಗಲಿವೆ ಎಂದು ಮಾಜಿ ಶಾಸಕ ಸತೀಶ  ಸೈಲ್ ಹೇಳಿದ್ದಾರೆ.