ಕಾಶ್ಮೀರದಲ್ಲಿ ಉಗ್ರರ ಗುಂಡಿನ ದಾಳಿ: ಶಾಸಕ ರಾಜುಗೌಡ ಖಂಡನೆ

Terrorist firing in Kashmir: MLA Rajugowda condemns

ದೇವರಹಿಪ್ಪರಗಿ 23: ಜಮ್ಮು ಕಾಶ್ಮೀರದಲ್ಲಿ ಪ್ರವಾಸಿಗರ ಮೇಲೆ ನಡೆದ ಉಗ್ರರ ಗುಂಡಿನ ದಾಳಿ ಮಾಡಿರುವ ವಿಷಯ ಆಘಾತರಿಸಿದ್ದು ಕರ್ನಾಟಕದ ಮೂರು ಜನ ಸೇರಿ ಒಟ್ಟು 28 ಜನ ಮೃತಪಟ್ಟ ಘಟನೆಯನ್ನು ಶಾಸಕ ರಾಜುಗೌಡ ಪಾಟೀಲ ಕುದುರಿಸಾಲವಾಡಗಿ ತೀವ್ರವಾಗಿ ಖಂಡಿಸಿದ್ದಾರೆ.  

ಸುದ್ದಿಗಾರರ ಜೊತೆ ಬುಧವಾರದಂದು ಮಾತನಾಡಿದ ಅವರು, ಜಮ್ಮು ಕಾಶ್ಮೀರದ ಪಹಲ್ಗಾಮ್ ದಾಳಿ ಮಾನವೀಯತೆಗೆ ವಿರುದ್ಧವಾಗಿದೆ. ಭಯೋತ್ಪಾದನೆಗೆ ಯಾವುದೇ ಧರ್ಮವಿಲ್ಲ ಮತ್ತು ಈ ದಾಳಿಯು ಕಾಶ್ಮೀರದ ಶಾಂತಿ ಮತ್ತು ಏಕತೆಯನ್ನು ಹಾಳಮಾಡುವ ಪಿತೂರಿಯಾಗಿವೆ. ಇಂತಹ ಹೇಡಿತನದ ದಾಳಿಗಳನ್ನು ನಡೆಸುವವರನ್ನು ಸುಮ್ಮನೆ ಬಿಡಬಾರದು. ಪ್ರವಾಸಿಗರ ಮೇಲೆ ನಡೆದಿರುವ ಉಗ್ರರ ದಾಳಿಯನ್ನು ತೀವ್ರವಾಗಿ ಖಂಡಿಸುತ್ತೇನೆ. ಶಾಂತಿ ಸೌಹಾರ್ದದ ಭಾರತದಲ್ಲಿ ಇಂತಹ ಕೃತ್ಯಗಳು ಮರು ಕಳಿಸದಿರಲಿ. ಈ ಕೃತ್ಯ ಎಸಗಿದವರಿಗೆ ಕಠಿಣ ಶಿಕ್ಷೆ ಆಗಲಿ ಮತ್ತು ನಮ್ಮನ್ನು ಅಗಲಿದ ಎಲ್ಲಾ ಭಾರತೀಯರಿಗೆ ಭಾವಪೂರ್ಣ ಶ್ರದ್ಧಾಂಜಲಿ ಕೋರುತ್ತಾ ಎಲ್ಲಾ ಕುಟುಂಬಸ್ಥರಿಗೆ ಈ ದುಃಖವನ್ನು ಭರಿಸುವ ಶಕ್ತಿ ಹಾಗೂ ಧೈರ್ಯವನ್ನು ದೇವರು ನೀಡಲಿ. ಈ ಪೈಶಾಚಿಕ ಕೃತ್ಯ ಎಸಗುವವರ ವಿರುದ್ಧದ ಸರ್ಕಾರದ ಹೋರಾಟಕ್ಕೆ ಸದಾ ಬೆಂಬಲವಿರುತ್ತದೆ ಎಂದು ಹೇಳಿದರು.