ಶ್ರೀನಗರ, ನ.23- ಕಣಿವೆ ರಾಜ್ಯ ಕಾಶ್ಮೀರದಲ್ಲಿ ಭಯೋತ್ಪಾದಕರ ದಮನ ಕಾಯರ್ಾಚರಣೆ ಮತ್ತಷ್ಟು ಬಿರುಸಾಗಿದೆ.
ಜಮ್ಮು-ಕಾಶ್ಮೀರದಲ್ಲಿ ಭಾರತೀಯ ಸೇನೆ ಭರ್ಜರಿ ಕಾಯರ್ಾಚರಣೆ ನಡೆಸಿದ್ದು, ಏಕಕಾಲದಲ್ಲಿ ಆರು ಉಗ್ರರನ್ನು ಎನ್ಕೌಂಟರ್ನಲ್ಲಿ ಕೊಂದು ಹಾಕಿದೆ. ಹತರಾದ ಉಗ್ರರಿಂದ ಭಾರೀ ಪ್ರಮಾಣದ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಇತ್ತೀಚಿನ ದಿನಗಳಲ್ಲಿ ಸೇನೆ ನಡೆಸಿದ ಅತ್ಯುತ್ತಮ ಮಹತ್ವದ ಕಾಯರ್ಾಚರಣೆ ಇದಾಗಿದೆ ಎಂದು ಹಿರಿಯ ಸೇನಾಧಿಕಾರಿಯೊಬ್ಬರು
ತಿಳಿಸಿದ್ದಾರೆ.
ಅನಂತ್ನಾಗ್ ಜಿಲ್ಲೆಯ ಬಿಜ್ ಬೆಹರಾ ಪ್ರದೇಶದಲ್ಲಿ ಈ ಎನ್ಕೌಂಟರ್ ನಡೆದಿದ್ದು, ಈ ಪ್ರದೇಶದಲ್ಲಿ ಉಗ್ರರು ಅಡಗಿರುವ ಕುರಿತು ಖಚಿತ ಮಾಹಿತಿ ಪಡೆದ ಸೇನೆ ದಿಢೀರ್ ದಾಳಿ ನಡೆಸಿದೆ. ಈ ವೇಳೆ ಕನಿಷ್ಠ ಉಗ್ರರು ಸಾವಿಗೀಡಾಗಿದ್ದಾರೆ ಎಂದು ತಿಳಿದುಬಂದಿದೆ. ಉಗ್ರರು ಕೂಡ ಪ್ರತಿದಾಳಿ ನಡೆಸಿದ್ದು, ಸೇನಾಪಡೆಯಲ್ಲಿನ ಸಾವು-ನೋವುಗಳ ಕುರಿತು ಮಾಹಿತಿ ಲಭ್ಯವಾಗಿಲ್ಲ.
ಆದರೆ, ಘಟನಾ ಸ್ಥಳದಲ್ಲಿ ಮತ್ತಷ್ಟು ಉಗ್ರರಿರುವ ಶಂಕೆ ಇದ್ದು, ಎನ್ಕೌಂಟರ್ ಮುಂದುವರಿದಿದೆ ಎಂದು ಸೇನಾ ಮೂಲಗಳು ತಿಳಿಸಿವೆ. ಪ್ರಸ್ತುತ ಎನ್ಕೌಂಟರ್ ಈ ವರ್ಷದ ಅತೀ ದೊಡ್ಡ ಎನ್ಕೌಂಟರ್ ಎಂದು ಹೇಳಲಾಗುತ್ತಿದ್ದು, ಏಕಕಾಲದಲ್ಲೇ ಇಷ್ಟು ಪ್ರಮಾಣದ ಉಗ್ರರು ಹತರಾಗಿರುವುದು ಇದೇ ಮೊದಲು ಎಂದು ಹೇಳಲಾಗುತ್ತಿದೆ.
ಇನ್ನು ಕಳೆದ ಮಂಗಳವಾರ ಇದೇ ಕಾಶ್ಮೀರದಲ್ಲಿ ಅಪರಿಚಿತ ಶಸ್ತ್ರಧಾರಿಗಳು ಹುರಿಯತ್ ನಾಯಕ ಹಝಿಫುಲ್ಲಾ ಮಿರ್ ಅವರನ್ನು ಗುಂಡಿಟ್ಟು ಕೊಂದು ಹಾಕಿದ್ದರು. ಇದು ದುಷ್ಕಮರ್ಿಗಳ ಕೃತ್ಯವೋ ಅಥವಾ ಉಗ್ರರ ದಾಳಿಯೋ ಇನ್ನೂ ತಿಳಿದಿಲ್ಲ. ಈ ಬಗ್ಗೆ ಪೊಲೀಸ್ ತನಿಖೆ ಪ್ರಗತಿಯಲ್ಲಿದೆ.
ಇದರ ಬೆನ್ನಲ್ಲೇ ಸೇನೆ ಅನಂತ್ನಾಗ್ ಜಿಲ್ಲೆಯಲ್ಲಿ ಭರ್ಜರಿ ಕಾಯರ್ಾಚರಣೆ ನಡೆಸಿದೆ.
ಈ ಪ್ರದೇಶಕ್ಕೆ ನುಸುಳಿರಬಹುದಾದ ಮತ್ತಷ್ಟು ಉಗ್ರರ ನಿಗ್ರಹಕ್ಕಾಗಿ ಸೇನೆ ಇಡೀ ಸ್ಥಳವನ್ನು ಸುತ್ತುವರಿದು ತೀವ್ರ ಶೋಧ ಮುಂದುವರಿಸಿದೆ.