ಲೋಕದರ್ಶನ ವರದಿ
ಗದಗ 10: ಮಕ್ಕಳು ಆರೋಗ್ಯವಾಗಿರಲು ಸ್ಕೇಟಿಂಗ್, ಕರಾಟೆ ಅಂತಹ ಹವ್ಯಾಸಿಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಡಿಎಸ್ಪಿ ಎಸ್.ಕೆ.ಪ್ರಲ್ಹಾದ ಅವರು ಹೇಳಿದರು.
ನಗರದ ಅಂಬೇಡ್ಕರ್ ಭವನದ ಎದುರಿಗೆ ಇತ್ತೀಚಿಗೆ ಜರುಗಿದ ಇನ್ಸ್ಪೈರ್ ಸ್ಪೋಟ್ರ್ಸ ಅಸೋಶಿಯೇಶನ್ ಸಹಯೋಗದಲ್ಲಿ ಸ್ಕೇಟಿಂಗ್ ಹಾಗೂ ಕರಾಟೆ ತರಬೇತಿ ಕೇಂದ್ರವನ್ನು ಉದ್ಘಾಟಿಸಿ ಅವರು ಮಾತನಾಡಿ, ಉತ್ತಮ ಕ್ರೀಡಾಪಟುಗಳಿಗೆ ಪೊಲೀಸ್ ಇಲಾಖೆಯಲ್ಲಿ ಅನೇಕ ಉದ್ಯೋಗ ಅವಕಾಶಗಳಿವೆ ತರಬೇತಿ ಶಿಬಿರಗಳನ್ನು ಸದುಪಯೋಗ ಪಡೆಸಿಕೊಳ್ಳಬೇಕು ಎಂದು ಹೇಳಿದರು.
ಕಳಸಾಪೂರ ಓಂಕಾರೇಶ್ವರ ಹಿರೇಮಠದ ಫಕ್ಕಿರೇಶ್ವರ ಮಹಾಸ್ವಾಮಿಗಳು ಸಾನಿಧ್ಯವಹಿಸಿದ್ದರು. ಈ ಸಂದರ್ಭದಲ್ಲಿ ಹಿರಿಯರಾದ ಫಕ್ಕಿರಪ್ಪ ಹೆಬಸೂರ, ಪರಶುರಾಮ ಹಬೀಬ, ಮಂಜುಳಾ ದಾನಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು. ತರಬೇತುದಾರ ಮಂಜುನಾಥ ಕುರಿ ಕಾರ್ಯಕ್ರಮ ನಿರೂಪಿಸಿದರು.