ಬೆಳಗಾವಿ: ದಾನ ದಾನಗಳಲ್ಲಿ ಶ್ರೇಷ್ಠದಾನ ರಕ್ತದಾನ

ಲೋಕದರ್ಶನ ವರದಿ

ಬೆಳಗಾವಿ 14:  ದಾನ ದಾನಗಳಲ್ಲಿ ಶ್ರೇಷ್ಠದಾನ ರಕ್ತದಾನ, ರಕ್ತವು ನಮ್ಮ ಶರೀರದ ಅವಿಭಾಜ್ಯ ಅಂಗವಾಗಿದ್ದು ರಕ್ತಕ್ಕೆ ಪಯರ್ಾಯವಾದುದು ಬೇರೊಂದಿಲ್ಲ ಎಂದು ಯು ಎಸ್ ಎಮ್ ಕೆ ಎಲ್ ಇ ಯ ನಿದರ್ೇಶಕ ಡಾ. ಹೆಚ್ ಬಿ ರಾಜಾಶೇಖರ ಮಾತನಾಡುತ್ತಿದ್ದರು ಅವರು ಇಂದು ನಗರದ ಕೆ ಎಲ್ ಇ ಶತಮಾನೋತ್ಸವ ಚಾರಿಟೆಬಲ್ ಆಸ್ಪತ್ರೆಯ ರಕ್ತ ಭಂಡಾರದಲ್ಲ್ಲಿ ವಿಶ್ವ ರಕ್ತದಾನಿಯ ದಿನಾಚರಣೆಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಇಂದು ನಮ್ಮ್ ವೈದ್ಯ ವಿಜ್ಞಾನವು ನಮ್ಮ  ಶರೀರದಲ್ಲಿರುವ ಯಾವುದೇ ಅಂಗವನ್ನು ಕೃತಕವಾಗಿ ಅಥವಾ ಕಸಿ ವಿಧಾನದಿಂದ ಮರುಜೋಡಿಸಬಹುದಾಗಿದೆ ಆದರೆ ರಕ್ತವು ಒಂದು ವಿಶಿಷ್ಟಗುಣವನ್ನು ಹೊಂದಿದ್ದು ಇದನ್ನು ಯಾವುದೇ ರೀತಿಯ ವಿಧಾನಗಳಿಂದ ತಯಾರಿಸಲು ಸಾಧ್ಯವಿಲ್ಲ ಆದ್ದರಿಂದ ಸಶಕ್ತ ಹೆಣ್ಣು ಗಂಡು ಎಂಬ ಭೇದವಿಲ್ಲದೆ ಎಲ್ಲರೂ ರಕ್ತದಾನ ಮಾಡಿ ಇನ್ನೊಂದು ಜೀವ ಉಳಿಸಲು ಕಾರಣಕರ್ತರಾಗಿ ಎಂದು ಕರೆ ನೀಡಿದರು. 

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕೆ ಎಲ್ ಇ ಶತಮಾನೋತ್ಸವ ಚಾರಿಟೆಬಲ್ ಆಸ್ಪತ್ರೆಯ ನಿದರ್ೇಶಕ ಡಾ ಎಸ್ ಸಿ ಧಾರವಾಡ ಮಾತನಾಡುತ್ತ ಅಪಘಾತ,  ಹೆರಿಗೆ, ಥಲೆಸಿಮಿಯಾ ಹಾಗೂ ಶಸ್ತ್ರಚಿಕಿತ್ಸೆ ಮುಂತಾದ ಸಮಸ್ಯೆಗಳಿಂದ ಇಂದು ನಮ್ಮ ದೇಶದಲ್ಲಿ  ಪ್ರತಿ ನಿಮಿಷಕ್ಕೆ ಇಬ್ಬರಂತೆ ಅಸುನೀಗುತ್ತಿರುವದು ನಿಜಕ್ಕೂ ಖೇದಕರವೆನ್ನಿಸುತ್ತದೆ. ಶರವೇಗದಲ್ಲಿ ಅಭಿವೃದ್ದಿಹೊಂದುತ್ತಿರುವ ಜನಸಂಖ್ಯೆಗನುಗುಣವಾಗಿ ಪ್ರತಿಯೊಬ್ಬ ಅರ್ಹ ವ್ಯಕ್ತಿ ರಕ್ತದಾನಮಾಡಿದ್ದಾದರೆ  ಇಂತಹ ಸಾವು ನೋವುಗಳನ್ನು ತಡೆಹಿಡಿಯಬಹುದಾಗಿದೆ ಎಂದು ತಿಳಿ ಹೇಳಿದರು. 

ಈ ಸಂದರ್ಭದಲ್ಲಿ ಆಸ್ಪತ್ರೆಯ ಹಿರಿಯ ವೈದ್ಯ ಡಾ. ಬಿ ಎಸ್ ಮಹಾಂತಶೆಟ್ಟಿ, ಹಿರಿಯ ಶಸ್ತ್ರಚಿಕಿತ್ಸಜ್ಞ ಡಾ ಅಶೋಕ ಪಾಂಗಿ, ಡಾ. ಅಶೋಕ ಅಲತಗಿ, ರಕ್ತ ಭಂಡಾರ ಅಧಿಕಾರಿ ಡಾ. ವಸಂತ ಶಿಂಧೆ ವೈದ್ಯಕೀಯ ಹಾಗೂ ವೈದ್ಯಕೀಯೇತರ ಸಿಬ್ಬಂದಿ ಉಪಸ್ಥಿತರಿದ್ದರು. ಈ ದಿನದ ಅಂಗವಾಗಿ 25 ಕ್ಕೂ ಅಧಿಕ ದಾನಿಗಳು ರಕ್ತದಾನ ಮಾಡಿದರು.