ಕಾಗವಾಡ 11: ಕಳೆದ ಸನ್ 2017-18ನೇ ವರ್ಷದಲ್ಲಿ ಕಬ್ಬು ನುರಿಸಿದ ಕಾಗವಾಡ ತಾಲೂಕಿನ ಕಾಗವಾಡ, ಕೆಂಪವಾಡ ಮತ್ತು ಉಗಾರ ಸಕ್ಕರೆ ಕಾಖರ್ಾನೆ ವ್ಯವಸ್ಥಾಪಕರು ರೈತರ ಕಬ್ಬುವನ್ನು ತಗೆದುಕೊಂಡು ನುರಿಸಿದ್ದಾರೆ. ಆದರೆ ಫೆಬ್ರುವರಿ 2017ರ ನಂತರ ಹಂಗಾಮ ಸ್ಥಗಿತಗೊಳ್ಳುವರೆಗೆ ನುರಿಸಿದ ಕಬ್ಬಿಗೆ ಈ ವರೆಗೆ ರೈತರಿಗೆ ಬಿಲ್ ನೀಡದೆ, ಅನ್ಯಾಯ ಮಾಡಿದ್ದಾರೆ. ಇದನ್ನು ಕರವೆ ಕಾಗವಾಡ ಘಟಕದ ಕಾರ್ಯಕರ್ತರು ಖಂಡಿಸಿ, ರಸ್ತೆ ತಡೆದು, ಪ್ರತಿಭಟನೆ ಮಾಡಿದರು.
ಶುಕ್ರವಾರ ರಂದು ಕಾಗವಾಡದ ರಾಣಿ ಚೆನ್ನಮ್ಮ ವೃತ್ತದಲ್ಲಿ ತಾಲೂಕಾ ಕರವೆ ಆಧ್ಯಕ್ಷ ಸಿದ್ಧು ಒಡೆಯರ್ ಇವರ ನೇತೃತ್ವದಲ್ಲಿ ಕಾರ್ಯಕರ್ತರು ಉಗ್ರವಾದ ಪ್ರತಿಭಟನೆ ಕೈಗೊಂಡರು.
ಕಾಗವಾಡ ತಾಲೂಕಿನ ಕಬ್ಬು ಬೆಳೆಗಾರ ರೈತರು ಕಳೆದ ವರ್ಷದ ಹಂಗಾಮಿನಲ್ಲಿ ಕಾಗವಾಡದ ದಿ ಶಿರಗುಪ್ಪಿ ಶುಗರ್ ವಕ್ಸರ್್, ಉಗಾರದ ದಿ ಉಗಾರ ಶುಗರ್ ವಕ್ಸರ್್ ಮತ್ತು ಕೆಂಪವಾಡದ ಅಥಣಿ ಫಾರ್ಮರ್ಸ್ ಶುಗರ್ ವಕ್ಸರ್್ 3 ಸಕ್ಕರೆ ಕಾಖರ್ಾನೆಗಳು ಸುಮಾರು 30 ಲಕ್ಷ ಟನ್ ಕಬ್ಬು ನುರಿಸಿದ್ದಾರೆ. ಇದರಲ್ಲಿಯ ಕೆಲ ರೈತರಿಗೆ ಫೆಬ್ರುವರಿ 15ರ ವರೆಗೆ ರೈತರಿಗೆ ಬಿಲ್ಲ್ ಪಾವತಿಸಿದ್ದಾರೆ. ಉಳಿದ ರೈತರಿಗೆ ಹಣ ನೀಡದೆ, ಅನ್ಯಾಯ ಮಾಡಿದ್ದಾರೆ.
ಕೃಷ್ಣಾ ಕಾಖರ್ಾನೆ ಬಿಲ್ಲ್ ನೀಡಿದೆ:
ಅಥಣಿ ತಾಲೂಕಿನ ಎಕೈಕೆ ದಿ ಕೃಷ್ಣಾ ಸಕ್ಕರೆ ಕಾಖರ್ಾನೆ ರೈತರು ಪುರೈಸಿದ ಕಳೇದ ವರ್ಷದ ಕಬ್ಬಿಗೆ 2950 ಹಣ ನೀಡಿದ್ದಾರೆ. ಇದರಿಂದ ರೈತರ ವಿಶ್ವಾಸ ಗಳಿಸಿಕೊಂಡಿದ್ದಾರೆ ಎಂದು ಸಿದ್ಧು ಒಡೆಯರ್ ಹೇಳಿದರು.
2900 ಬಿಲ್ಲ ನೀಡಬೇಕು:
ಸಕ್ಕರೆ ಕಾಖರ್ಾನೆಗಳು ಕೇಂದ್ರ ಸರಕಾರ ನಿಗಧಿ ಪಡೆಸಿದ ಬೆಂಬಲ ಬೆಲೆ 2900 ವಾಗಿದೆ. ಆದರೆ ಈ ಕಾಖರ್ಾನೆಗಳು ಪ್ರತಿ ಟನ್ ಕಬ್ಬಿಗೆ 2000 ವರೆಗೆ ಹಣ ನೀಡಿದ್ದಾರೆ. ಸರಕಾರ ನಿಗಧಿ ಪಡೆಸಿದ 2900 ರುಪಾಯಿ ಆಗಸ್ಟ್ 30ರ ವರೆಗೆ ನೀಡಲೇಬೇಕು ಎಂಬ ಬೇಡಿಕೆ ಮನವಿ ಕಾಗವಾಡ ಉಪತಹಶಿಲ್ದಾರ ವಿಜಯ್ ಚೌಗುಲೆ ಇವರಿಗೆ ನೀಡಿದರು.
ಬರುವ ಹಂಗಾಮ ಪ್ರಾರಂಭಿಸಲು ಬಿಡುವದಿಲ್ಲಾ:
ಕಬ್ಬು ಬೆಳೆಗಾರ ರೈತರಿಗೆ ಕಳೇದ ಹಂಗಾಮಿನ ಬಿಲ್ಲ್ ಪಾವತಿಸದೆ ಇದಲ್ಲಿ ಸನ್ 2018-19ನೇ ಹಂಗಾಮ ಪ್ರಾರಂಭಿಸಲು ಬಿಡುವದಿಲ್ಲಾ ಎಂಬ ಎಚ್ಚರಿಕೆ ಮನವಿ ಮುಖಾಂತರ ಸಕ್ಕರೆ ಕಾಖರ್ಾನೆಗಳಿಗೆ ನೀಡಿದ್ದಾರೆ.
ಕಾಗವಾಡ ತಾಲೂಕಿನ ಕರವೆ ಆಧ್ಯಕ್ಷ ಸಿದ್ಧು ಒಡೆಯರ್, ಯುವ ಘಟಕಾಧ್ಯಕ್ಷ ಪ್ರವೀನ್ ಪಾಟೀಲ, ರೈತ ಘಟಕಾಧ್ಯಕ್ಷ ಸಚೀನ ಕುರುಂದವಾಡೆ, ಹಜಗೌಡಾ ಪಾಟೀಲ, ಶಿವಾನಂದ ನವನಿಹಳ್, ಪ್ರಶಾಂತ ನರವಾಡೆ, ಮಾಂತೇಷ ಪಾಟೀಲ, ಮುಕೇಶ್ ಮೇಟ್ಟಗೆರಿ, ದಯಾನಂದ್ ಪಾಟೀಲ, ಮನೋನ್ ಬಡಿಗೆರ್ ಸೇರಿದಂತೆ ಕಾಗವಾಡ ತಾಲೂಕಿನಿಂದ ಅನೇಕ ಕಾರ್ಯಕರ್ತರು ಪಾಲ್ಗೊಂಡಿದ್ದರು.