ರಾಯಬಾಗ 17: ತಾಲೂಕಿನ ಬೊಮ್ಮನಾಳ ಗ್ರಾಮದ ಭೈರೇಶ್ವರ, ಹನುಮಾನ ಮತ್ತು ಮಲ್ಲಿಕಾರ್ಜುನ ದೇವರ ಜಾತ್ರೆಯು ವಿಜೃಂಭಣೆಯಿಂದ ಜರುಗಿತು.
ಗುರುವಾರ ವಿವಿಧ ಶರ್ಯತ್ತುಗಳು ಜರುಗಿದವು. ವಿಜೇತರಿಗೆ ಕಮಿಟಿಯಿಂದ ಬಹುಮಾನ ವಿತರಿಸಲಾಯಿತು. ಕುದುರೆ ಗಾಡಿ ಶರ್ಯತ್ತಿನಲ್ಲಿ ಕುಡಚಿಯ ಡೌನ ಪ್ರಥಮ, ಹುಬರಟ್ಟಿಯ ಅಶೋಕ ದ್ವಿತೀಯ, ಅಂಕಲಿಯ ಸಾಗರ ಮೇಸ್ತ್ರಿ ತೃತೀಯ ಹಾಗೂ ಶೇಡಷಾಳದ ಲಕ್ಷ್ಮಣ ನಾಯಿಕ ನಾಲ್ಕನೆಯ ಬಹುಮಾನ ಪಡೆದರು. ಸಾಯಕಲ್ ಶರ್ಯತ್ತಿನಲ್ಲಿ ಇಚಲಕರಂಜಿಯ ಬಾಳು ಹೀರೆಮಠ ಪ್ರಥಮ, ಬಡಿಗವಾಡದ ಮಾರುತಿ ದ್ವಿತೀಯ, ಕರಣ ಲಮಾಣಿ ತೃತೀಯ ಬಹುಮಾನ ಪಡೆದರು. ಚಿ
ಕುದುರೆ ಶರ್ಯತ್ತಿನಲ್ಲಿ ಚಿಂಚಲಿಯ ಸುರೇಶ ಪ್ರಥಮ, ಭಿರಡಿಯ ಮಹಾದೇವ ಈಟೇಕರಿ ದ್ವಿತೀಯ, ಚಿಂಚಲಿಯ ಕುಮಾರ ಪೂಜಾರಿ ತೃತೀಯ ಬಹುಮಾನ ಪಡೆದರು.ಓಡುವ ಶರ್ಯತ್ತಿನಲ್ಲಿ ಸುಲ್ತಾನಪೂರದ ಅಸ್ಲಾಂ ಮುಲ್ತಾನಿ ಪ್ರಥಮ, ಜಮಖಂಡಿಯ ನಾಗರಾಜ ದ್ವಿತೀಯ, ಸವಸುದ್ದಿಯ ಕಲ್ಲಪ್ಪ ನಾಯಿಕ ತೃತೀಯ ಬಹುಮಾನ ಪಡೆದರು.
ಬಹುಮಾನ ವಿತರಣೆ ಕಾರ್ಯಕ್ರಮದಲ್ಲಿ ರಮೇಶ ಪಾಟೀಲ, ಸತ್ಯಗೌಡ ಪಾಟೀಲ, ಸತೀಶ ಬಾಗಿ, ನಿಂಗೌಡ ಪಾಟೀಲ, ಅಲಿಸಾಬ ನದಾಫ, ಅರುಣ ವಡ್ಡರ, ಶಿವಗೌಡ ಪಾಟೀಲ, ರಾಮಗೌಡ ಪಾಟೀಲ, ಎನ್.ಎಸ್.ಪಾಟೀಲ, ಕಲ್ಲಪ್ಪ ಪಾಟೀಲ ಸೇರಿ ಅನೇಕರು ಇದ್ದರು.